ಗುಲ್ಬರ್ಗಾ

ಸುದ್ದಿ ಸಂಕ್ಷೇಪ

Published On :

ಕಾಮನಟಗಿ: ಗೀತಾ ಜಯಂತಿ ಆಚರಣೆ
ಹುಣಸಗಿ: ಸಮೀಪದ ಕಾಮನಟಗಿ ಗ್ರಾಮದಲ್ಲಿ ಡಿ.13 ರಂದು ಬೆಳಿಗ್ಗೆ 8.30 ರಿಂದ ಯೋಗಿಶ್ವರ ಯಾಜ್ಞವಲ್ಕ್ಯ ಸಂಘ ಕಾಮನಟಗಿ ಇವರ ಆಶ್ರಯದಲ್ಲಿ ಗೀತಾ ಜಯಂತಿಯ ಅಂಗವಾಗಿ ಸಾಮೂಹಿಕ ಗೀತಾ ಪಾರಾಯಣ ಕಾರ್ಯಕ್ರಮ ನಡೆಸಲಾಗುವುದು ಎಂದು ಯೋಗಿಶ್ವರ ಯಾಜ್ಞವಲ್ಕ್ಯ ಸಂಘದ ಅಧ್ಯಕ್ಷ ಡಾ.ಗೋವಿಂದ ಜಹಾಗೀರದಾರ ತಿಳಿಸಿದ್ದಾರೆ. ವೇ.ಮೂ. ಹಣುಮಂತಾಚಾರ್ಯ ಪುರೋಹಿತ್ ಸಾನಿಧ್ಯ ವಹಿಸುವರು. ವೇ.ಮೂ. ಜಗನ್ನಾಥಾಚಾರ್ಯ ಜೋಷಿ ಕೊಡೇಕಲ್ಲ ಸಮ್ಮುಖ ವಹಿಸಿಕೊಳ್ಳುವರು. ನಿವೃತ್ತ ಉಪನ್ಯಾಸಕರಾದ ರಾಮಚಂದ್ರಪ್ಪಗೌಡ ದೇವಾಪುರ ಉಪನ್ಯಾಸ ನೀಡುವರು. ಹಿರಿಯರಾದ ಮನೋಹರರಾವ್ ಕುಲಕರ್ಣಿ ಉಪನ್ಯಾಸ ನೀಡಲಿದ್ದಾರೆ ಎಂದು ಯೋಗಿಶ್ವರ ಯಾಜ್ಞವಲ್ಕ್ಯ ಸೇವಾ ಸಂಘ ತಿಳಿಸಿದ್ದಾರೆ.
ನವ ಸಾಕ್ಷರರಿಗೆ ವೃತ್ತಿ ಕೌಶಲ್ಯ ತರಬೇತಿ
ಶಹಾಪುರ: ತಾಲೂಕಿನ ಬೇವಿನಳ್ಳಿಯಲ್ಲಿ ಒನಕೆ ಓಬವ್ವ ವಿವಿಧೋದ್ದೇಶ ಮಹಿಳಾ ಸಂಘದ ಆಶ್ರಯದಲ್ಲಿ ನವ ಸಾಕ್ಷರರಿಗೆ ವೃತ್ತಿಪರ ಕೌಶಲ್ಯ ತರಬೇತಿ ಕಾರ್ಯಾಗಾರ ನಡೆಯಿತು.  ಶಿರವಾಳ ತಾಪಂ ಸದಸ್ಯರಾದ ನೀಲಮ್ಮ ಭೀಮರಾಯ ನಾಯ್ಕ್ ಈ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು. ತಾಲುಕು ದಸಂಸ ಸಂಚಾಲಕ ಸಿದ್ದಣ್ಣ ಹೊಸಮನೆ ಅತಿಥಿಗಳಾಗಿ ಆಗಮಿಸಿದ್ದರು, ತಾಲುಕು ಸಾಕ್ಷರ ಸಮಿತಿ ಸಂಚಾಲಕರಾದ ಶರಣಮ್ಮ ಹೊಸಮನಿ ಸಾಕ್ಷರ ಯೋಜನೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖಂಡ ಮಲ್ಲಣ್ಣ ದೋರಿ ಭೀಮಣ್ಣ ಚೆನ್ನೂರ, ಮಲ್ಲಣ್ಣ ಹೊಸಮನಿ ಶಿರವಾಳ ಆಗಮಿಸಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಒನಕೆ ಓಬವ್ವ ಸಂಘದ ಅಧ್ಯಕ್ಷರಾದ ಮುದ್ದಮ್ಮ ಹೊಸಮನಿ ವಹಿಸಿದ್ದರು. ಶರಣಮ್ಮ ಸ್ವಾಗತಿಸಿದರು. ಮಲ್ಲಪ್ಪ ವಂದಿಸಿದರು.
ರಸ್ತೇಲಿ ಪಾರ್ಕಿಂಗ್; ನಾಗರಿಕರಿಗೆ ಕಿರಿಕಿರಿ
ಶಹಾಪುರ: ಪಟ್ಟಣದ ಹಲವೆಡೆ ವಾಹನಗಳ ಪಾರ್ಕಿಂಗ್‌ನಿಂದಾಗಿ ರಸ್ತೆಯನ್ನೇ ಆಕ್ರಮಿಸಿದ್ದು, ವಾಹನ ಸಂಚಾರಕ್ಕೆ ಹರಸಾಹಸ ಪಡುವಂಥ ಸ್ಥಿತಿ ನಿರ್ಮಾಣವಾಗಿದೆ. ಬೀದರ- ಬೆಂಗಳೂರು ರಾಜ್ಯ ಹೆದ್ದಾರಿಯ ಸಿ.ಬಿ. ಕಮಾನದಿಂದ ಹಿಡಿದು ಹೊಸ ಬಸ್ ನಿಲ್ದಾಣದವರೆಗೆ ರಸ್ತೆ ಅತಿಕ್ರಮಣ ಮಾಮೂಲು ಎಂಬಂತಾಗಿದೆ. ಗ್ಯಾರೇಜ ಲೈನ್, ಬಸವೇಶ್ವರ ವೃತ್ತ ಹಳೇ ಬಸ್ ನಿಲ್ದಾಣದ ಮುಖ್ಯ ರಸ್ತೆಯಲ್ಲಿ ಸಂಚಾರ ಬಹಳ ದುಸ್ತರವಾಗಿದೆ. ಮುಖ್ಯವಾಗಿ ಗ್ಯಾರೇಜು ಲೈನ್‌ದಲ್ಲಂತೂ ಪರಿಸ್ಥಿತಿ ತೀರಾ ಬಿಗಡಾಯಿಸಿದೆ. ಇನ್ನಾದರೂ ಸಂಬಂಧಪಟ್ಟವರು ಸಮಸ್ಯೆ ಅರಿತು ಪರಿಹರಿಸಲು ಮುಂದಾಗಬೇಕಿದೆ.
ಇಂದು ಧರಣಿ
ಶಹಾಪುರ: ತಾಲೂಕಿನ ದೋರನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಖಂಡಿಸಿ ಡಿ. 11ರಂದು ಗ್ರಾಪಂ ಕಾರ್ಯಾಲಯದ ಮುಂದೆ ಧರಣಿ ಸತ್ಯಾಗ್ರಹವನ್ನು ಸಮತಾ ಸೈನಿಕದಳ ಹಮ್ಮಿಕೊಂಡಿದೆ ಎಂದು ತಾಲೂಕು ಸಮಿತಿಯ ಅಧ್ಯಕ್ಷ ನಿಂಗಪ್ಪ ಕಸನ್ ತಿಳಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.