ಶುದ್ಧ ನೀರು, ಒಳಚರಂಡಿ ವ್ಯವಸ್ಥೆ; 39 ಕೋಟಿ ವೆಚ್ಚದ ಯೋಜನೆ
ಚಿಂಚೋಳಿ: ಕೆಲವು ದಿನಗಳಿಂದ ಚಂದಾಪುರದಲ್ಲಿ ಕಾಣಿಸಿಕೊಂಡಿರುವ ವಾಂತಿ- ಭೇದಿ ಪ್ರಕರಣದ ಹಿನ್ನೆಲೆಯಲ್ಲಿ ಶಾಸಕ ಡಾ. ಉಮೇಶ ಜಾಧವ ಅವರು ಚಿಕಿತ್ಸೆ ಪಡೆಯುತ್ತಿರುವ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಯೋಗಕ್ಷೇವು ವಿಚಾರಿಸಿದರು.
ಚಿಂಚೋಳಿ- ಚಂದಾಪುರ ನಗರ ಪ್ರದೇಶದಲ್ಲಿರುವ ಸಾರ್ವಜನಿಕರಿಗೆ ಶುದ್ಧ ಕುಡಿವ ನೀರು ಮತ್ತು ಒಳಚರಂಡಿ ನಿರ್ಮಾಣಕ್ಕಾಗಿ ಕರ್ನಾಟಕ ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ 39 ಕೋಟಿ ಕ್ರಿಯಾಯೋಜನೆ ಸಿದ್ಧಪಡಿಸಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸರ್ಕಾರದಿಂದ ಕ್ರಿಯಾಯೋಜನೆ ಮಂಜೂರಾಗಿದೆ ಎಂದು ತಿಳಿಸಿದರು.
ರೋಗ ನಿಯಂತ್ರಣಕ್ಕೆ: ಪಟ್ಟಣದಲ್ಲಿ ಕಲುಷಿತ ನೀರು ಸೇವನೆಯಿಂದ 41 ಜನರಿಗೆ ವಾಂತಿ- ಭೇದಿ ಉಂಟಾಗಿತ್ತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶಿವರಾಜ ಸಜ್ಜನಶೆಟ್ಟಿ, ಪಪಂ ಮುಖ್ಯಾಧಿಕಾರಿ, ಸುರೇಶ ಬಬಲಾದ, ಟಿಎಚ್ಒ ಡಾ. ರಾಜಕುಮಾರ್, ತಹಸೀಲ್ದಾರ್ ಮೋಹನ ಜೋಶಿ ಎಲ್ಲ ವಾರ್ಡುಗಳಿಗೆ ಭೇಟಿ ನೀಡಿ ಅಗತ್ಯ ಕ್ರಮ ಕೈಕೊಂಡಿದ್ದಾರೆ ಎಂದರು.
ಅಯೋಗ್ಯ ನೀರುಳ್ಳ ಬೋರ್ವೆಲ್ಗಳು: ಪಟ್ಟಣಕ್ಕೆ ಕುಡಿವ ನೀರು ಸರಬರಾಜು ಮಾಡುವ ಪೋಸ್ಟ್ ಆಫೀಸ್ ಹತ್ತಿರದ ಬೋರವೆಲ್, ಹಳೇ ಸರ್ಕಾರಿ ಆಸ್ಪತ್ರೆ ಹತ್ತಿರದ ಬೋರವೆಲ್, ಬೈರಗಲ್ಲಿ ಬೋರವೆಲ್, ಚಂದಾಪುರ ಗಂಗು ನಾಯಕ ತಾಂಡದಲ್ಲಿರುವ ಬೋರವೆಲ್, ವೀರೇಂದ್ರ ಪಾಟೀಲ್ ಪಬ್ಲಿಕ ಶಾಲೆ ಹತ್ತಿರದಲ್ಲಿರುವ ತೆರದಬಾವಿ ನೀರು, ಮದರಸಾಬ್ ಸಣ್ಣ ಅಗಸಿ ಹತ್ತಿರ ಬೋರವೆಲ್ ಮುಂತಾದ ಕಡೆ ನೀರು ಪರೀಕ್ಷೆ ಮಾಡಿದಾಗ ನೀರು ಕುಡಿಯಲಿಕ್ಕೆ ಯೋಗ್ಯವಿಲ್ಲವೆಂದು ಆರೋಗ್ಯ ಇಲಾಖೆಯಿಂದ ವರದಿ ನೀಡಲಾಗಿದೆ ಎಂದರು. ಡಿಎಚ್ಒ ಡಾ. ಶಿವರಾಜ ಸಜ್ಜನಶೆಟ್ಟಿ, ಮುಖ್ಯಾಧಿಕಾರಿ ಸುರೇಶ ಬಬಲಾದ, ಟಿಎಚ್ಒ ಡಾ. ರಾಜಕುಮಾರ್, ಪಪಂ ಸದಸ್ಯ ಅಬ್ದುಲ್ ಬಾಸೀತ್, ಶಿವಕುಮಾರ್ ಕೊಳ್ಳೂರ್, ವಿಜಯಕುಮಾರ್ ಗಂಗನಪಳ್ಳಿ, ಕೆ.ಎಂ.ಬಾರಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

