ದ್ರಾಕ್ಷಿ ಬೆಳೆಗಾರರ ಸಾಲಮನ್ನಾ ಮಾಡಿ
ಗುಲ್ಬರ್ಗ: ಬರ ಪೀಡಿತ ದ್ರಾಕ್ಷಿ ಬೆಳೆಗಾರರ ಸಾಲ ಮತ್ತು ಬಡ್ಡಿ ಮನ್ನಾ ಮಾಡಬೇಕೆಂದು ಕರ್ನಾಟಕ ದ್ರಾಕ್ಷಿ ಬೆಳೆಗಾರರ ಸಂಘ ವಿಜಾಪುರ ಘಟಕದ ಅಧ್ಯಕ್ಷ ಅಭಯಕುಮಾರ್ ಎಸ್. ನಾಂದ್ರೇಕರ್ ಒತ್ತಾಯಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉತ್ತರ ಕರ್ನಾಟಕ ಭಾಗದ ದ್ರಾಕ್ಷಿ ಬೆಳೆಗಾರರು ಕಳೆದ 10 ವರ್ಷಗಳಿಂದ ವ್ಯಾಪಕ ನಷ್ಟ ಅನುಭವಿಸುತ್ತಿದ್ದರು ಆಳಿದ ಸರ್ಕಾರಗಳು ಮಾತ್ರ ಅವರ ಬೇಡಿಕೆಗೆ ಸ್ಪಂದಿಸಲೇ ಇಲ್ಲ ಎಂದು ಆರೋಪಿಸಿದರು.ಉತ್ತರ ಕರ್ನಾಟಕದ ವಿಜಾಪುರ, ಬಾಗಲಕೋಟೆ, ಬೆಳಗಾಂವ, ಕೊಪ್ಪಳ, ಗದಗ, ಬಳ್ಳಾರಿ, ಬೀದರ್ ಮತ್ತು ಗುಲ್ಬರ್ಗ ಜಿಲ್ಲೆಗಳಲ್ಲಿ 1990ರಿಂದ ಇಲ್ಲಿಯವರೆಗೆ ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕುಗಳಲ್ಲಿ ಒಟ್ಟು ದ್ರಾಕ್ಷಿ ಬೆಳೆಗಾರರ ಸಾಲದ ಮೊತ್ತ 689 ಕೋಟಿ ಇದರಲ್ಲಿ 178 ಕೋಟಿ ಬಡ್ಡಿ ಇರುತ್ತದೆ. ಆದರೆ ಕೇಂದ್ರ ಸರ್ಕಾರ ಅಂಶಿಕ ಸಹಾಯಧನ 200 ಕೋಟಿ ಕೇವಲ ಬಡ್ಡಿ ಮನ್ನಾ ಮಾಡಲು ಮುಂದಾಗಿದ್ದು, ಅದರೊಂದಿಗೆ ಸಾಲವೂ ಮನ್ನಾ ಮಾಡಲು ಒತ್ತಾಯಿಸಿದರು. ಈಗ ಘೋಷಿಸಿರುವ ಕೇಂದ್ರದ ಪ್ಯಾಕೇಜ್ ಜತೆಗೆ ರಾಜ್ಯ ಸರ್ಕಾರ ಸಹಾಯಧನ ಹಾಗೂ ಬ್ಯಾಂಕುಗಳು ಸೇರಿ ಅಸಲು ಹಾಗೂ ಬಡ್ಡಿ ಎಲ್ಲ 689 ಕೋಟಿ ಸಾಲ ಮನ್ನಾ ಮಾಡಿ ಸಾಲದಿಂದ ರೈತರನ್ನು ವಿಮುಕ್ತಗೊಳಿಸಲು ಸಿಎಂಗೆ ಆಗ್ರಹಿಸಿದರು.
ಗುಲ್ಬರ್ಗ, ಯಾದಗಿರಿ ರೈತರಿಗೆ ಅನ್ಯಾಯ: ಕೇಂದ್ರ ಸರ್ಕಾರ ಎಲ್ಲ ದ್ರಾಕ್ಷಿ ಬೆಳೆಗಾರರ ರಾಷ್ಟೀಕೃತ, ಸಹಕಾರಿ ಬ್ಯಾಂಕುಗಳ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಲು ಆದೇಶ ನೀಡಿದೆ. ಆದರೆ, ಗುಲ್ಬರ್ಗ ಮತ್ತು ಯಾದಗಿರಿ ಜಿಲ್ಲೆಗಳ ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕುಗಳು ತಮ್ಮ ಬ್ಯಾಂಕುಗಳಲ್ಲಿ ದ್ರಾಕ್ಷಿ ಬೆಳೆಗಾರರು ಪಡೆದ ಸಾಲ ಬಗ್ಗೆ ಮಾಹಿತಿ ನೀಡದೆ ಇರುವುದರಿಂದ ಈ ಜಿಲ್ಲೆಗಳ ರೈತರು ಬಡ್ಡಿ ಮನ್ನಾದಿಂದ ವಂಚಿತಗೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಖರ್ಗೆ ಅವರಿಗೆ ಮನವಿ: ಕೇಂದ್ರ ಕೃಷಿ ಸಚಿವ ಶರದ್ ಪವಾರ ಮತ್ತು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬೆಳೆಗಾರರ ನಿಯೋಗ ಭೇಟಿಯಾಗಿ ಬರ ಪೀಡಿತ ದ್ರಾಕ್ಷಿ ಬೆಳೆಗಾರರ ಸಾಲ ಮತ್ತು ಬಡ್ಡಿ ಎರಡೂ ಮನ್ನಾ ಮಾಡುವಂತೆ ಕೋರಿಕೊಳ್ಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

