ಗುಲ್ಬರ್ಗಾ

ವಸತಿ ಯೋಜನೆಗೆ ಆಯ್ಕೆ ಮಾಡಲು ಮನವಿ

Published On :

ಕನ್ನಡಪ್ರಭ ವಾರ್ತೆ  ಸುರಪುರ  ಆ. 28
ತಾಲೂಕಿನ ಹೆಮ್ಮಡಗಿಯ 54 ಹಾಗೂ ಚಂದ್ಲಾಪೂರ ಗ್ರಾಮದ 13 ಕುಟುಂಬಗಳನ್ನು ವಸತಿ ಯೋಜನೆಯಲ್ಲಿ ಆಯ್ಕೆ ಮಾಡಿ ಅನುಕೂಲ ಕಲ್ಪಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ತಾಲೂಕು ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ ಪಾಟೀಲರಿಗೆ ಮನವಿ ಸಲ್ಲಿಸಿದರು.
ಇಲ್ಲಿಯ ತಾಪಂ ಕಾರ್ಯಾಲಯದಲ್ಲಿ ನೂತನ ಅಧ್ಯಕ್ಷ ಶ್ರೀನಿವಾಸ ಪಾಟೀಲ್‌ರನ್ನು ಸನ್ಮಾನಿಸಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ ಮಾತನಾಡಿ, ಚಂದ್ರಲಾಪುರ ಹಾಗೂ ಹೆಮ್ಮಡಗಿಯ 67 ಕುಟುಂಬಗಳು ತೀರಾ ಬಡತನದಲ್ಲಿವೆ. ಈ ಕುಟುಂಬಗಳಿಗೆ ಯಾವುದೇ ಆಸ್ತಿ ಇಲ್ಲ. ಇರಲು ಸರಿಯಾದ ಸೂರು ಇಲ್ಲ. ಜೋಪಡಿಯಲ್ಲಿ ಸಂಸಾರ ಸಾಗಿಸುತ್ತಿದಾರೆ. ವಸತಿ ಯೋಜನೆಗೆ ಅರ್ಹರಾಗಿದ್ದರೂ ಗ್ರಾಪಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ವಸತಿ ಯೋಜನೆ ವಂಚಿತರಾಗಿದ್ದಾರೆ ಎಂದು ಅಧ್ಯಕ್ಷರಿಗೆ ತಿಳಿಸಿದರು.
ಲಿಖಿತ ಭರವಸೆ ಏನಾಯ್ತು?: ಈ ಬಗ್ಗೆ ಕಾನೂನು ಸೇವಾ ಪ್ರಾಧಿಕಾರದಲ್ಲಿ ನಮ್ಮ ಸಮಿತಿಯಿಂದ ದೂರು ದಾಖಲಿಸಲಾಗಿತ್ತು. 2013ರ ವಸತಿ ಯೋಜನೆಯಲ್ಲಿ ಫಲಾನುಭವಿಗಳಿಗೆ ವಸತಿ ಕಲ್ಪಿಸುವುದಾಗಿ ನ್ಯಾಯಾಲಯದ ಪ್ರಾಧಿಕಾರಕ್ಕೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಲಿಖಿತವಾಗಿ ಬರೆದುಕೊಟ್ಟಿದ್ದರು. ಆದರೆ ಇಲ್ಲಿಯವರೆಗೂ ಈ ಬಡ ಕುಟುಂಬಗಳಿಗೆ ವಸತಿ ಕಲ್ಪಿಸದೆ ಕಡೆಗಣಿಸುತ್ತಾ ಬರಲಾಗುತ್ತಿದೆ ಎಂದು ದೂರಿದರು.
ಕಾರಣ ನ್ಯಾಯಾಲಯ ಕಾನೂನು ಪ್ರಾಧಿಕಾರದ ಆದೇಶದನ್ವಯ ಈ ಬಡ ಕುಟುಬಗಳಿಗೆ ವಸತಿ ಯೋಜನೆಗೆ ಆಯ್ಕೆ ಮಾಡಿ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದರು.
ರೈತ ಮುಖಂಡ ಬಸವರಾಜಪ್ಪಗೌಡ ಪೊಲೀಸ್ ಪಾಟೀಲ್, ಮರಿಲಿಂಗಪ್ಪ ಚಂದಲಾಪುರ, ಹಣಮಪ್ಪ ಪೂಜಾರಿ ಬಸವರಾಜ ಮೇಟಿ, ಗಂಗಣ್ಣ ಚಂದಲಾಪುರ, ಚನ್ನಪ್ಪ ಗಂವ್ಹಾರ, ಅಂಜಳಮ್ಮ, ಹಣಮಂತಿ, ಪದ್ಮಾ, ದೇವಮ್ಮ, ಶಿವಕಾಂತಮ್ಮ, ಮಾನಸಮ್ಮ, ಶಿವಣ್ಣ, ಬೀರಪ್ಪ ಮಂಗೀಹಾಳ, ರಾಮಣ್ಣ, ಬಸವರಾಜ ಕೊಪೂರು, ಹೈಯಾಳಪ್ಪ ಸುರಪುರ, ಅಮರೇಶ ಶೆಳ್ಳಗಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.