ಗುಲ್ಬರ್ಗಾ

ಗಾಂಜಾ ವಶ, ಆರೋಪಿ ಬಂಧನ

Published On :

ಶಹಾಪುರ: ತಾಲೂಕಿನ ರಸ್ತಾಪುರ ಗ್ರಾಮದ ಸೀಮಾಂತರದಲ್ಲಿ ಶರಬಣ್ಣ ತಂದೆ ಪಿಲ್ಲಪ್ಪ ನಾಯ್ಕೋಡಿ ಎಂಬುವವರ ಹೊಲದಲ್ಲಿ ಸುಮಾರು 81 ಕೆ.ಜಿ.ಯಷ್ಟು ಗಾಂಜಾ ಹಸಿಗಿಡಗಳನ್ನು ವಶಪಡಿಸಿ ಕೊಳ್ಳಲಾಗಿದೆ.
 ಇದರ ಅಂದಾಜು ಮೊತ್ತ ರು. 6 ಲಕ್ಷಕ್ಕಿಂತಲೂ ಅಧಿಕ ಎನ್ನಲಾಗಿದೆ. ಖಚಿತ ಮಾಹಿತಿಯನ್ವಯ ಎಸ್‌ಪಿ ಮತ್ತು ಡಿವೈಎಸ್‌ಪಿ ಮಾರ್ಗದರ್ಶನದಲ್ಲಿ ಸಿಪಿಐ ಜೆ.ಎಸ್. ನ್ಯಾಮಗೌಡರ ನೇತೃತ್ವಲ್ಲಿ ಎಎಸ್‌ಐ ಶಿವರಾಯ ಪಿ.ಪಿ ನಾರಾಯಣ, ಯಲ್ಲಪ್ಪ, ಪಿಡ್ಡಪ್ಪ, ಹುಸನಪ್ಪ, ಅಯ್ಯಣ್ಣ, ಜಗನ್ನಾಥ, ನಾಗಪ್ಪ ಮತ್ತು ಡಾ.ರಮೇಶ ಅವರೊಂದಿಗೆ ದಾಳಿ ನಡೆಸಿ, ಆರೋಪಿ ಶರಬಣ್ಣ ಎಂಬಾತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಪ್ರಕರಣ ದಾಖಲಿಸಿದೆ.
ಹೆಚ್ಚುತ್ತಿರುವ ಗಾಂಜಾ ಬೆಳೆ ಪ್ರಕರಣಗಳು: ಇತ್ತೀಚೆಗೆ ತಾಲೂಕಿನಾದ್ಯಂತ ಗಾಂಜಾ ಬೆಳೆಯುವ ಪ್ರಕರಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ.
  ಇದು ಗಾಂಜಾ ಮಾರಾಟದ ದಂಧೆ ಬಗ್ಗೆ ಸಂಶಯ ಮೂಡಿಸುತ್ತಿದೆ. ದರ್ಶನಾಪುರ ಗ್ರಾಮ, ಶಿರವಾಳಗ್ರಾಮ ಮತ್ತು ಪ್ರಸಕ್ತ ರಸ್ತಾಪುರ ಗ್ರಾಮದಲ್ಲಿ ಲಕ್ಷಾಂತರ ಮೌಲ್ಯದ ಗಾಂಜಾ ಬೆಳೆಯಲಾಗುತ್ತಿದೆ ಎನ್ನುವುದು ಸಾರ್ವಜನಿಕರ ನುಡಿಯಾಗಿದೆ.
  ಪೊಲೀಸ್ ಇಲಾಖೆ ಹೆಚ್ಚು ಜಾಗೃತರಾದಲ್ಲಿ ಇನ್ನಷ್ಟು ಪ್ರಕರಣಗಳನ್ನು ಪತ್ತೆ ಹಚ್ಚಬಹುದಾಗಿದ್ದು, ಕಾನೂನಿನನ್ವಯ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂಬುದು ಸಾರ್ವಜನಿಕರ  ಆಗ್ರಹವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.