ಗುಲ್ಬರ್ಗಾ

ವಿಶ್ವಕರ್ಮ ಕಲ್ಯಾಣ ಮಂಟಪಕ್ಕೆ ಭರವಸೆ

Published On :

ಸುರಪುರ: ಇಲ್ಲಿಯ ಬಡಿಗೇರಾ ಬಾವಿ ಹತ್ತಿರದ ವಿಶ್ವಕ್ಛ್ಗ ಸಮಾಜಕ್ಕೆ ಸೇರಿದ ನಿವೇಶನದಲ್ಲಿ ವಿಶ್ವಕರ್ಮ ಕಲ್ಯಾಣ ಮಂಟಪ್ಪ ನಿರ್ಮಾಣಕ್ಕೆ ನನ್ನ ಸಹೋದರ ಶಾಸಕ ರಾಜಾ ವೆಂಕಟಪ್ಪನಾಯಕ ಭರವಸೆ ನೀಡಿದ್ದಾರೆ ಎಂದು ಲೋಕಸಭೆಯ ಮಾಜಿ ಸದಸ್ಯ ರಾಜಾ ರಂಗಂಪ್ಪನಾಯಕ ಹೇಳಿದರು.
ಇಲ್ಲಿಯ ಕಬಾಡಗೇರಾದ ಕಾಳಿಕಾದೇವಿ ಮಂದಿರದಲ್ಲಿ ಮಂಗಳವಾರ ವಿಶ್ವಕರ್ಮ ವಿಕಾಸ ಸಂಘ ಹಾಗೂ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ತಾಲೂಕು ಘಟಕ ಸಂಯುಕ್ತವಾಗಿ ಏರ್ಪಡಿಸಿದ್ದ ಮೌನೇಶ್ವರರ 7ನೇ ವರ್ಷದ ತೊಟ್ಟಿಲೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಆನೆಗುಂದಿ ಸಂಸ್ಥಾನದ ಸರಸ್ವತಿ ಪೀಠಾಧೀಶ ಗುರುನಾಥೇಂದ್ರ ಮಹಾಸ್ವಾಮಿ ಮತ್ತು ಶಹಪುರದ ಏಕದಂಡಗಿ ಮಠದ ಕಾಳಹಸ್ತೇಂದ್ರ ಸ್ವಾಮೀಜಿ ಹಾಗೂ ಸೂರ್ಯನಾರಾಯಣ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಪುರಸಭೆ ಅಧ್ಯಕ್ಷ ದೇವಿಂದ್ರಪ್ಪ ಕಳ್ಳಿಮನಿ, ಅಖಿಲ ಕರ್ನಾಟಕ ವಿಶ್ವ ಕರ್ಮ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಐಸಿ ಪಂಚಾಳ, ಉತ್ತರ ಕರ್ನಾಟಕ ಸಂಚಾಲಕ ವೀರೇಂದ್ರ ಇನಾಂದಾರ್, ದೇವರಗೋನಾಲದ ಮೌನೇಶ್ವರ ದೇವಸ್ಥಾನ ಅರ್ಚಕ ನಿಂಗಯ್ಯ ಮುತ್ತ್ಯಾ, ಬಸವರಾಜ ನಾಯ್ಕಲ್, ಕೆ. ವೀರಪ್ಪ ವೇದಿಕೆಯಲ್ಲಿದ್ದರು. ದೇವಿಂದ್ರಪ್ಪ ಪತ್ತಾರ ಪ್ರಸ್ತಾವಿಕ ಮಾತನಾಡಿದರು. ಕಾಳಪ್ಪ ಶಾಬಾದಿ ಸ್ವಾಗತಿಸಿ, ಮಹೇಶ ಕುಂಟೋಜಿ ನಿರೂಪಿಸಿ, ಮನೋಹರ ಕುಂಟೋಜಿ ವಂದಿಸಿದರು.
--
ನಾಳೆ ಗ್ರಾಪಂ ಮಾಸಿಕ ಸಭೆ
ಹುಣಸಗಿ: ಇಲ್ಲಿನ ಗ್ರಾಮ ಪಂಚಾಯತನಲ್ಲಿ ಡಿ.19 ರಂದು ಬೆಳಿಗ್ಗೆ 11 ಗಂಟೆಗೆ ಆಯೋಜಿಸಲಾಗಿದೆ.   ಗ್ರಾ.ಪಂ.ಅಧ್ಯಕ್ಷ ಸುರೇಶ ನೀರಲಗಿ ಅಧ್ಯಕ್ಷತೆಯಲ್ಲಿ ಜರುಗಲಿದೆ. 2012-13ನೇ ಸಾಲಿನ ಎಂಜಿಎನ್ಆರ್ಇಜಿಎ ಯೋಜನೆಗಳ ಕಾಮಗಾರಿಗಳ ಮತ್ತು ಹೆಚ್ಚುವರಿ ಕಾಮಗಾರಿಗಳ ಪ್ರಗತಿ ಕುರಿತು, 2012-13 ನೇ ಸಾಲಿನ ರಾಜೀವ್ಗಾಂಧಿ ಚೈತನ್ಯ ಯೋಜನೆ ಅಡಿಯಲ್ಲಿ ಸ್ವಯಂ ಉದ್ಯೋಗ ಕಲ್ಪಿಸುವ ಕುರಿತು, ಎಂಜಿಎನ್ಆರ್ಇಜಿಎ ಯೋಜನೆಯಡಿ ವಾರ್ಡ್ ಸಭೆ, ಗ್ರಾಮ ಸಭೆಯ ವರದಿಗಳನ್ನು ಸಲ್ಲಿಸುವ ಕುರಿತು ಮತ್ತು ಇನ್ನಿತರ ವಿಷಯಗಳ ಕುರಿತು ಚರ್ಚಿಸಲಾಗುವುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.