'ಕೈ' ಸ್ವಾರ್ಥಕ್ಕೆ ಗುರುಮಠಕಲ್ ಕ್ಷೇತ್ರ ಬಲಿ: ಡಿಸಿಎಂ ಈಶ್ವರಪ್ಪ
ಕ.ಪ್ರ.ವಾರ್ತೆ , ಯಾದಗಿರಿ , ಏ. 30
ಕ್ಷೇತ್ರದ ಮುಗ್ಧ ಜನತೆಯನ್ನು ಕಾಂಗ್ರೆಸ್ನವರು ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಬಳಸಿಕೊಂಡಿದ್ದಾರೆ. ಕ್ಷೇತ್ರದಿಂದ ಇದುವರೆಗೆ ಆಯ್ಕೆಯಾದವರು ರಾಜಕೀಯ ಬೆಳವಣಿಗೆ ಹೊಂದಿದ್ದಾರೆಯೇ ಹೊರತು ಕ್ಷೇತ್ರದ ಜನರ ಸಮಸ್ಯೆ ಆಲಿಸಿಲ್ಲ ಎಂದು ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಆರೋಪಿಸಿದರು.
ಗುರುಮಠಕಲ್ ಪಟ್ಟಣದಲ್ಲಿ ಮಂಗಳವಾರ ಬಿಜೆಪಿ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಅಭ್ಯರ್ಥಿ ಗಿರೀಶ ಮಟ್ಟಣ್ಣವರ ಪರ ಯಾಚಿಸಿ ಅವರು ಮಾತನಾಡಿದರು. ಈ ಕ್ಷೇತ್ರದಲ್ಲಿ ಬಡವರು ಬಡವರಾಗಿಯೇ ಇದ್ದಾರೆ. ನಿಮ್ಮಿಂದ ಆರಿಸಿ ಹೋದವರು ಅಭಿವೃದ್ಧಿ ಕಂಡಿದ್ದಾರೆ. 5 ದಶಕಗಳಿಂದ ಕ್ಷೇತ್ರವನ್ನು ಪ್ರತಿನಿಧಿಸಿದವರು ಅಭಿವೃದ್ಧಿ ಮಾಡಿದ್ದರೆ ಇಲ್ಲಿಯನ ಸಾವಿರಾರು ಜನತೆ ಗುಳೆ ಹೋಗುತ್ತಿರಲಿಲ್ಲ. ಇಲ್ಲಿಯ ಮುಗ್ಧ ಜನರಿಗೆ ಮೋಸ ಮಾಡಿದ ಕಾಂಗ್ರೆಸ್ಸಿಗರಿಗೆ ಅವರ ಶಾಪ ತಟ್ಟದೇ ಇರುವುದಿಲ್ಲ ಎಂದರು.
ವಿದ್ಯುತ್ ಸಮಸ್ಯೆಗೆ ಕೇಂದ್ರ ಹೊಣೆ: ರಾಜ್ಯದಲ್ಲಿ ಸಮರ್ಪಕ ವಿದ್ಯುತ್ ಸರಬರಾಜುಗೊಳ್ಳದೇ ಇರುವುದಕ್ಕೆ ಕೇಂದ್ರ ಸರ್ಕಾರವೇ ನೇರ ಹೊಣೆ. ಕಲ್ಲಿದ್ದಲು ಕೊಡಿ ಎಂದರೆ ಅದರಲ್ಲೂ ಕೇಂದ್ರ ರಾಜಕೀಯ ನಡೆಸಿತು. ಸಮರ್ಪಕ ವಿದ್ಯುತ್ ಪೂರೈಕೆಯಾದರೆ ಜನ ಎಲ್ಲಿ ಬಿಜೆಪಿ ಜೊತೆ ಹೋಗುತ್ತಾರೋ ಎಂಬ ಭಯ ಕಾಂಗ್ರೆಸ್ಸಿಗರಿಗೆ ಇದೆ. ಕಾಂಗ್ರೆಸ್ಸಿಗರು ಅವರವರೇ ಸಿಎಂ ತೀರ್ಮಾನ ಕೈಗೊಳ್ಳುತ್ತಾರೆ. ಸಿದ್ದರಾಮಯ್ಯ, ಪರಮೇಶ್ವರ ಸೇರಿದಂತೆ ಅನೇಕರು ಸಿಎಂ ಖುರ್ಚಿಗಾಗಿ ಈಗಾಗಲೇ ಪೈಪೋಟಿ ಶುರು ಮಾಡಿದ್ದಾರೆ. ಸಿದ್ದರಾಮಯ್ಯ ಅಧಿಕಾರ ಇದ್ದಲ್ಲಿ ಮಾತ್ರ ಹೋಗುವವರು ಎಂದು ಟೀಕಿಸಿದರು.
ಈಗ ಬಿಜೆಪಿ ಪರಿಶುದ್ಧ: ಈಗ ಬಿಜೆಪಿ ಪರಿಶುದ್ಧ ಪಕ್ಷವಾಗಿದೆ. ಭ್ರಷ್ಟಾಚಾರಿಗಳನ್ನು ಹೊರಕ್ಕೆ ಕಳುಹಿಸಲಾಗಿದೆ. ಕ್ಷೇತ್ರಕ್ಕೂ ಯುವ ಹೋರಾಟಗಾರ ಮಟ್ಟಣ್ಣವರ ಅವರನ್ನು ಕಣಕ್ಕಿಳಿಸಲಾಗಿದೆ. ಉಂಗುರ ಹಾಕಿದ ಬೆರಳಿನಲ್ಲೇ ಬಿಜೆಪಿ ಬಟನ್ ಒತ್ತುವ ಮೂಲಕ ಮಟ್ಟಣ್ಣವರ್ ಅವರನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಬಿಜೆಪಿ ಅಭ್ಯರ್ಥಿ ಗಿರೀಶ ಮಟ್ಟಣ್ಣವರ್ ಮಾತನಾಡಿ, ರಾಜ್ಯದ 224 ಕ್ಷೇತ್ರಗಳಲ್ಲಿ ಇದು ಹಿಂದುಳಿದ ಕ್ಷೇತ್ರವಾಗಿದೆ. ಕೂಲಿ-ನಾಲಿ ಮಾಡಲು ಗುಳೆ ಹೋಗುವವವರು ಸಂಖ್ಯೆ ಹೆಚ್ಚಾಗಿದೆ. ನಾನೊಬ್ಬ ಹೋರಾಟಗಾರ. ರಘುನಾಥ ಮಲ್ಕಾಪುರೆ, ದೇವೇಂದ್ರನಾಥ ನಾದ, ಬಸವರಾಜ್ಪಗೌಡ ಯಲ್ಹೇರಿ, ದೇವರಾಜ ನಾಯಕ, ಮಲ್ಲೇಶಪ್ಪ ಬೇಲಿ, ಕೆ.ದೇವದಾಸ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

