ಗುಲ್ಬರ್ಗಾ

ಮೋಘಾ ಕೆ. ಗ್ರಾಮದ ಸ್ಮಶಾನ ಭೂಮಿ ವಿವಾದ: ಶಾಂತಿ ಸಭೆ

Published On :

ಆಳಂದ: ಸ್ಥಳೀಯ ತಹಸೀಲ್ದಾರ್ ಕಚೇರಿಯಲ್ಲಿ ಮೋಘಾ ಕೆ.ಗ್ರಾಮದ ದಲಿತರ ಸ್ಮಶಾನ ಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ತಹಸೀಲ್ದಾರ್ ಪರಮೇಶ್ವರ ಕೆ. ಸ್ವಾಮಿ ಅಧ್ಯಕ್ಷತೆಯಲ್ಲಿ ಶಾಂತಿಸಭೆ ನಡೆಯಿತು.
  ತಹಸೀಲ್ದಾರ್ ಪರಮೇಶ್ವರ ಕೆ. ಸ್ವಾಮಿ ಮಾತನಾಡಿ, ಯಾವುದೋ ವಿನಾ ಕಾರಣ ಕಲಹ ಮಾಡಿಕೊಳ್ಳಬೇಡಿ, ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
  ಸ್ಮಶಾನ ಭೂಮಿಯ ಕುರಿತು ಈಗಾಗಲೇ ಕೋರ್ಟ್ನಲ್ಲಿ ಪ್ರಕರಣ ನಡೆಯುತ್ತಿದೆ. ನಿರ್ಣಯಕ್ಕಾಗಿ ಕಾಯಬೇಕು. ದಲಿತರ ಸ್ಮಶಾನ ಭೂಮಿಯ 2 ಎಕರೆ ಬೇಡಿಕೆಯನ್ನು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿಕೊಡಲಾಗುವುದು ಎಂದರು.
  ಗ್ರಾಮದ ದಲಿತ ಮುಖಂಡರು ಮಾತನಾಡಿ, ಹಲವು ದಶಕಗಳಿಂದಲೂ ಒಂದೇ ಸ್ಥಳದಲ್ಲಿ ಶವ ಸಂಸ್ಕಾರ ಕೈಕೊಂಡಿದ್ದು, ಈಗ ವಿರೋಧ ವ್ಯಕ್ತಪಡಿಸಿ ಕೋರ್ಟ್ ಮೊರೆ ಹೋಗಿದ್ದಾರೆ. ಇದೇ ಸ್ಥಳದಲ್ಲಿ 2 ಎಕರೆ ಭೂಮಿ ಕಲ್ಪಿಸಿ ಶವ ಸಂಸ್ಕಾರಕ್ಕೆ ಅನುಕೂಲ ಒದಗಿಸಬೇಕು ಎಂದರು.
  ಭೂ ಮಾಲೀಕ ಚಾಂದಪಾಶ ಮಾತನಾಡಿ, ಇರುವ ನಾಲ್ಕೇ ಎಕರೆ ಜಮೀನಿನಲ್ಲಿ ಎರಡು ಎಕರೆ ಸ್ಮಶಾನ ಭೂಮಿಗೆ ಬಿಟ್ಟುಕೊಟ್ಟರೆ ಉಳಿಯುವುದಿಲ್ಲ. ಶವ ಸಂಸ್ಕಾರ ಜಾಗ ಬಿಟ್ಟು ಉಳಿದ ಜಾಗದಲ್ಲಿ ಬಿತ್ತನೆಗೆ ಅವಕಾಶ ಮಾಡಿಕೊಡಬೇಕು. ಮುಂದೆ ಕೋರ್ಟ್ ಮತ್ತು ಸರ್ಕಾರದ ನಿರ್ಣಯಕ್ಕೆ ಬದ್ಧವಾಗಿರುವೆ ಎಂದು ಸಭೆಯಲ್ಲಿ ಹೇಳಿದರು. ಕೊನೆಗೂ ಎರಡು ಕಡೆಯವರು ಒಮ್ಮತಕ್ಕೆ ಬರಲಿಲ್ಲ. ಸಭೆಯಲ್ಲಿ ಸಿಪಿಐ ಜಿ.ಎಸ್. ಊಡಗಿ, ಮಾದನಹಿಪ್ಪರಗಾ ಠಾಣೆಯ ಪಿಎಸ್ಐ ಭಾಗ್ವತ್, ದಲಿತ ಸೇನೆ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಬೋಳಣಿ, ಗ್ರಾಮದ ವಿವಾದಕ್ಕೊಳಪಟ್ಟ 2 ಗುಂಪಿನವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.