ಮೇಳದಲ್ಲಿ ಮೆಚ್ಚುಗೆ ಗಳಿಸಿದ ಸೌರದೀಪ, ಮೊಬೈಲ್ ಚಾರ್ಜರ್
ಗುಲ್ಬರ್ಗ: ಕೂಡಲ ಸಂಗಮದಲ್ಲಿ ಡಿ.2ರಂದು ನಡೆದ ರಾಜ್ಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಗುಲ್ಬರ್ಗ ನೂತನ ವಿದ್ಯಾಲಯ ಮಕ್ಕಳು ಸಿದ್ಧಪಡಿಸಿರುವ ಸೌರದೀಪ ಹಾಗೂ ಸೌರ ಮೊಬೈಲ್ ಚಾರ್ಜರ್‌ಗಳು ಮೆಚ್ಚುಗೆ ಪಡೆದವು.
ಗುಲ್ಬರ್ಗದಲ್ಲಿ ನಡೆದ 21ನೇ ಅಖಿಲ ಕರ್ನಾಟಕ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ನೂತನ ವಿದ್ಯಾಲಯ ಕನ್ಯಾ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಸ್ವತಃ ತಯಾರಿಸಿದ ಸೋಲಾರ್ ಲ್ಯಾಂಪ್ ಮತ್ತು ಸೋಲಾರ್ ಮೊಬೈಲ್ ಚಾರ್ಟರ್ ಪ್ರಾತ್ಯಕ್ಷಿಕೆ ತಯಾರಿಸಿ ಸಾರ್ವಜನಿಕರ ಗಮನ ಸೆಳೆದು ಮೊದಲ ಸ್ಥಾನ ಪಡೆದಿದ್ದರು. ಇದೇ ಪ್ರಾತ್ಯಕ್ಷಿಕೆಯನ್ನೇ ರಾಜ್ಯಮಟ್ಟದಲ್ಲಿಯೂ ಪ್ರದರ್ಶಿಸಲಾಗಿತ್ತು.
ವಿದ್ಯಾರ್ಥಿನಿಯರಾದ ಮೇದಿನಿ ಅಕ್ಮಂಚಿ, ರೂಪಾ ಎಲ್, ಅಪೂರ್ವ ಭಾಗ್ಯ, ಭವಾನಿ ಮತ್ತು ಮಾಯಾ ಮಾತನಾಡಿ, ಇಂದು ನಾವು ವಿದ್ಯುತ್ ಕೊರತೆಯನ್ನು ಅನುಭವಿಸುತ್ತಿದ್ದು, ಲೋಡ ಶೆಡ್ಡಿಂಗ್ ಮೂಲಕ ಕರೆಂಟ್ ತೆಗೆಯಲಾಗುತ್ತಿದೆ. ಹೀಗಾಗಿ ನಿರಂತರ ದೊರಕುವ ಸೌರಶಕ್ತಿಯನ್ನು ಬಳಸಿ ಸೋಲಾರ್ ಟೇಬಲ್ ಲ್ಯಾಂಪ್‌ನ್ನು ಬಳಸಿ ವಿದ್ಯುತ್ ಇಲ್ಲದ ಸಮಯದಲ್ಲಿ ಬಳಸಬಹುದಾಗಿದೆ ಹಾಗೂ ವಿದ್ಯುತ್ ವ್ಯಯವಾಗುವುದನ್ನು ತಪ್ಪಿಸಲು ಮೊಬೈಲ್ ಚಾರ್ಜರ್ ತಯಾರಿಸಲಾಗಿದೆ ಎಂದು ವಿವರಿಸಿದರು. ಶಿಕ್ಷಕ ಚಂದ್ರಕಾಂತ ಸಾವತ್ಕರ್ ಮಾರ್ಗದರ್ಶನದಲ್ಲಿ ಈ ವಿದ್ಯಾರ್ಥಿನಿಯರು ಈ ಪ್ರಾತ್ಯಕ್ಷಿಕೆಗಳನ್ನು ತಯಾರಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

