ಗುಲ್ಬರ್ಗಾ

ಜನಸಂಖ್ಯೆ ನಿಯಂತ್ರಣಕ್ಕೆಜನರ ಸಹಕಾರ ಅಗತ್ಯ: ವೆಂಕಟಪ್ಪ

Published On :

ಸುರಪುರ: ಜನಸಂಖ್ಯೆ ನಿಯಂತ್ರಣವನ್ನು ಕೇವಲ ಇಲಾಖೆಯಿಂದ ತಡೆಗಟ್ಟಲು ಸಾಧ್ಯವಿಲ್ಲ. ಇದಕ್ಕೆ ಸಾರ್ವಜನಿಕರು ಸಹಕರಿಸಿದಾಗ ಮಾತ್ರ ಯಶಸ್ವಿಯಾಗುತ್ತದೆ. ಕಾರಣ ಬೆಳೆಯುತ್ತಿರುವ ಜನಸಂಖ್ಯೆಯ ನಿಯಂತ್ರಣ ಎಲ್ಲರ ಹೊಣೆ ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು.
ಇಲ್ಲಿಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ಗುರುವಾರ ವಿಶ್ವ ಜನಸಂಖ್ಯಾ ದಿನಚರಣೆ ಉದ್ಘಾಟಿಸಿ ಮಾತನಾಡಿದರು. ಬೆಳೆಯುತ್ತಿರುವ ಜನಸಂಖ್ಯೆಯಿಂದ ಬಡತನ ದಾರಿದ್ರ್ಯ ಸೇರಿದಂತೆ ಹಲವಾರು ಸಮಸ್ಯೆಗಳು ಎದುರಿಸುವಂತಾಗಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿದಾಗ ಮಾತ್ರ ಜನಸಂಖ್ಯೆ ನಿಯಂತ್ರಣವಾಗಲು ಸಾಧ್ಯ ಎಂದರು.
ಶಸ್ತ್ರ ಚಿಕಿತ್ಸೆ ಅವಶ್ಯ: ಜನಸಂಖ್ಯೆಗೆ ಕಡಿವಾಣ ಹಾಕಲು ಪುರುಷರನ್ನು ಸಂತಾನ ಹರಣ ಶಸ್ತ್ರ ಚಿಕಿತ್ಸೆಗೆ ಒಳಪಡಿಸುವುದು ಅವಶ್ಯ. ಈ ನಿಟ್ಟಿನಲ್ಲಿ ಇಲಾಖೆ ಪುರಷರನ್ನು ಈ ಯೋಜನೆಗೆ ಒಳಪಡಿಸಲು ಶ್ರಮಿಸಬೇಕೆಂದು ಕರೆ ನೀಡಿದರು.
ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಅವ್ಯವಸ್ಥೆಯಿಂದ ಬೇಸತ್ತ ರೋಗಿಗಳು ಬೇರೆಕಡೆ ಚಿಕಿತ್ಸೆಗೆ ಹೋಗುತ್ತಿರುವುದು ತಲೆ ತಗ್ಗಿಸುವಂತೆ ಮಾಡಿದೆ ಎಂದು ಬೇಸರ ವ್ಯಕ್ತ ಪಡಿಸಿದರು. ಆರೋಗ್ಯ ಸಚಿವರೊಂದಿಗೆ ಮಾತನಾಡಿ ವೈದ್ಯ ಮತ್ತು ಸಿಬ್ಬಂದಿಯನ್ನು ಶೀಘ್ರದಲ್ಲಿಯೇ ಒದಗಿಸುವಂತೆ ಕೋರುತ್ತೇನೆ. ಸಮೀಪದ ಯಲ್ಲಪ್ಪನ ಬಾವಿಯಿಂದ ನೀರು ಒದಗಿಸಲು ಅನುದಾನದ ಭರವಸೆ ನೀಡಿದರು.
  ಸಿದ್ದರಾಮ ಹೊನ್ಕಲ್ ವಿಶೇಷ ಉಪನ್ಯಾಸ ನೀಡಿ, ನಮ್ಮ ಭಾಗ ಹೆಚ್ಚು ಉಷ್ಣ ಪ್ರದೇಶವಾಗಿರುವುದರಿಂದ ಬಾಲಕಿಯರು ಬೇಗನೆ ಋತುಮತಿಯರಾಗುತ್ತಾರೆ. ಇದರಿಂದ ಬೇಗನೆ ಹಾಗೂ ಹೆಚ್ಚು ಮಕ್ಕಳನ್ನು ಪಡೆಯುತ್ತಾರೆ ಎಂದರು. ತಾಲೂಕು ಆರೋಗ್ಯಾಧಿಕಾರಿ ಡಾ. ರಾಜಾ ವೆಂಕಪ್ಪ ನಾಯಕ ಅಧ್ಯಕ್ಷತೆ ವಹಿಸಿದ್ದರು. ಡಿಎಚ್‌ಒ ಡಾ. ಮಲ್ಲಿಕಾರ್ಜುನ ಮುಕ್ಕಾ, ಡಾ. ಅಭಯಕುಮಾರ ಪಾಟೀಲ, ಡಾ. ನಾಗನಾಥ ಹೆಬ್ಳೆ, ಸಾಬಮ್ಮ ದೇಸಾಯಿ, ವಿಠ್ಠಲ್ ಯಾದವ್, ಸೂಲಪ್ಪ ಕಮತಗಿ, ಅಂಬ್ರಪ್ಪ, ನಿಂಗನಗೌಡ ಅಮ್ಲಿಹಾಳ ವೇದಿಕೆಯಲ್ಲಿದ್ದರು. ಸಂಗಣ್ಣ ಪ್ಯಾಟಿ ಪ್ರಾರ್ಥಿಸಿದರು. ಪ್ರಾಣೇಶ ಜೋಷಿ ಸ್ವಾಗತಿಸಿ ನಿರೂಪಿಸಿ ಡಾ. ಹರ್ಷವರ್ಧನ ವಂದಿಸಿದರು. ವೈದ್ಯರಾದ ಶಫೀ ಉಜ್ಜಮಾ, ಸರೋಜಾ ಪಾಟೀಲ, ಇಮ್ತಿಯಾಜ, ಅಯ್ಯಣಗೌಡ ಪಾಟೀಲ, ಸಂಜೀವ, ರಾಜೂ, ಸಿಬ್ಬಂದಿ ಸಂಗಪ್ಪ ಚೆಟ್ಟಿ, ಉಷಾ, ಶಂಕ್ರೆಪ್ಪ, ಮಲ್ಲಪ್ಪ, ಕಸ್ತೂರಿ ಇತರರಿದ್ದರು. ಶಾಸಕರು ಆಸ್ಪತ್ರೆಯ ಎಲ್ಲಾ ವಾರ್ಡುಗಳನ್ನು ಪರೀಶೀಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.