ಗುಲ್ಬರ್ಗಾ

ನಡುರಾತ್ರಿಯಲ್ಲಿ ಸ್ವಾತಂತ್ರ್ಯೋತ್ಸವ

Published On :

ಕ.ಪ್ರ.ವಾರ್ತೆ  ,  ಶಿವಮೊಗ್ಗ  ,   ಆ.14
ನಗರದ ಗೋಪಿ ವೃತ್ತದಲ್ಲಿ ಬುಧವಾರ ರಾತ್ರಿ ನಡುರಾತ್ರಿ ಸ್ವಾತಂತ್ರ್ಯ ಬಂದಿತ್ತು. ನಗರದ ವಿವಿಧ ಕಾಲೇಜುಗಳು ಹಾಗೂ ಸಂಸ್ಥೆಗಳ ಯುವ ಸಮೂಹವು ಸಮನ್ವಯ ಸಂಸ್ಥೆ ಆಯೋಜಿಸಿದ್ದ ಸ್ವದೇಶಿ ಮಂತ್ರ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯೋತ್ಸವವನ್ನು ಅತ್ಯಂತ ವಿನೂತನವಾಗಿ ಆಚರಿಸಿತು.
ಬುಧವಾರ ರಾತ್ರಿ 10 ಗಂಟೆಗೆ ಆರಂಭವಾದ ಕಾರ್ಯಕ್ರಮವು ದೇಶಭಕ್ತಿ ಗೀತೆಗಳ ಗಾಯನ, ನೃತ್ಯ, ಡೊಳ್ಳು ಕುಣಿತ ಮಾತ್ರವಲ್ಲದೇ ಸುಡುಮದ್ದುಗಳ ಅಬ್ಬರದೊಂದಿಗೆ ಹಬ್ಬದ ಮೆರಗು ತಂದಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ಸ್ವಾತಂತ್ರ್ಯ ಹೋರಾಟದ ಎಲ್.ಎಲ್. ಶ್ರೀರಂಗರಾಜು ಅವರು ಉದ್ಘಾಟಿಸಿ, ಇವತ್ತು ಮೆರೆಯುತ್ತಿರುವ ಭ್ರಷ್ಟಾಚಾರ, ಲಂಚಗಳನ್ನು ನೋಡಿದರೆ ನಾವು ಯಾಕಾದರೂ ಹೋರಾಟ ಮಾಡಿ ಸ್ವಾತಂತ್ರ್ಯ ತಂದುಕೊಟ್ಟೆವೋ ಎನಿಸುತ್ತಿದೆ. ಇಂತಹ ಪರಿಸ್ಥಿತಿ ದೇಶಕ್ಕೆ ಬರಬಾರದಿತ್ತು ಎಂದರು. ಇದರ ಜತೆಗೆ ಸ್ವಾತಂತ್ರ್ಯ ಹೋರಾಟದ ಹಲವು ನೆನಪುಗಳನ್ನು ಮೆಲಕು ಹಾಕಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಗಡಿಯಲ್ಲಿ ದೇಶ ಕಾಯುತ್ತಿರುವ ಯೋಧರಿಗೆ ನಾವು ನಿಮ್ಮ ಜತೆ ಇದ್ದೇವೆ ಎಂಬ ಹೇಳುವುದರೊಂದಿಗೆ ಅವರ ಬೆಂಬಕ್ಕಿರುವ ಪ್ರತಿಜ್‌ಞೆ ಮಾಡೋಣ ಎಂದರು. ಸಮನ್ವಯ ಸಲಹಾ ಸಮಿತಿ ಸದಸ್ಯರಾದ ಸಂಧ್ಯಾ ಕಾವೇರಿ ಅಧ್ಯಕ್ಷತೆ ವಹಿಸಿದ್ದು, ಉದ್ಯಮಿ ಅಶ್ವತ್ಥ ನಾರಾಯಣ ಶೆಟ್ಟಿ, ಅಣ್ಣಾ ಹಜಾರೆ ಹೋರಾಟ ಸಮಿತಿಯ ಅಶೋಕ್ ಕುಮಾರ್ ಭಾಗವಹಿಸಿದ್ದರು. ಸಮನ್ವಯ ಕಾಶಿ ನಿರೂಪಿಸಿದರು.
ಗೀತನೃತ್ಯ ಸಂಭ್ರಮ
ಕವಿ ಇಕ್ಬಾಲ್ ಅವರ ಸಾರೇ ಜಹಾ-ಸೆ ಅಚ್ಚಾ... ಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಕವಿ ಕೆ.ಎಸ್. ನರಸಿಂಹಸ್ವಾಮಿ ಅವರ ಅಕಾಶಕೆದ್ದು ನಿಂತ ಪರ್ವತ ಹಿಮ ಮೌನದಲ್ಲಿ..., ಕುವೆಂಪು ಅವರ ನೂರು ದೇವರನೆಲ್ಲ ನೂಕಾಚೆ ದೂರ..., ಬಂಕೀಮ್ಚುಂದ್ರ ಚಟರ್ಜಿ ಅವರ ವಂದೇ ಮಾತರಂ... ಗೀತೆಗಳು ಮೂಡಿ ಬಂದವು.
ಇದಲ್ಲದೇ, ಹಮ್ಸುಬಬ್ಭಾರತೀಯ ಹೈ..., ಸಾವಿರ ದಳ ಕಮಲಿನಿ..., ವಿಶ್ವವಿನೂತನ ವಿದ್ಯಾಚೇತನ..., ಎಲೆಗಳು ನೂರಾರು..., ಕಂದೋನ್ಸೆ ಕಂದೆ ಮಿಲ್ತೆ ಹೈ... ಗೀತೆಗಳು ಮೂಡಿ ಬಂದವು. ನಗರದ ಹತ್ತಕ್ಕೂ ಹೆಚ್ಚು ಪದವಿ ಕಾಲೇಜುಗಳ ಸುಮಾರು 80 ವಿದ್ಯಾರ್ಥಿಗಳು ಗಾಯನ, ನೃತ್ಯ ಪ್ರದರ್ಶಿಸಿದರು. ಯುವ ಸೌರಭ, ಸ್ಟೈಲ್ ಡ್ಯಾನ್ಸ್ ಗ್ರೂಪ್, ಮಲ್ನಾಡ್ ಓಪನ್ಗ್ರೂಪ್, ಅಡಕೆ ಮಂಡಿ ಕಾರ್ಮಿಕರ ಸಂಘ, ಪಾಲ್ಚಂದ್ರ ಡ್ಯಾನ್ಸ್ ಗ್ರೂಪ್, ನಿರಂತರ ಸಂಸ್ಥೆ ಇನ್ನಿತರ ಸಂಘಟನೆಗಳು ಕಾರ್ಯಕ್ರಮಕ್ಕೆ ಕೈಜೋಡಿಸಿದ್ದವು. ದೇಶಕ್ಕೆ ಸ್ವಾತಂತ್ರ್ಯ ಬಂದ ಸಮಯವನ ಮಧ್ಯಾತ್ರಿ 12ಕ್ಕೆ ಸರಿಯಾಗಿ ಆಕರ್ಷಕ ಸಿಡಿಮದ್ದು ಪ್ರದರ್ಶನ ಹಾಗೂ ಜನಪದ ವಾದ್ಯಗಳ ವಾದನ ನಡೆಯಿಕು, ರಾಷ್ಟ್ರಗೀತೆ ಗಾಯನದೊಂದಿಗೆ ಕಾಯಕ್ರಮ ಕೊನೆಗೊಂಡಿತು.
ಯುವ ಸಂಭ್ರಮ
ನಡುರಾತ್ರಿ ಆಯೋಜಿಸಿದ್ದ ಅಪರೂಪದ ಕಾರ್ಯಕ್ರಮದಲ್ಲಿ ಮುಗಿಯುವ ವರೆಗೂ ಸಾವಿರಾರು ನಾಗರೀಕರು ಗೋಪಿ ವೃತ್ತದಲ್ಲಿ ಸಾಕ್ಷಿಯಾಗಿದ್ದರು. ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೂಕ್ತ ಬಂದೋಬಸಸ್ತ್ನಿರ್ವಹಿಸಿದರು. ಜಾನಪದ ವಾದನ ಆರಂಭವಾದಾಗ ಯುವ ಸಮೂಹವೂ ಸಹ ಕುಣಿದು ಸಂಭ್ರಮಿಸಿತು. ಸುಡುಮದ್ದು ಪ್ರದರ್ಶನ ಅತ್ಯಂತ ಆಕರ್ಷಕವಾಗಿತ್ತು. ಸ್ವಾತಂತ್ರ್ಯೋತ್ಸವದ ಹಿಂದಿನ ರಾತ್ರಿಯ ನಡೆದ ಕಾರ್ಯಕ್ರಮವು ಜನಮನ ಸೂರೆಗೊಂಡಿತು. ಜನಸಮೂಹದ ನಡುವೆ ರಾಷ್ಟ್ರಧ್ವಜಗಳು ಜನರ ಕೈಯಲ್ಲಿ ಮೆರೆಯುತ್ತಿದ್ದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.