ಅಂಬಿಗರ ಚೌಡಯ್ಯ ನಗರದಲ್ಲಿರುವ ಆಸ್ತಿ ಸಮಾಜಕ್ಕೆ ಸೇರಿದ್ದು: ಮ್ಯಾಕೇರಿ
ಅಫಜಲ್ಪುರ: ಪಟ್ಟಣದ ಅಂಬಿಗರ ಚೌಡಯ್ಯ ನಗರದಲ್ಲಿರುವ ಸುಮಾರು 9 ಪ್ಲಾಟ್‌ಗಳು ಮತ್ತು ಇತರೆ ಆಸ್ತಿ ಸಮಾಜಕ್ಕೆ ಸೇರಿದ್ದು, ಇದು ಯಾರ ಸ್ವತ್ತು ಅಲ್ಲ. ಇದರಲ್ಲಿ ವಿಠ್ಠಲ ಹೆರೂರ್ ಅವರ ಹೆಸರು ಕೆಡಿಸುವುದರ ಜತೆಗೆ ಆಸ್ತಿ ಹೊಡೆಯುವ ಹುನ್ನಾರ ನಡೆದಿದೆ ಎಂದು ಕೋಲಿ (ಕಬ್ಬಲಿಗ) ಸಮಾಜದ ಮುಖಂಡ ಅವ್ವಣ್ಣ ಮ್ಯಾಕೇರಿ ತಿಳಿಸಿದ್ದಾರೆ.
ಸಮಾರು ವರ್ಷಗಳ ಹಿಂದೆ ಸಮಾಜದ ಬಂಧುಗಳೆಲ್ಲರೂ ಸೇರಿ 1000 ಮತ್ತು 2000 ಹೀಗೆ ಹಣ ಕೂಡಿಸಿ 7ಎಕರೆ, 24 ಗಂಟೆ ಜಮೀನು ಖರೀದಿಸಿ ವಿಶ್ವಾಸದಿಂದ ಆಗಿನ ಸಮಾಜದ ಹಂಗಾಮಿ ಕಾರ್ಯದರ್ಶಿ ಆಗಿದ್ದ ಮಲಕಣ್ಣ ಯಂಕಂಚಿ ಹೆಸರಿಗೆ ಮಾಡಲಾಗಿತ್ತು. ಇದು ಸಮಾಜದ ಆಸ್ತಿಯಾಗಿರುವುದರಿಂದ ಮಲಕಣ್ಣ ಯಂಕಂಚಿ ಅವರು ಸಮಾಜದ ಆಸ್ತಿಯನ್ನು ಸಮಾಜಕ್ಕೆ ವರ್ಗಾವಣೆ ಮಾಡಬೇಕೆ ಹೊರತು ವೈಯಕ್ತಿಕವಾಗಿ ಅಲ್ಲ. ಹಾಗೇನಾದರೂ ಅದಕ್ಕೆ ಮಲಕಣ್ಣ ಅವರೇ ನೇರ ಹೊಣೆಗಾರರು ಎಂದು ಮ್ಯಾಕೇರಿ ತಿಳಿಸಿದ್ದಾರೆ.
ಪಟ್ಟಣದಲ್ಲಿರುವ ಹೆರೂರ್‌ರ 9 ಪ್ಲಾಟ್‌ಗಳು ನನ್ನ ಹೆಸರಿನ ನಂತರ ಸಹೋದರ ಡಾ. ದಿಗಂಬರ ಹೆರೂರ್ ಅವರ ಹೆಸರಿಗೆ ಸೇರಬೇಕೆಂದು ಕಳೆದ 30 ರಂದು ಮಲಕಣ್ಣ ಹೇಳಿಕೆ ನೀಡಿದ್ದರು. ಆದರೆ ಆ ಆಸ್ತಿ ತಾಲೂಕಿನ ಕಬ್ಬಲಿಗ ಸಮಾಜಕ್ಕೆ ಸೇರಬೇಕು ಮತ್ತು ಕೆಲವು ಫಟ್ಟಭದ್ರ ಹಿತಾಸಕ್ತಿಗಳು ಸಮಾಜಕ್ಕೆ ತನ್ನ ಜೀವನವನ್ನೆ ಮುಡುಪಾಗಿಟ್ಟಿದ್ದ ಹೆರೂರ್ ಅವರ ಹೆಸರು ದುರುಪಯೋಗ ಪಡಿಸಿಕೊಂಡು ಸಮಾಜದ ಆಸ್ತಿಯನ್ನು ಲಪಟಾಯಿಸಲು ಸತತವಾಗಿ ಪ್ರಯತ್ನಗಳು ಮಾಡುತ್ತಿರುವುದನ್ನು ಖಂಡಿಸಿದ ಅವರು ಸಮಾಜದ ಆಸ್ತಿ ಸಮಾಜಕ್ಕೆ ಸೇರಬೇಕು ಈ ಆಸ್ತಿ ರಕ್ಷಣೆ ಮಾಡುವುದು ಸಮಾಜ ಬಂಧುಗಳ ಆದ್ಯ ಕರ್ತವ್ಯ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಮಾಜ ಮುಖಂಡರಾದ ಲಚ್ಚಪ್ಪ ಜಮಾದಾರ, ಸಿದ್ದಪ್ಪ ಸಿನ್ನೂರ, ಬಸಪ್ಪ ಎಳಮೇಲಿ, ಹಣಮಂತ ಜಮಾದಾರ, ಸಾಯಬಣ್ಣ ಮ್ಯಾಕೇರಿ, ವಿಠಲ ಇಂಗಳಗಿ, ರಮೇಶ ಇಂಗಳಗಿ, ಆನಂದ ಸಾಲೋಟಗಿ, ರಾಜು ಕಡಕೋಳ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

