ಕೃಷಿ ಸಂಶೋಧನಾ ಕೇಂದ್ರವೋ, ಬೀಜೋತ್ಪನ್ನ ಕೇಂದ್ರವೋ?
ಕ.ಪ್ರ. ವಾರ್ತೆ, ಚಿತ್ತಾಪುರ, ಡಿ. 3
ಚಿತ್ತಾಪುರ ತಾಲೂಕಿನಲ್ಲಿ ಕೃಷಿ ವಿಶ್ವವಿದ್ಯಾಲಯ ರಾಯಚೂರು ಆಶ್ರಯದ ಕೃಷಿ ಸಂಶೋಧನಾ ಕೇಂದ್ರವು ಹೆಸರಿಗೆ ತಕ್ಕಂತೆ ಇರದೇ ಬೀಜೋತ್ಪನ್ನ ಕೇಂದ್ರವಾಗಿ ಕೆಲಸ ಮಾಡುತ್ತಿದೆ.
ಕೃಷಿ ಇಲಾಖೆ ವ್ಯಾಪ್ತಿಯಲ್ಲಿದ್ದ 35 ಎಕರೆ ಪ್ರದೇಶದ ಬೀಜೋತ್ಪಾದನೆ ಕೇಂದ್ರವನ್ನು ಮೇ 2012ರಂದು ಕೃಷಿ ವಿಶ್ವವಿದ್ಯಾಲಯ ಕೇಂದ್ರ ರಾಯಚೂರಿಗೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಆದರೆ, ವಿಶ್ವವಿದ್ಯಾಲಯದವರು ಬೀಜೋತ್ಪಾದನೆ ಕೇಂದ್ರವನ್ನು ತಮ್ಮ ಅಧೀನಕ್ಕೆ ಪಡೆದು ಅಲ್ಲಿ ತಮ್ಮ ಫಲಕವನ್ನು ಹಾಕಿದ್ದನ್ನು ಬಿಟ್ಟರೆ ಅಲ್ಲಿ ಅದಕ್ಕೆ ಯಾವುದೇ ಮೂಲಭೂತ ಸೌಲಭ್ಯಗಳನ್ನು ಇಲ್ಲಿಯವರೆಗೂ ಒದಗಿಸಿಕೊಟ್ಟಿಲ್ಲ.
ಮೇಲ್ಛಾವಣಿ ಇಲ್ಲದ ಗೋದಾಮುಗಳು, ಕೆಲಸಗಾರರಿಗೆ ವಸತಿ ಸೌಲಭ್ಯ, ರಾಶಿಕಟ್ಟೆ, ತಂತಿಬೇಲಿ, ಇನ್ನಿತರೆ ಸೌಲಭ್ಯಗಳು ಒದಗಿಸದಿರುವುದು ಕಂಡುಬರುತ್ತದೆ. ಇದರಿಂದ ಕೃಷಿ ಇಲಾಖೆಯಿಂದ ಹಸ್ತಾಂತರವಾದ ಬೀಜೋತ್ಪಾದನೆ ಕೇಂದ್ರ, ಕೃಷಿ ಸಂಶೋಧನೆ ಕೇಂದ್ರವಾಗಿ ಕಳೆದ 18 ತಿಂಗಳುಗಳಲ್ಲಿ ಸಾಧಿಸಿದ್ದು ಶೂನ್ಯವಾಗಿದೆ.
ಬೀಜೋತ್ಪಾದನೆ ಕೇಂದ್ರಕ್ಕೆ ಹೊಂದಿಕೊಂಡಂತಿರುವ ಗ್ರಾಮಗಳಾದ ಚಿತ್ತಾಪುರ, ಮೋಗಲಾ, ದಿಗ್ಗಾಂವ, ಇಟಗಾ, ಮರಗೋಳ, ಭಾಗೋಡಿ, ಮುಡಬೂಳ ಸೇರಿದಂತೆ ಅನೇಕ ಗ್ರಾಮಗಳಿಗೆ ಈ ಕೇಂದ್ರದಿಂದ ರೈತನಿಗೆ ನೆರವಾಗಬಹುದು ಎನ್ನುವ ನೀರಿಕ್ಷೆ ಹುಸಿಯಾಗಿದೆ. ಅಲ್ಲಿನ 53 ಎಕರೆ ಪ್ರದೇಶದಲ್ಲಿ ಈಗ ತೋರಿಕೆಗೆ ಎನ್ನುವಂತೆ ತೋಗರಿ ಟಿಎಸ್‌ಆರ್-3, ಕಡಲೆ, ಕುಸುಬೆ, ಹಾಗೂ ಸೆಣಬು (ಜೂಟ್) ಬಿತ್ತನೆ ಮಾಡಲಾಗಿದೆ. ಆದರೆ, ಉತ್ಪಾದನೆ ಯಾವ ಪ್ರಮಾಣದಲ್ಲಿ ಬರಬಹುದು ಎನ್ನುವುದು ತಿಳಿಯುತ್ತಿಲ್ಲ. ಇದಕ್ಕೆ ವಿಶ್ವವಿದ್ಯಾಲಯವು ಸಾಗುವಳಿ ಮಾಡಲು ಸಲಕರಣಿಗಳನ್ನು ಒದಗಿಸದೇ ಇರುವುದರಿಂದ ಖಾಸಗಿಯವರ ಯಂತ್ರಗಳನ್ನು ಉಪಯೋಗಿಸಿಕೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ.
ಕೃಷಿ ಸಂಶೋಧನೆ ಕೇಂದ್ರದಿಂದ ರೈತರಿಗೆ ಅನುಕೂಲವಾಗುವ ಪ್ರಯತ್ನಕ್ಕೆ ಸ್ಪಂದಿಸುತ್ತಿಲ್ಲ ಎನ್ನುವದು ರೈತರ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ದೇಶದ ಬೆನ್ನೆಲುಬಾಗಿರುವ ರೈತರು ಬೆಳೆ ಬೆಳೆಯುವ ಪದ್ಧತಿಯಲ್ಲಿ ಹೊಸ ಹೊಸ ತಂತ್ರಜ್ಞಾನಗಳನ್ನು ಬಳಸಿ ಅಧಿಕ ಇಳುವರಿ ಪಡೆಯಲು ಅನುಕೂಲವಾಗುವ ಕಾರ್ಯಕ್ರಮಗಳನ್ನು ರೂಪಿಸಲು ಶಾಸಕ ಪ್ರಿಯಾಂಕ್ ಖರ್ಗೆ ಹಾಗೂ ಅಧಿಕಾರ ವರ್ಗ ಕ್ರಮ ಕೈಗೊಳ್ಳಬೇಕೆಂದು ರೈತರ ಒತ್ತಾಯವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

