ಎಂಇಎಸ್ ಶಾಸಕರ ವರ್ತನೆಗೆ ಖಂಡನೆ
ಜೇವರ್ಗಿ: ಕನ್ನಡ ನೆಲದಲ್ಲಿದ್ದು ಕನ್ನಡವನ್ನೆ ಕಗ್ಗೊಲೆ ಮಾಡಲು ಹೊರಟಿರುವ ಬೆಳಗಾವಿಯ ಎಂಇಎಸ್ ಶಾಸಕರ ವರ್ತನೆಯನ್ನು ಕರ್ನಾಟಕ ರಕ್ಷಣಾ ವೇದಿಕೆಯ ನೆಲೋಗಿ ವಲಯದ ಕಾರ್ಯಕರ್ತರಾದ ದೇವಿಂದ್ರ ಎಸ್ ಮಯೂರ, ಯಮನೇಶ ಹರನಾಳ, ಮಡಿವಾಳಯ್ಯಸ್ವಾಮಿ ಜೇರಟಗಿ, ಸಂತೋಷ ಜೇರಟಗಿ, ಶರಣಪ್ಪ ಹಡಪದ, ಶಾಂತಗೌಡ ಹುಲ್ಲೂರ, ಬಿ.ಸಿ. ಪಾಟೀಲ್ ಹಂಚಿನಾಳ ಒತ್ತಾಯಿಸಿದ್ದಾರೆ.
ಬಸ್ ಡಿಕ್ಕಿ; ಬೈಕ್ ಸವಾರ ಗಾಯ
ಗುಲ್ಬರ್ಗ: ಕಗ್ಗನಮಡ್ಡಿ ಕ್ರಾಸ್ ಬಳಿ ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಾಯಗೊಂಡ ಘಟನೆ ಇತ್ತೀಚೆಗೆ ನಡೆದಿದೆ. ಸೇಡಂ ತಾಲೂಕಿನ ಕೋಡ್ಲಾ ಗ್ರಾಮದ ಶಿವಪ್ಪ ರಾಜೋಳ ಗಾಯಗೊಂಡಿದ್ದಾನೆ. ಈತ ಬೈಕ್ನಲ್ಲಿ ಬಬಲಾದ ಐಕೆ ಗ್ರಾಮದಿಂದ ಅಂಕಲಗಿ ಮಾರ್ಗವಾಗಿ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಡಿಕ್ಕಿ ಮೂವರಿಗೆ ಗಾಯ
ಗುಲ್ಬರ್ಗ: ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಾಯಗೊಂಡ ಘಟನೆ ಮಹಾಗಾಂವ ಬಳಿ ನಡೆದಿದೆ. ಪ್ರಭುಲಿಂಗ ಬಿರಾದಾರ ಮತ್ತು ಕಲ್ಯಾಣರಾವ ಇಬ್ಬರೂ ಬೈಕ್ನಲ್ಲಿ ಬೆಳಮಗಿಗೆ ತೆರಳುತ್ತಿದ್ದಾಗ ಎದುರಿನಿಂದ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಗಾಯಗೊಂಡಿದ್ದಾರೆ. ಮಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟ್ರ್ಯಾಕ್ಟರ್ ಡಿಕ್ಕಿ: ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಗಾಯಗೊಂಡ ಘಟನೆ ಹೊನಗುಂಟಾ ಕ್ರಾಸ್ ಬಳಿ ನಡೆದಿದೆ. ಶಹಾಬಾದ್ನ ಶಿವಣ್ಣ ಕಿರವಣಿ ಗಾಯಗೊಂಡಾತ. ಈತ ನಡೆದುಕೊಂಡು ಹೋಗುತ್ತಿದ್ದಾಗ ಟ್ರ್ಯಾಕ್ಟರ್ ಡಿಕ್ಕಿ ಹೊಡೆದಿದೆ. ಶಹಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚೆನ್ನವೀರಪ್ಪಗೆ ಸಂತಾಪ
ಚಿತ್ತಾಪುರ: ಸಂಗೀತ ಕ್ಷೇತ್ರಕ್ಕೆ ಹೊಸ ಚೇತನ ತಂದು ಕೊಟ್ಟ ಸಂಗೀತ ಕಲಾವಿದ ಚೆನ್ನವೀರಪ್ಪ ಗವಾಯಿ ಗೊಬ್ಬೂರ ನಿಧನಕ್ಕೆ ಅಳ್ಳಳ್ಳಿ ಮಹ್ಮಾತಪೀಠದ ನಾಗಪ್ಪಯ್ಯ ಸ್ವಾಮೀಜಿ ಶೋಕ ವ್ಯಕ್ತಪಡಿಸಿದ್ದಾರೆ. ಇವರ ನಿಧನದಿಂದ ಹೈ-ಕ ಸಂಗೀತ ಕ್ಷೇತ್ರದ ಕೊಂಡಿ ಕಳೆದುಕೊಂಡತಾಗಿದೆ ಎಂದ್ದಾರೆ.
ಪ್ರಭು ಕಲಾಲ್
ಜೇವರ್ಗಿ: ಆಲ್ ಇಂಡಿಯಾ ರೀಜನಲ್ ರೂರಲ್ ಬ್ಯಾಂಕ್ ಎಂಪ್ಲಾಯ್ ಅಸೋಸಿಯೆಶನ್ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ಮಹಾಗಾಂವ ಕೆಜೆಬಿ ಬ್ಯಾಂಕ್ನ ಕ್ಯಾಷಿಯರ್ ಜೇವರ್ಗಿ ನಿವಾಸಿ ಪ್ರಭು ಕೃಷ್ಣಾಜಿ ಕಲಾಲ್(45) ಅವರು ಶನಿವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪತ್ನಿ, ಇಬ್ಬರು ಪುತ್ರರು ಇದ್ದಾರೆ. ಮೃತರ ಅಂತ್ಯಕ್ರಿಯೆ ಭಾನುವಾರ ಸಂಜೆ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

