ಗುಲ್ಬರ್ಗಾ

ತಿಂಥಣಿ ದೇಗುಲ ಅಭಿವೃದ್ಧಿ: ಶಾಸಕ ವೆಂಕಟಪ್ಪ ಭರವಸೆ

Published On :

ಸುರಪುರ: ಸರ್ವಧರ್ಮಗಳ ಸಮನ್ವಯ ಕೇಂದ್ರವಾದ ತಿಂಥಣಿ ಮೌನೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ ಎಂದು ಶಾಸಕ ರಾಜಾ ವೆಂಕಟಪ್ಪನಾಯಕ ಭರವಸೆ ನೀಡಿದರು.
  ಸಮೀಪದ ತಿಂಥಣಿ ಮೌನೇಶ್ವರ ದೇವಸ್ಥಾನದಲ್ಲಿ ವಿಶ್ವಕರ್ಮ ವಿಕಾಸ ಸಂಸ್ಥೆ ಹಾಗೂ ಮೌನೇಶ್ವರ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸೌಕರ್ಯಕ್ಕೆ ಪ್ರಯತ್ನ: ದಕ್ಷಿಣ ಕಾಶಿ ಎಂದೇ ಕರೆಯಿಸಿಕೊಂಡ ತಿಂಥಣಿ ಮೌನೇಶ್ವರ ದೇವಸ್ಥಾನ ಮೂಲಸೌಕರ್ಯಗಳಿಗೆ ಸರ್ಕಾರದಿಂದ ಅನುದಾನ ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಜಾತ್ರೆಗೆ ಬರುವ ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದ ನಿಟ್ಟಿನಲ್ಲಿ ದೇವಸ್ಥಾನದಲ್ಲಿ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತೇನೆ ಎಂದು ನುಡಿದರು.
ಶಾಸಕರಿಗೆ ಮನವಿ: ಸಮಾಜದ ಮುಖಂಡ ಫಾಲಾಕ್ಷ ಅರಕೇರಿ ಮಾತನಾಡಿ, ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಮೌನೇಶ್ವರ ಅಧ್ಯಯನ ಪೀಠ ಸ್ಥಾಪನೆಗೆ ಸಮಾಜ ಬಹುದಿನಗಳಿಂದ ಒತ್ತಾಯಿಸುತ್ತಲೇ ಬರುತ್ತಿದೆ. ಆದರೆ ಇದುವರೆಗೂ ಈಡೇರಿಲ್ಲ. ಸರ್ಕಾರದ ಮೇಲೆ ಒತ್ತಡ ತಂದು ನೆನೆಗುದಿಗೆ ಬಿದ್ದಿರುವ ಪೀಠ ಸ್ಥಾಪನೆಗೆ ಮುಂದಾಗಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು. ಯಾದಗಿರಿ ಏಕದಂಡಗಿ ಮಠದ ಶ್ರೀನಿವಾಸ ಸ್ವಾಮಿ, ಶಹಾಪುರದ ಅಜೇಂದ್ರ ಸ್ವಾಮಿ, ತಿಂಥಣಿ ಮೌನೇಶ್ವರ ಸ್ವಾಮಿ ಆಶೀರ್ವಚನ ನೀಡಿದರು.
 ಇದೇ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಚಿನ್ನಪ್ಪ ಗುಡುಗುಂಟಿ ಹಾಗೂ ಪುರಸಭೆ ಸದಸ್ಯ ಮನೋಹರ ಕುಂಟೋಜಿ ಅವರನ್ನು ಸನ್ಮಾನಿಸಲಾಯಿತು. ಮುಖಂಡರಾದ ಗುಂಡಪ್ಪ ಸೊಲ್ಲಾಪೂರ, ಸೂಲಪ್ಪ ಕಮತಗಿ, ಸಣ್ಣ ಮಾನಯ್ಯ ಬಂಡೋಳಿ ಇದ್ದರು. ಜಗದೇವಪ್ಪ ಶಹಾಪೂರ, ಮನೋಹರ, ಗುರುಮೂರ್ತಿ, ವೀರಣ್ಣ ಹಳಿಸಗರ, ಅಪ್ಪರಾಯ ಬ್ಯಾಕೋಡ, ಶೇಷಪ್ಪ ಸರ್ವೇಯರ್ ಗಂಗಪ್ಪ ಕರಣಗಿ, ಅರವಿಂದ ಪೋತ್ದಾರ್, ಪುರುಷೋತ್ತಮ ಕಕ್ಕೇರಾ, ದಾನಪ್ಪ ವಿಶ್ವಕರ್ಮ, ರವಿ ಶಹಾಪುರ, ಮಾನಪ್ಪ ಚಿಕನಳ್ಳಿ, ವೀರಣ್ಣ ಶಿಕ್ಷಕರು ಇನ್ನಿತರರಿದ್ದರು. ಛಾಯಾ ಕುಂಟೋಜಿ ಪ್ರಾರ್ಥಿಸಿದರು, ರಾಜೇಂದ್ರ ಬಡಿಗೇರ ಸ್ವಾಗತಿಸಿದರು. ದತ್ತಾತ್ರೇಯ ನಿರೂಪಿಸಿದರು. ದೇವಿಂದ್ರ ವಿಶ್ವಕರ್ಮ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.