'ಮಹಿಳಾ ಅಭಿವೃದ್ಧಿಗೆ ಸರ್ಕಾರ ಬದ್ಧ'
ಕ.ಪ್ರ. ವಾರ್ತೆ , ಅಫಜಲ್ಪುರ , ಡಿ.24
ಇತ್ತೀಚೆಗೆ ಮಹಿಳೆಯರ ಮೇಲೆ ಬಲತ್ಕಾರ, ದೌರ್ಜನ್ಯ ಹಾಗೂ ಮಕ್ಕಳ ಸಾಗಾಣಿಕೆ ಪ್ರಕರಣಗಳು ಹೆಚ್ಚುತ್ತಿವೆ. ಬಾಲ ಕಾರ್ಮಿಕರ ಪದ್ಧತಿ, ಕಾನೂನು ಬಾಹಿರವಾಗಿದ್ದರೂ ತಮ್ಮ ಕಟುಂಬದ ಬಡತನದ ಬೆಗೆ ತಾಳಲಾಗದೆ ಪಾಲಕರು ತಮ್ಮ ಮಕ್ಕಳನ್ನು ಹೋಟಲ್, ಗ್ಯಾರೇಜ್ ಹಾಗೂ ಹೊಲಗದ್ದೆಗಳಿಗೆ ಕೆಲಸಕ್ಕಾಗಿ ದುಡಿಯಲು ಕಳಿಸುತ್ತಿದ್ದಾರೆಂದು ಶಾಸಕ ಮಾಲೀಕಯ್ಯ ಗುತ್ತೇದಾರ ಹೇಳಿದರು.
ಪಟ್ಟಣದ ಸರ್ಕಾರಿ ಪಪೂ ಕಾಲೇಜಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಫಜಲ್ಪುರ ಇವರ ಆಶ್ರಯದಲ್ಲಿ ಮಹಿಳೆಯರ ಮತ್ತು ಮಕ್ಕಳ ಸಾಗಾಣೆಕೆ ತಡೆಗಟ್ಟಲು ತಾಲೂಕು ಮಟ್ಟದ ಬೃಹತ್ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಾಗೃತಿ ಅಭಿಯಾನ ಆರಂಭ: ಬಾಲಕಾರ್ಮಿಕ ಪದ್ಧತಿಯನ್ನು ವಿರೋಧಿಸುವ ನಿಟ್ಟಿನಲ್ಲಿ ಬಾಲ ಕಾರ್ಮಿಕ ವಿರೋಧಿ ಅಭಿಯಾನ ಎಂಬ ಕಾರ್ಯಕ್ರಮ ರೂಪಿಸಿ ಜನರಲ್ಲಿ ಬಾಲಕಾರ್ಮಿಕ ಪದ್ಧತಿ ಬಗ್ಗೆ ಜಾಗೃತಿ ಮೂಡಿಸುವುದು ಇಂದಿನ ದಿನಗಳಲ್ಲಿ ಅವಶ್ಯ. ತಾಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಹಿಳೆಯರು ಸ್ತ್ರೀ ಶಕ್ತಿ ಸಂಘಗಳ ಮೂಲಕ ಮಹಿಳೆಯರಲ್ಲಿ ಜಾಗೃತಿ ಮೂಡಿಸಿ ಅಭಿಯಾನ ಆರಂಭಿಸಿದ್ದಾರೆ ಎಂದರು.
ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣೆಕೆ ತಡೆಗಟ್ಟುವ ಕುರಿತು ಜಿಪಂ ಸದಸ್ಯರಾದ ಪ್ರಕಾಶ ಜಮಾದಾರ, ಸಿದ್ದಾರ್ಥ ಬಸರಿಗಿಡ, ಸಿಡಿಪಿಒ ಇಲಾಖೆಯ ಕಾನೂನು ಮತ್ತು ಪರಿವಿಕ್ಷಣಾಧಿಕಾರಿ ಭರತೇಶ ಶಿಲವಂತರ, ಪ್ರಭಾರಿ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ ಸರಳಾ ದೊಡ್ಡಮನಿ ಮಾತನಾಡಿದರು.
ಜಿಪಂ ಸದಸ್ಯ ನೀತಿನ ಗುತ್ತೇದಾರ, ಮತೀನ ಅಹ್ಮದ್ ಪಟೇಲ್, ಮುಖಂಡರಾದ ಸಿದ್ದನಗೌಡ ಪಾಟೀಲ್ ರೇವೂರ, ವಿಶ್ವನಾಥ ರೇವೂರ, ತಾಪಂ ಸದಸ್ಯ ಶಿವಪುತ್ರಪ್ಪ ಗೌಡಗಾಂವ, ಶ್ರೀಮಂತ ಬಿರಾದಾರ, ರಾಜು ಗುತ್ತೇದಾರ, ಇಒಎಸ್ಪಿ ನಂದಗಿರಿ, ಬಿಇಒ ಚಿತ್ರಶೇಖರ ದೇಗಲಮಡಿ, ಎಇಇ ಶರಣಬಸಪ್ಪ, ಉಪ ಪ್ರಾಂಶುಪಾಲ ಮಹಾದೇವಪ್ಪ ತಾಂಬೆ, ಮೇಲ್ವಿಚಾರಕರಾದ ನಿಂಗಮ್ಮ ಬಡದಾಳ, ಸರೋಜನಿ ಕುಲ್ಕರ್ಣಿ, ಬಸಮ್ಮ ಕಂಟೆಗೊಳ ಇತರರು ಪಾಲ್ಗೊಂಡಿದ್ದರು.
ಹಣಮಂತ ಕೋರವಾರ ಸ್ವಾಗತಿಸಿದರು. ಶಾರದಾ ಅವಟೆ ನಿರೂಪಿಸಿದರು. ಮಲ್ಕಮ್ಮ ನಿಂಬಾಳ ವಂದಿಸಿದರು.
ಕಳಪೆ ಕಾಮಗಾರಿಗೆ ಕಠಿಣ ಕ್ರಮ: ಶಾಸಕ ಮಾಲೀಕಯ್ಯ
ಕ.ಪ್ರ. ವಾರ್ತೆ , ಅಫಜಲ್ಪುರ , ಡಿ.24
ತಾಲೂಕಿನ ಎಲ್ಲ ರಸ್ತೆ ಕಾಮಗಾರಿಗಳು ಗುತ್ತಿಗೆದಾರರು ಉತ್ತಮ ಗುಣಮಟ್ಟದಲ್ಲಿ ನಿರ್ಮಾಣ ಮಾಡಬೇಕು. ಒಂದು ವೇಳೆ ಕಳಪೆ ಮಟ್ಟದ ಕಾಮಗಾರಿ ಮಾಡಿದರೆ ಅಂತವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಶಾಸಕ ಮಾಲೀಕಯ್ಯ ಗುತ್ತೇದಾರ ಎಚ್ಚರಿಕೆ ನೀಡಿದರು.
ತಾಲೂಕಿನ ದಿಕ್ಸಂಗಾ (ಕೆ) ಕ್ರಾಸ್ ಬಳಿ ಲೋಕೊಪಯೋಗಿ ಬಂದರು ಮತ್ತು ಒಳನಾಡ ಜಲಸಾರಿಗೆ ಇಲಾಖೆ 2013-14ನೇ ಸಾಲಿನ ಎಸ್ಡಿಪಿ ಯೋಜನೆ ಅಡಿಯಲ್ಲಿ ಸುಮಾರು 94 ಲಕ್ಷಗಳಲ್ಲಿ ತಾಲೂಕಿನ ಶಿರವಾಳದಿಂದ ದುಧನಿಗೆ ಹೋಗುವ ರಸ್ತೆಯಲ್ಲಿ 3.5 ಕಿಮೀನಿಂದ 5 ಕಿಮೀ (1.5 ಕಿಮೀ) ರಸ್ತೆ ಸುಧಾರಣೆ ಕಾಮಗಾರಿ ಅಡಿಗಲ್ಲು ಸಮಾರಂಭ ನೆರವೇರಿಸಿ ಮಾತನಾಡಿದರು.
ಸುಮಾರು 2 ಕೋಟಿ ವೆಚ್ಚದಲ್ಲಿ ನೂತನ ಬಸ್ನಿಲ್ದಾಣ ನಿರ್ಮಾಣ ಮಾಡಲಾಗುವುದು ಹಾಗೂ ಸುಮಾರು 4 ಕೋಟಿ ವೆಚ್ಚದಲ್ಲಿ ಜೇವರ್ಗಿ (ಬಿ) ಮತ್ತು ಜೇವರ್ಗಿ (ಕೆ) ಗ್ರಾಮಗಳ ಮಧ್ಯದಲ್ಲಿ ರಸ್ತೆ ಕಲ್ಪಿಸಲು ಬ್ಯಾರೇಜ್ ಕಮ್ ಬ್ರಿಜ್ ಕಾಮಗಾರಿ ಕೈಗೊಳ್ಳಲಾಗುವುದು ಎಂದರು.
ಬಿ.ವೈ. ಪಾಟೀಲ್, ವಿಶ್ವನಾಥ ರೇವೂರ, ಸಿದ್ದು ಹಳಗೋದಿ, ಭೀಮರಾಯಗೌಡ, ಅರವಿಂದ ಹಾಳಕಿ, ಶ್ರೀಶೈಲಗೌಡ ಪಾಟೀಲ್, ಪಿರಸಾಬ್ ಜಾಗಿರದಾರ, ಗ್ರಾಪಂ ಅಧ್ಯಕ್ಷ ವಿಶ್ವನಾಥ ಕಾಮನಳ್ಳಿ, ಗ್ರಾಪಂ ಸದಸ್ಯ ಸಂತೋಷ ವಗ್ದರ್ಗಿ, ಗುರುಶಾಂತ ದೇಸಾಯಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

