ಗುಲ್ಬರ್ಗಾ

ಪರಿಕ್ರಮ ಯಾತ್ರೆ ನಿಷೇಧ ಕ್ರಮ ಖಂಡಿಸಿ ಪ್ರತಿಭಟನೆ

Published On :

ಯಾದಗಿರಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಬೇಡಿಕೆ ಮಂಡಿಸುವ ಚೌರಾಸಿ ಕೋಸಿ ಪರಿಕ್ರಮ ಯಾತ್ರೆ ನಡೆಸಲು ಅವಕಾಶ ನೀಡದ ಉತ್ತರ ಪ್ರದೇಶ ಸರ್ಕಾರದ ಕ್ರಮ ಖಂಡಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಭಾವನೆಗಳಿಗೆ ಧಕ್ಕೆ: ಈ ಸಂದರ್ಭದಲ್ಲಿ ಪರಿಷತ್ ಪ್ರಮುಖ ಸಿ.ಎಂ ಪಟ್ಟೆದಾರ ಮಾತನಾಡಿ, ಹಿಂದೂಗಳು, ದೇಶದ ಮೂಲ ನಿವಾಸಿಗಳು ಧಾರ್ಮಿಕ ಯಾತ್ರೆಗೆ ತೆರಳುತ್ತಿರುವ ವಿಶ್ವ ಹಿಂದೂ ಪರಿಷತ್ ಮುಖಂಡ ಅಶೋಕ್ ಸಿಂಘಲ್ ಹಾಗೂ ಪ್ರವೀಣಬಾಯಿ ತೊಗಾಡಿಯಾ ಸೇರಿದಂತೆ 1700 ಕಾರ್ಯಕರ್ತರನ್ನು ಉತ್ತರಪ್ರದೇಶ ಸರ್ಕಾರ ಬಂಧಿಸುವ ಮೂಲಕ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದು ನಮ್ಮನ್ನು ಕೆರಳಿಸುವಂತೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೋಮು ಭಾವನೆ ಕೆರಳಿಸಬಹುದು ಎಂಬ ಕಾರಣಕ್ಕೆ ಯಾತ್ರೆಗೆ ಅನುಮತಿ ನಿರಾಕರಿಸಲಾಗಿದೆ ಎಂಬ ಯುಪಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಣಅವರ ಹೇಳಿಕೆ ಬಾಲಿಶತನದಿಂದ ಕೂಡಿದೆ. ಯಾತ್ರೆಗೆ ಅವಕಾಶ ನೀಡದಿರುವುದು ಹಿಂದೂಗಳಿಗೆ ಹಾಗೂ ಧರ್ಮಕ್ಕೆ ಅವಮಾನಗೊಳಿಸಿದಂತಾಗಿದೆ. ಚೌರಾಸಿ ಕೋಸಿ ಪರಿಕ್ರಮ ಯಾತ್ರೆಗೆ ತಡೆ ಹಿಡಿದ ಉತ್ತರ ಪ್ರದೇಶದ ಸರ್ಕಾರದ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಅಪರ ಜಿಲ್ಲಾಧಿಕಾರಿ ಜಹೀರಾ ನಸೀಮ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ತಿಪ್ಪಣ್ಣ ಹೂಗಾರ, ವೆಂಕಟರೆಡ್ಡಿ ಅಬ್ಬೆತುಮಕೂರ, ರಾಜು ಹೆಂದೆ, ಪಾಂಡುರಂಗ ನವಲೆ, ಲಕ್ಷ್ಮಣರಾವ ಹೆಂದೆ, ದೀಪಕ್ ಜಾದವ್, ರಘು ಚವ್ಹಾಣ, ಸೋಹನ ಪ್ರಸಾದ, ಅಂಬಯ್ಯ ಶಾಬಾದಿ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.