ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸವೇ ಆಶಯವಾಗಲಿ: ದರ್ಶನಾಪುರ ಸಲಹೆ
ಶಹಾಪುರ: ಭವಿಷ್ಯದ ಕನಸು ಹೊತ್ತ ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸವೇ ಸಂಸ್ಥೆಯ ಸದಾಶಯವಾಗಲಿ ಎಂದು ಮಾಜಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.
ಇಲ್ಲಿಯ ಭೀಮರಾಯನಗುಡಿ ವಸಹಾತುವಿನಲ್ಲಿ ರಾಮಕೃಷ್ಣ ಪರಮಹಂಸ ವಿದ್ಯಾವರ್ಧಕ ಸಂಸ್ಥೆಯ ನಿವೇದಿತಾ ಪ್ರಾಥಮಿಕ, ಪ್ರೌಢಶಾಲೆ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ಸಂದರ್ಭದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆ ನಡೆಸುವುದು ಕಷ್ಟಕರ ಕಾರ್ಯವಾಗಿದ್ದರೂ, ಸ್ಥಳೀಯ ನಿವೇದಿತಾ ಶಾಲೆಯ ಆಡಳಿತ ಮಂಡಳಿ ಪರಿಶ್ರಮದ ಮೇಲೆ ಕಟ್ಟಿ ಸಾಧನೆಗೆ ಅಸಾಧ್ಯವಾದುದು ಯಾವುದು ಇಲ್ಲ ಎಂಬುದನ್ನು ಸಾಬೀತು ಪಡೆಸಿದೆ. ಸ್ಪರ್ಧಾತ್ಮಕ ಯುಗದಲ್ಲಿ ಸಂಸ್ಥೆಯನ್ನು ನಂಬಿಕೊಂಡು ಬಂದಿರುವ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕಾರ್ಯ ನಡೆಯಲಿ. ವಿಶೇಷವಾಗಿ ಗ್ರಾಮೀಣ ಭಾಗದ ಮಕ್ಕಳ ಬಗ್ಗೆ ಕಳಕಳಿ ಇರಲಿ ಎಂದು ತಿಳಿಸಿದರು.
ಕೆಬಿಜೆಎನ್ಎಲ್ ಅಧೀಕ್ಷಕ ಅಭಿಯಂತರ ಈಶ್ವರ ನಾಯಕ ಮಾತನಾಡಿ, ಸರ್ಕಾರದ ಅನುದಾನದ ಸಹಾಯವಿಲ್ಲದಿದ್ದರೂ ಗುಣಮಟ್ಟದ ಶಿಕ್ಷಣ ನೀಡಲು ಸ್ಥಳೀಯ ಸಂಸ್ಥೆ ಉತ್ತಮ ಪ್ರಯತ್ನ ಹಾಕುತ್ತಿದ್ದು, ಸಂಸ್ಥೆಯ ಹೆಮ್ಮರವಾಗಿ ಬೆಳೆಯಲಿ ಎಂದು ಹಾರೈಸಿದರು. ಬಿಇಒ ಕೆ.ರಾಯಪ್ಪರಡ್ಡಿ, ಶಿಕ್ಷಕ ರೇಖು ಚವ್ಹಾಣ, ತಾಲೂಕು ಚುಸಾಪ ಅಧ್ಯಕ್ಷ ಅಶೋಕ ಚೌದ್ರಿ, ರಾಮಚಂದ್ರ ಜಂಬೇರಾಳ, ಶಿವನಗೌಡ ಮಾಲಿಪಾಟೀಲ ಮದ್ರಿಕಿ, ಮಾತನಾಡಿದರು. ಪ್ರಮುಖರಾದ ಶರಣಗೌಡ ಗುಂಡಗುರ್ತಿ, ಎಚ್.ಎಂ. ದೊಡ್ಮನಿ, ಸಂಸ್ಥೆಯ ಅಧ್ಯಕ್ಷ ಶರಣಪ್ಪ ಆರ್.ಕಟ್ಟಿಮನಿ ಇದ್ದರು. ಮೂರ್ತಿ ಎನ್. ಮುದಗಲ್ ಪ್ರಾಸ್ತಾವಿಕ ಮಾತನಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

