ಕಾಲುವೆ ಆಧುನೀಕರಣ ಕಾಮಗಾರಿ ಕಳಪೆ
ಕ.ಪ್ರ. ವಾರ್ತೆ ಚಿಂಚೋಳಿ ಡಿ.12
ತಾಲೂಕಿನ ರೈತರ ಜೀವನಾಡಿ ಚಂದ್ರಂಪಳ್ಳಿ ನೀರಾವರಿ ಯೋಜನೆಯ ಮುಖ್ಯ ಕಾಲುವೆಗಳ ಅಧುನೀಕರಣ ಕಾಮಗಾರಿಗಳು ಅತ್ಯಂತ ಕಳಪೆಯಾಗಿವೆ. ಈಗಾಗಲೇ ಸಿಮೆಂಟ್ ಲೈನಿಂಗ್ನಿಂದ ಕೂಡಿದ ಕಾಲುವೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ದುರಸ್ತಿಗಾಗಿ ಸರ್ಕಾರಕ್ಕೆ ಹೆಚ್ಚುವರಿ ಹಣ ಬಿಡುಗಡೆಗೊಳಿಸಲು ಪ್ರಸ್ತಾವನೆ ಸಲ್ಲಿಸಬೇಕೆಂದು ಶಾಸಕ ಡಾ. ಉಮೇಶ ಜಾಧವ್ ನೀರಾವರಿ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಿನ ಚಂದ್ರಂಪಳ್ಳಿ ನೀರಾವರಿ ಯೋಜನೆಯ ಬಲದಂಡೆ ಮುಖ್ಯ ಕಾಲುವೆಯಲ್ಲಿ ನೀರು ಸೋರಿಕೆಯಿಂದ ರೈತರ ಹೊಲಗಳಿಗೆ ನೀರು ಬರುತ್ತಿಲ್ಲ ಎಂಬ ರೈತರ ದೂರಿನ ಮೇರೆಗೆ ಕರ್ನಾಟಕ ನೀರಾವರಿ ಯೋಜನೆಯ ಮುಖ್ಯ ಎಂಜಿಯರ್, ಬಿ.ದೇವರಾಜ್ ಮತ್ತು ಕಾರ್ಯನಿರ್ವಾಹಕ ಅಭಿಯಂತರ ಎ.ಎಫ್. ಮುಲ್ಲಾ ಮುಂತಾದವರೊಂದಿಗೆ ಗುರುವಾರ ಕಲಭಾವಿ, ಚಂದಾಪುರ, ಭೋಗಾಲಿಂಗದಳ್ಳಿ ಗ್ರಾಮಗಳ ಹತ್ತಿರ ಮುಖ್ಯಕಾಲುವೆಗೆ ಭೇಟಿ ನೀಡಿ ಪರಿಶೀಲಿಸಿದರು.
ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ: ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಎರಡ್ಮೂರು ವರ್ಷಗಳಿಂದ ಮುಖ್ಯ ಕಾಲುವೆಗಳಿಗೆ ಸಿಮೆಂಟ್ ಲೈನಿಂಗ್ ಕಾಮಗಾರಿ ನಡೆಸಲಾಗಿತ್ತು. ಆದರೆ ಕಾಮಗಾರಿ ತುಂಬಾ ಕಳೆಪೆಮಟ್ಟದಿಂದ ನಡೆದಿರುವುದರಿಂದ ನೀರು ಸೋರಿಕೆಯಾಗುತ್ತಿದೆ. ಇದರಿಂದ ರೈತರಿಗೆ ಸಮರ್ಪಕವಾಗಿ ನೀರು ಸಿಗುತ್ತಿಲ್ಲ. ಬೆಳೆಗಳು ಒಣಗಿ ಹೋಗುತ್ತಿವೆ. ಹೀಗಾಗಿ ಬಿರುಕು ಬಿಟ್ಟ ಕಾಲುವೆಗಳ ದುರಸ್ತಿಗಾಗಿ ಹೆಚ್ಚುವರಿ ಅನುದಾನ ಮಂಜೂರಾತಿಗಾಗಿ ಸರ್ಕಾರಕ್ಕೆ ನೀರಾವರಿ ಯೋಜನಾ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಅಧಿಕಾರಿಗಳು ಕಾಲುವೆಗಳಲ್ಲಿ ಕಂಡು ಬಂದಿರುವ ಎಲ್ಲ ಕಳಪೆ ಮಟ್ಟದ ಕಾಮಗಾರಿಗಳ ಪರಿಶೀಲನೆ ನಡೆಸಿ ದುರಸ್ತಿಗಾಗಿ ಬೇಕಾಗುವ ಕ್ರಿಯಾಯೋಜನೆಯನ್ನು ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದೆಂದು ಭರವಸೆ ನೀಡಿದ್ದಾರೆಂದು ಶಾಸಕ ಡಾ. ಉಮೇಶ ಜಾಧವ್ ತಿಳಿಸಿದರು.
ದುರಸ್ತಿ ಕೈಗೊಳ್ಳುವ ಭರವಸೆ: ಕರ್ನಾಟಕ ನೀರಾವರಿ ನಿಗಮ ನಿಯಮಿತ ಯೋಜನೆ ಮುಖ್ಯ ಎಂಜಿನಿಯರ್ ಬಿ.ದೇವರಾಜ ಮಾತನಾಡಿ, ಚಂದ್ರಂಪಳ್ಳಿ ನೀರಾವರಿ ಯೋಜನೆಯ ಮುಖ್ಯ ಕಾಲುವೆಗಳಲ್ಲಿ ಬಿರುಕು ಬಿಟ್ಟ ಸ್ಥಳಗಳಲ್ಲಿ ದುರಸ್ತಿ ಕೈಕೊಳ್ಳಲಾಗುವುದು. ಬಾಕಿಯಿರುವ ಉಪ ಕಾಲುವೆ ಮತ್ತು ಹೊಲಗಾಲುವೆಗಳನ್ನು ದುರಸ್ತಿಗೊಳಿಸಲಾಗುವುದು. ಸದ್ಯ ರೈತರ ಬೆಳೆಗಳಿಗೆ ನೀರು ಅವಶ್ಯಕತೆ ಇರುವುದರಿಂದ ಬರುವ ದಿನಗಳಲ್ಲಿ ಕಾಲುವೆಗಳನ್ನು ದುರಸ್ತಿ ಮಾಡಲಾಗುವುದೆಂದು ತಿಳಿಸಿದರು.
ಚಂದ್ರಂಪಳ್ಳಿ ನೀರಾವರಿ ಯೋಜನೆ ಎಇಇ ವಿಜಯಕುಮಾರ ಸಿಂಧೆ, ಜೆಇ ಕಾಂಬಳೆ ಅಶೋಕ, ಕೆ.ಎಂ. ಬಾರಿ,ಅಬ್ದುಲ್ ಬಾಸಿತ್, ರಾಜು ರಾಠೋಡ್, ಶರಣರೆಡ್ಡಿ, ಸಿದ್ದಣ್ಣಗೌಡ, ಜಇ ಉಮೇಶ, ದಿನೇಶ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

