ಜೈಕರವೇ ಸಂಘಟನೆ, ತತ್ವ- ಸಿದ್ಧಾಂತಗಳಿಗೆ ಬದ್ಧರಾಗಿ: ಶಿವುಮಾನಯ್ಯ
ಸುರಪುರ: ಜೈ ಕರ್ನಾಟಕ ರಕ್ಷಣಾ ವೇದಿಕೆಯ ನೂತನ ಪದಾಧಿಕಾರಿಗಳು ಸಂಘಟನೆಯ ತತ್ವ, ಸಿದ್ಧಾಂತಗಳಿಗೆ ಬದ್ಧರಾಗಿರಬೇಕೆಂದು ಸಂಘಟನೆ ತಾಲೂಕಾಧ್ಯಕ್ಷ ಶಿವುಮಾನಯ್ಯ ನಾಯಕ ದೇವರಗೋನಾಲ ಕರೆ ನೀಡಿದರು.
ಇಲ್ಲಿಯ ಪ್ರಭು ಕಾಲೇಜಿನಲ್ಲಿ ವಿದ್ಯಾರ್ಥಿ ಘಟಕದ ಪದಾಧಿಕಾರಿಗಳ ನೇಮಕ ಸಮಾರಂಭದಲ್ಲಿ ಮಾತನಾಡಿ, ಜೈಕರವೇಗೆ ತಾಲೂಕಿನಾದ್ಯಂತ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಜನರು ಸ್ವಯಂಪ್ರೇರಿತರಾಗಿ ಸಂಘಟನೆ ಸೇರುತ್ತಿದ್ದು ಎಲ್ಲರಿಗೂ ಸ್ವಾಗತವಿದೆ. ಆದರೆ ತತ್ವಾದರ್ಶಗಳಿಗೆ ಬದ್ಧರಾಗಿರಬೇಕು ಎಂದು ಹೇಳಿದರು. ಸಂಘಟನೆ ಕನ್ನಡ ನೆಲ, ಜಲ, ಭಾಷೆಯ ಹೋರಾಟದ ಜೊತೆಗೆ ಜನರ ಸಮಸ್ಯೆಗಳಿಗೂ ಸ್ಪಂದಿಸಲಿದೆ. ಸರ್ಕಾರದ ಯೋಜನೆಗಳನ್ನು ಜನರತ್ತ ತಲುಪಿಸುವಲ್ಲಿ ಆದ ಲೋಪದೋಷಗಳನ್ನು ಎತ್ತಿ ತೋರಿಸುತ್ತದೆ. ಈಗ ವಿದ್ಯಾರ್ಥಿ ಘಟಕದ ರಚನೆಯಾಗಿದ್ದು, ಮುಂದೆ ಮಹಿಳಾ ಘಟಕದ ರಚನೆ ಮಾಡುತ್ತೇವೆಂದು ನುಡಿದರು.
ಇದೇ ವೇಳೆ ವಿದ್ಯಾರ್ಥಿ ಘಟಕದ ಅಧ್ಯಕ್ಷರಾಗಿ ಶರಣಬಸಪ್ಪ ನಾಯಕ ಮತ್ತು ಉದಯಕುಮಾರ ನಾಯಕ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು. ನಗರ ಘಟಕ ಅಧ್ಯಕ್ಷ ಭೀಮು ನಾಯಕ ಮಲ್ಲಿಬಾವಿ, ಮಾನಪ್ಪ (ಬಾಬು) ವಾಗಣಗೇರಾ, ದೇವಿಂದ್ರಪ್ಪ ಮಾಲಿ ಪಾಟೀಲ್ ಇದ್ದರು.
ಉಪಾಧ್ಯಕ್ಷ ವೆಂಕಟೇಶ ಚಟ್ನಳ್ಳಿ, ರವಿ ಕಡದರಾಳ, ವೆಂಕಟೇಶ ಕವಡಿಮಟ್ಟಿ, ಇಮಾಮಸಾಬ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

