ಗಣಿತ ಹೇಳಿಕೊಟ್ಟು ನಲಿದ ಮಕ್ಕಳು
ಗುರುಮಠಕಲ್: ಗುರುಮಠಕಲ್ ಪಟ್ಟಣದ ಗಾಂಧಿ ಮೈದಾನದಲ್ಲಿ ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳ ಮಕ್ಕಳಿಂದ ಗಣಿತ ಉತ್ಸವ ನಡೆಯಿತು.
ಕೂಡಿ ಕಳೆಯೋ ಲೆಕ್ಕ: ಕ್ಲಸ್ಟರ್ ವ್ಯಾಪ್ತಿಯ ಕಾರ್ಯಕ್ರಮದಲ್ಲಿ ಗುರುಮಠಕಲ್ ಪಟ್ಟಣದ 15 ಶಾಲೆಗಳು ಸೇರಿದಂತೆ ಕ್ಲಸ್ಟರ್ ಎಲ್ಲಾ ಶಾಲೆಗಳ ಮಕ್ಕಳು ಭಾಗವಹಿಸಿದ್ದರು. ಪ್ರತಿ ಶಾಲೆಯಿಂದ ನಾಲ್ಕು ಚಟುವಟಿಕೆಗಳನ್ನು ಈ ಗಣಿತ ಉತ್ಸವದಲ್ಲಿ ಪ್ರದರ್ಶಿಸಲಾಯಿತು. ಮಕ್ಕಳು ಈ ಉತ್ಸವದಲ್ಲಿ ದಶಮಾಂಶ ಪದ್ಧತಿ, ದ್ವಿಮಾನ್ ಪದ್ಧತಿ, ಬೀಜ ಗಣಿತಕ್ಕೆ ಸಂಬಂಧಿಸಿದ ಸೂತ್ರಗಳನ್ನು ವ್ಯವಹಾರಿಕ ಗಣಿತವಾಗಿ ಹೇಗೆ ಉಪಯೋಗವಾಗುತ್ತದೆ. ದಲ್ಲಾಳಿಯು ಯಾವ ರೀತಿ ಕಮೀಷನ್ ತೆದುಕೊಳ್ಳುತ್ತಾರೆ. ಸರಳ ಗುಣಕಾರ, ಸರಳ ಭಾಗಕಾರ, ಮ್ಯಾಜಿಕ್ ಸಂಖ್ಯೆಗಳು ಇತ್ಯಾದಿಯಾಗಿ ಮಕ್ಕಳು ಮಕ್ಕಳಿಗೆ ಕಲಿಸಿಕೊಟ್ಟರು.
ಚಟುವಟಿಕೆ: ಮಕ್ಕಳಿಗೆ ಚಟುವಟಿಕೆಗಳ ಮುಖಂತರ ಹೇಗೆ ಕಲಿಸಿಕೊಡಬೇಕೆಂದು ಮಕ್ಕಳ-ಮಕ್ಕಳ ಮಧ್ಯೆ ನಡೆಯುವಂತಹ ಒಂದು ಶಾಲೆ ಮಕ್ಕಳನ್ನು ಇನ್ನೊಂದು ಶಾಲೆ ಮಕ್ಕಳಿಗೆ ಹೇಳಿಕೊಡುವಂತಹ ಚಟುವಟಿಕೆಗಳು ಅತ್ಯದ್ಭುವಾಗಿತ್ತು.
ಕಾರ್ಯಕ್ರಮದಲ್ಲಿ ಸುಮಾರು 2500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಭಾಗವಹಿಸಿದ ಮಕ್ಕಳು ಕಾರ್ಯಕ್ರಮದ ಉಪಯೋಗ ಪಡೆದು, ಗಣಿತ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡರು. ಇದಕ್ಕೂ ಮುನ್ನ ಬಿಆರ್ಸಿ ಮಾರುತಿ ಹುಜರಾತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಇಸಿಓ ದೇವಿಂದ್ರಪ್ಪ, ವೆಂಕಟರಡ್ಡಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪಿ. ಕಿಷ್ಟಪ್ಪ, ನಾರಾಯಣ ರಡ್ಡಿ, ಭೀಮಪ್ಪ, ಚಂದ್ರಕಾಂತ ರಡ್ಡಿ ಸೇರಿದಂತೆ ಕ್ಲಸ್ಟರ್ ಶಾಲೆಗಳ ಮಕ್ಕಳು, ಶಿಕ್ಷಕರು ಭಾಗವಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

