ಗುಲ್ಬರ್ಗಾ

ದೇವಾಪುರ ಶಾಲೆ: ಬೈಸಿಕಲ್ ವಿತರಣೆ

Published On :

ಸುರಪುರ: ಬಡ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸರ್ಕಾರಗಳು ರೂಪಿಸುತ್ತಿರುವ ಜನಪರ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಶಿಕ್ಷಣ ಪಡೆಯುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರುವಂತೆ ದೇವಪುರ ಸರ್ಕಾರಿ ಪ್ರೌಢಶಾಲೆಯ ಮುಖ್ಯಗುರು ಪ್ರಾಣೇಶ ಶಹಪುರಕರ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.ತಾಲೂಕಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಮಂಜೂರಾಗಿದ್ದ ಸೈಕಲ್‌ಗನ್ನು ವಿತರಣೆ ಮಾಡಿದ ಬಳಿಕ ಅವರು, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪರಿಪೂರ್ಣ ಹಾಗೂ ಸಾರ್ಥಕ ಜೀವನ ನಡೆಸಲು ಪ್ರತಿಯೊಬ್ಬರೂ ಶಿಕ್ಷಣ ಪಡೆಯುವುದು ಅಗತ್ಯವಾಗಿದೆ. ಸರ್ಕಾರಗಳು ಈ ನಿಟ್ಟಿನಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆ ವಿಶೇಷ ಆದ್ಯತೆ ನೀಡುತ್ತಿದ್ದು, ಸೈಕಲ್, ಸಮವಸ್ತ್ರ, ಮಧ್ಯಾಹ್ನದ ಬಿಸಿಯೂಟ, ಕ್ಷೀರಭಾಗ್ಯ, ಕಬ್ಬಿಣಾಂಶದ ಮಾತ್ರೆ ಇನ್ನಿತರ ಯೋಜನೆಗಳನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಂಡು ಶೈಕ್ಷಣಿಕ ಅಭಿವೃದ್ಧಿ ಹೊಂದುವಂತೆ ಸಲಹೆ ನೀಡಿದರು.ದೇವಪುರ ಗ್ರಾಪಂ ಉಪಾಧ್ಯಕ್ಷ ಪರಶುರಾಮ, ಮಾಜಿ ಅಧ್ಯಕ್ಷ ಚನ್ನಬಸಪ್ಪಗೌಡ ಪಾಟೀಲ್, ಸದಸ್ಯ ರಮೇಶ ಕವಲಿ, ಗ್ರಾಮಸ್ಥ ಹುಸೇನ್ ಸಾಬ್ ತಿಂಥಣಿ, ಪರಮಣ್ಣ ಸಗರ, ಜಲಾಲ್ ಸಾಬ್ ಚೌದರಿ, ಶಿಕ್ಷಕ ಇಬ್ರಾಹಿಂ, ಶಿವುಪುತ್ರ, ಪ್ರಕಾಶ ಪಾಟೀಲ್, ರಾಜಶ್ರೀ ಇದ್ದರು.
ರುಕ್ಮಾಪುರದಲ್ಲಿ
ಬಸವೇಶ್ವರ ಜಾತ್ರೆ
ಸುರಪುರ: ಸಮೀಪದ ರುಕ್ಮಾಪುರ ಕೊಟ್ಟೂರು ಬಸವೇಶ್ವರ ಜಾತ್ರಾ ಮಹೋತ್ಸವ ರುಕ್ಮಾಪುರ ಹಿರೇಮಠದ ಗುರುಶಾಂತಮೂರ್ತಿ ಶಿವಾಚಾರ್ಯರ ಸಾನ್ನಿಧ್ಯದಲ್ಲಿ 19ರಂದು ಜರುಗಲಿದೆ. ಡಿ. 18 ರಂದು ರಾತ್ರಿ ಪುರವಂತರ ಸೇವೆ, ಪಲಕ್ಕಿ ಉತ್ಸವ, 19ರಂದು ಸಂಜೆ 6.35ಕ್ಕೆ ರಥೋತ್ಸವ, 21ರಂದು ಹುಚ್ಚಾಯೋತ್ಸವ 23 ಕಳಸಾರೋಹಣೆ ಜಾತ್ರೆ ಸಂಪನ್ನಗೊಳ್ಳಲಿದೆ ಎಂದು ಭಕ್ತ ಹಣಮಗೌಡ ಪೊಲೀಸ್ ಪಾಟೀಲ್, ಮುದಕಪ್ಪಗೌಡ ಮಾಲಿ ಪಾಟೀಲ್, ಹುಲೆಗಮ್ಮ ಗೌಡಸಾನಿ, ಕೊಟ್ರೆಪ್ಪ ಹಿರೇಗೌಡ, ಸೋಮಶೇಖರ ಗೋಗಿ, ಸಂಗಣ್ಣ ಮಿಣಜಗಿ, ಕಾಶಿನಾಥ ಬಣಗಾರ, ವಿಶ್ವನಾಥ ದೇವಶೆಟ್ಟಿ ತಿಳಿಸಿದ್ದಾರೆ.
ಉದ್ದಿಮೆಯಿಂದ ನಿರುದ್ಯೋಗ ದೂರ
ಯಾದಗಿರಿ: ಹಿಂದುಳಿದ ಯಾದಗಿರಿ ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆ ನಿವಾರಿಸಬೇಕಾದರೆ ಖಾಸಗಿ ಹೊಸ ಉದ್ದಿಮೆಗಳ ಸ್ಥಾಪನೆ ಅಗತ್ಯ ಎಂದು ಉದ್ಯಮಿ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡ ಸಾಯಿಬಣ್ಣ ಬೋರಬಂಡಾ ಹೇಳಿದರು. ರವಿವಾರ ನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಬೆಂಗಳೂರಿನ ಶಾಹಿ ಏಕ್ಸ್‌ಪೋಟ್ಸ್ ಕಂಪನಿ ಹಮ್ಮಿಕೊಂಡಿದ್ದ ಬೃಹತ್ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದರು. ಕಂಪನಿಯ ಹಿರಿಯ ಕಾರ್ಯನಿರ್ವಾಹಕ ಆಧಿಕಾರಿ ಕೀರ್ತಿಕುಮಾರ್ ಮಾತನಾಡಿದರು. ಪ್ರಾಸ್ತಾವಿಕವಾಗಿ ನವೀನ್ ಮಾತನಾಡಿ, ಕಂಪನಿಯ ಚಟುವಟಿಕೆಗಳನ್ನು ವಿವರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.