50 ಸಾವಿರ ಹಿಂತಿರುಗಿಸಿದ ವ್ಯಾಪಾರಿ
ಗುಲ್ಬರ್ಗ/ಶಹಾಬಾದ್: ಹಣಕ್ಕಾಗಿ ಏನೆಲ್ಲಾ ಮಾಡಲು ಹೇಸದವರು ಹೆಚ್ಚಿರುವ ಪ್ರಸ್ತುತ ದಿನಗಳಲ್ಲಿ 50 ಸಾವಿರ ನಗದು ಇರುವ ಚೀಲವನ್ನು ವಾಪಸ್ ನೀಡಿದ ಘಟನೆ ಭಂಕೂರ ಗ್ರಾಮದ ಶಾಂತನಗರ ಬಡಾವಣೆಯಲ್ಲಿ ನಡೆದಿದೆ.
ಹಣ್ಣಿನ ವ್ಯಾಪಾರಿ ಅಬ್ದುಲ್ ಖಾದರ್ ಶಾಂತನಗರದ ಅಂಗಡಿಗೆ ಗುರುವಾರ ಮಧ್ಯಾಹ್ನ ಬೀದರ್ನ ವ್ಯಕ್ತಿ ಅಶೋಕ ದಶರಥ ಹಣ್ಣು ಖರೀಸಿದಿಸಲು ಬಂದರು. ಹಣದ ಚೀಲವನ್ನು ಬಂಡಿಯಲ್ಲಿಟ್ಟು ಹೊರಟು ಹೋದರು. ಕೆಲ ಸಮಯದ ನಂತರ ಚೀಲವನ್ನು ಗಮನಿಸಿದ ಖಾದರ್ ಅಣ್ಣ ಮಹ್ಮದ್ ರಫಿಕ್ಗೆ ವಿಷಯ ತಿಳಿಸಿದ್ದಾರೆ.
ರಫೀಕ್ ಸ್ನೇಹಿತರನ್ನು ಕರೆದು ಬ್ಯಾಗನ್ನು ಪರಿಶೀಲಿಸಿ, ಅದರಲ್ಲಿ 50 ಸಾವಿರ ಹಣವಿರುವ ಬಗ್ಗೆ ಖಾತರಿ ಪಡಿಸಿಕೊಂಡರು. ವಿಳಾಸ ಅಥವಾ ಫೋನ್ ಸಂಖ್ಯೆ ಸಿಗದಿದ್ದಾಗ ಕಾದರು. ಕೆಲ ಗಂಟೆಗಳ ನಂತರ ಬ್ಯಾಗ್ ಕಳೆದುಕೊಂಡ ವ್ಯಕ್ತಿ ಸ್ಥಳಕ್ಕೆ ಹಾಜರಾಗಿ ಸಹೋದರರಿಗೆ ಹಣ ಕಳೆದ ಬಗ್ಗೆ ವಿವರ ಮತ್ತು ಸೂಕ್ತ ಗುರುತು ನೀಡಿ 50 ಸಾವಿರ ನಗದು ವಾಪಸ್ ಪಡೆದರು.
ಹಣ ವಾಪಸ್ ಪಡೆದ ವ್ಯಕ್ತಿ ಖುಷಿಯಲ್ಲಿ ಬಹುಮಾನ ಕೊಡಲು ಹೋದರೂ ವಿನಯದಿಂದಲೇ ನಿರಾಕರಿಸಿದ ಖಾದರ್ ಹಾಗೂ ರಫೀಕ್, ಇಂತಹ ಹಲವು ಘಟನೆಗಳು ನಮ್ಮ ಅಂಗಡಿಯಲ್ಲಿ ನಡೆದಿವೆ. ಒಂದು ಸಾರಿ ಚಿನ್ನದ ಸರವಿದ್ದ ಬ್ಯಾಗೊಂದನ್ನು ಪ್ರಯಾಣಿಕರು ಬಿಟ್ಟು ಹೋಗಿದ್ದರು. ನಂತರ ಅವರಿಗೆ ವಾಪಸ್ ಮಾಡಲಾಯಿತು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

