ಸಮಾಜ ನಿರ್ಮಾಣದಲ್ಲಿ ಮಹಿಳೆ ಪಾತ್ರ ಮಹತ್ವದ್ದು: ಶಾಸಕ ಪ್ರಸನ್ನಕುಮಾರ್
ಶಿವಮೊಗ್ಗ: ಕುಟುಂಬದಲ್ಲಿನ ಸದಸ್ಯರು ಸದಾ ಹಸನ್ಮುಖರಾಗಿದ್ದರೆ ನೋವು ಉದ್ಭವಿಸುವುದಿಲ್ಲ. ಇದರಿಂದ ಸಮಾಜ ಕೂಡ ಹಸನ್ಮುಖಿಯಾಗಿರಲು ಸಾಧ್ಯ ಎಂದು ಶಾಸಕ ಕೆ.ಬಿ. ಪ್ರಸನ್ನಕುಮಾರ್ ಹೇಳಿದರು. ನಗರದ ಕುವೆಂಪು ರಂಗಮಂದಿರದಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ ಸುವರ್ಣ ಲೇಡೀಸ್ ಕ್ಲಬ್ ಘಟಕದ ವಾರ್ಷಿಕ ಸಭೆಯಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಸುವರ್ಣ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿದ ಅವರು, ಮಹಿಳೆಯೊಬ್ಬಳು ಹಸನ್ಮುಖಿಯಾಗಿದ್ದರೆ ಇಡೀ ಕುಟುಂಬ ಸುಖ ಸಂತೋಷದಲ್ಲಿರುತ್ತದೆ. ಇಂತಹ ಸುಖೀ ಕುಟುಂಬ ನಿರ್ಮಾಣ ಕಾರ್ಯ ಮಾಡುತ್ತಿರುವ ಸುವರ್ಣ ಲೇಡೀಸ್ ಕ್ಲಬ್ ಕಾರ್ಯ ಶ್ಲಾಘನೀಯ ಎಂದರು. ಸುವರ್ಣ ಲೇಡೀಸ್ ಕ್ಲಬ್ ಶಿವಮೊಗ್ಗದಲ್ಲಿ ನಡೆಸಲು ಉದ್ದೇಶಿಸಿರುವ ಸಮಾವೇಶಕ್ಕೆ ನೆರವು ನೀಡುವುದಾಗಿ ಭರವಸೆ ನೀಡಿದರು. ಗೀತಾಂಜಲಿ ಪ್ರಸನ್ನಕುಮಾರ್ ಮಾತನಾಡಿದರು.
ಸನ್ಮಾನ: ಹಿರಿಯ ಪತ್ರಕರ್ತರಾದ ಎಸ್. ಚಂದ್ರಕಾಂತ್, ಎನ್. ಮಂಜುನಾಥ್, ಹುಲಿಮನೆ ತಿಮ್ಮಪ್ಪ, ಗೋಪಾಲ್ ಹೆಡಗೆರೆ, ಮೋಹನ್ ಅವರಿಗೆ ಹಾಗೂ ಮಹಿಳಾ ಸಾಧಕಿಯರಾದ ಸಹಕಾರಿ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ ರಾಜೇಶ್ವರಿ, ನಗರಸಭೆ ಮಾಜಿ ಉಪಾಧ್ಯಕ್ಷೆ ಹಾಗೂ ಹಿರಿಯ ಸಹಾಕಾರಿ ರುಕ್ಮಿಣಿ ವೇದವ್ಯಾಸ್, ದಾಸ ಸಾಹಿತ್ಯದಲ್ಲಿ ಸಾಹಿತ್ಯ ಭೂಷಣ ಹಾಗೂ ಸಾಹಿತ್ಯ ರತ್ನ ಪ್ರಶಸ್ತಿ ಪುರಸ್ಕೃತರಾದ ಶಾರದಾಬಾಯಿ ಮತ್ತು ಅಂಧ ಪ್ರತಿಭೆ ರಜತ್ ದೀಕ್ಷಿತ್ ಅವರಿಗೆ ಸುವರ್ಣ ಪುರಸ್ಕಾರ ನೀಡಿ ಗೌರವಿಸಲಾಯಿತು. ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಸುವರ್ಣ ವಾಹಿನಿಯ ಹಿರಿಯ ಎಕ್ಸಿಕ್ಯೂಟೀವ್ ಕೆ.ಬಿ. ವೈದ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷತೆಯನ್ನು ಸುವರ್ಣ ಲೇಡೀಸ್ ಕ್ಲಬ್ನ ಶಿವಮೊಗ್ಗ ಘಟಕದ ಅಧ್ಯಕ್ಷ ಉಮಾಮೂರ್ತಿ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

