'ಸಂಘವನ್ನು ಸಮಾಜಮುಖಿಯಾಗಿಸುವೆ'
ಕನ್ನಡಪ್ರಭ ವಾರ್ತೆ, ಆಳಂದ, ಆ.6
ರಾಜ್ಯ ಸರ್ಕಾರಿ ನೌಕರರ ಸಂಘವು ಹಲವಾರು ರಚನಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಾಜಮುಖಿಯಾಗಿ ಸಂಘವನ್ನು ಮುನ್ನಡೆಸುವುದಾಗಿ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ರಮೇಶ ಮಾಡ್ಯಾಳಕರ್ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಸರ್ಕಾರಿ ನೌಕರರ ಹಲವಾರು ಸಮಸ್ಯೆಗಳಿದ್ದು, ಅವುಗಳನ್ನು ಬರುವ ದಿನಗಳಲ್ಲಿ ಹಂತ ಹಂತವಾಗಿ ಇಲಾಖೆ ಮತ್ತು ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಪರಿಹಾರ ಕಂಡುಹಿಡಿಯುವುದಾಗಿ ಭರವಸೆ ನೀಡಿದರು.
ಕಾಲೇಜಿನ ಪ್ರಾಚಾರ್ಯ ಶಿವಶರಣಪ್ಪ ಬಿರಾದಾರ ಅಧ್ಯಕ್ಷತೆ ವಹಿಸಿ ಮಾತಮಾಡಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡ ಇತರ ಕೆಲ ಮೂಲ ಸೌಲಭ್ಯಗಳಿಂದ ನರಳುವಂತಾಗಿದ್ದು, ಇದರಿಂದ ಮಕ್ಕಳ ಅಭ್ಯಾಸದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದರು.
ಉಪನ್ಯಾಸಕ ಅಶೋಕಕುಮಾರ್ ಚಿಟ್ಟೆಕರ್, ಎ.ಜಿ. ಖಾನ್, ಶರತ ಡೊಂಗರಗಾಂವ, ಭಾರತಿ ಭೂಸಾರೆ, ಡಾ. ಶಾಂತಲಾ ಪಾಟೀಲ್, ಸುಜಾತಾ ದೊಡ್ಮನಿ, ನಿಂಗಪ್ಪ ಪೂಜಾರಿ, ಜಗನ್ನಾಥ ಹುಮನಾಬಾದೆ, ಜ್ಯೋತಿ ಜಾಧವ, ಶರಣು ಭಾವಿ, ಅನೀಸಾ ಸಿದ್ದಿಕ್ಕಿ, ವಿಶ್ವನಾಥ ರಾಠೋಡ, ಸಜೀವ ನಿರ್ಮಲಕರ್, ಬಾಬುರಾವ, ಸಿದ್ದಲಿಂಗ, ವಿದ್ಯಾರ್ಥಿ ಸಂಘದ ಹಣಮಂತ ಶೇರಿ, ಮೃತ್ಯುಂಜಯ ಭಾಗೋಡಿ, ಪಂಡಿತ ಕಟ್ಟಿಮನಿ, ಆನಂದ ಜಿಡಗಾ, ರಾಜಶೇಖರ ಪಾಟೀಲ್ ಇತರರು ಪಾಲ್ಗೊಂಡಿದರು. ನೌಕರರ ಸಂಘದ ದೇವಿಚಂದ ರಾಠೋಡ, ಪತ್ರಕರ್ತ ಡಿ.ಎಂ. ಪಾಟೀಲ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

