ಗುಲ್ಬರ್ಗಾ

ರೈತ ವಿಜ್ಞಾನಿ/ರೈತ ಮಹಿಳೆ ವಿಜ್ಞಾನಿ ಪ್ರಶಸ್ತಿಗೆ ಅರ್ಜಿ

Published On :

ಗುಲ್ಬರ್ಗ: ಹೈ-ಕ ಭಾಗದ ರೈತರ ಒಡನಾಡಿ ಎನಿಸಿಕೊಂಡಿರುವ ರಾಯಚೂರು ಕೃಷಿ ವಿಶ್ವವಿದ್ಯಾಲಯವು ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳಲ್ಲಿ ಅತ್ಯುತ್ತಮ ಸಾಧನೆಗೈದ ಒಬ್ಬ ರೈತ/ರೈತ ಮಹಿಳೆಗೆ ರೈತ ವಿಜ್ಞಾನಿ/ರೈತ ಮಹಿಳೆ ವಿಜ್ಞಾನಿ ಪ್ರಶಸ್ತಿಯನ್ನು ನೀಡುತ್ತಿದೆ. ಬೀದರ್, ಗುಲ್ಬರ್ಗ, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳ ರೈತ ಬಾಂಧವರು ಈ ಪ್ರಶಸ್ತಿಗೆ ಅರ್ಹರಾಗಿದ್ದು, 2014ನೇ ಫೆಬ್ರವರಿಯಲ್ಲಿ ಜರುಗುವ ಘಟಿಕೋತ್ಸವದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಈ ಪ್ರಶಸ್ತಿಯು ಪ್ರಶಸ್ತಿ ಫಲಕ ಹಾಗೂ ನಗದು 50 ಸಾವಿರ ಬಹುಮಾನವನ್ನು ಒಳಗೊಂಡಿರುತ್ತದೆ. ಈ ರೈತ ವಿಜ್ಞಾನಿ/ರೈತ ಮಹಿಳೆ ವಿಜ್ಞಾನಿ ಪ್ರಶಸ್ತಿಗೆ ಅರ್ಹರೆನಿಸಿಕೊಂಡಿರುವ ರೈತರು/ರೈತ ಮಹಿಳೆಯರು ಅರ್ಜಿ ನಮೂನೆಗಳನ್ನು ಕೃಷಿ ವಿಶ್ವವಿದ್ಯಾಲಯದ ಅಂತರ್ಜಾಲದಲ್ಲಿ (ಢಿಢಿಢಿ.್ಡಛಡ್ಠಝ್ಝ್ಛ್ಡ್ಠ.ಜಜ್ಡ.್ಝಟಿ) ಬೀದರ್ ಕೃಷಿ ವಿಜ್ಞಾನ ಕೇಂದ್ರ- 94806 96318, ಗುಲ್ಬರ್ಗ- 94806 96315, ರೆದ್ದವಾಡಗಿ- 94806 96348, ರಾಯಚೂರು- 94806 96314, ಗಂಗಾವತಿ- 94806 96316, ಹಗರಿ- 94806 96317, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಭೀಮರಾಯನಗುಡಿ- 94806 96335, ಲಿಂಗಸ್ಗೂರು- 94806 96334, ಕೊಪ್ಪಳ- 94806 96319, ಹಡಗಲಿ- 94806 96336 ಕಚೇರಿಗಳಿಂದ ಪಡೆದು ಜ.20ರೊಳಗೆ ಪಡೆದು, ಅದನ್ನು ಭರ್ತಿ ಮಾಡಿ ಜ.25ರ ಸಂಜೆ 5 ಗಂಟೆಯೊಳಗೆ ವಿಸ್ತರಣಾ ನಿರ್ದೇಶಕರು, ಕೃಷಿ ವಿಶ್ವವಿದ್ಯಾಲಯ, ರಾಯಚೂರು- 584 104 ಇವರ ವಿಳಾಸಕ್ಕೆ ತಲುಪಿಸಬೇಕಾಗಿ ಕೋರಲಾಗಿದೆ. ವಿವರಕ್ಕೆ ಮೇಲ್ಕಾಣಿಸಿದ ಸಂಸ್ಥೆಗಳ ಮುಖ್ಯಸ್ಥರನ್ನು ಅಥವಾ ವಿಸ್ತರಣಾ ನಿರ್ದೇಶಕರನ್ನು(94806 96313) ಸಂಪರ್ಕಿಸಬಹುದು.
ಚಲವಾದಿ ಮಹಾಸಭಾಕ್ಕೆ ಕಾಳಿ ಬಸವರಾಜ ಅಧ್ಯಕ್ಷ
ಹಗರಿಬೊಮ್ಮನಹಳ್ಳಿ: ಹಗರಿಬೊಮ್ಮನಹಳ್ಳಿ ತಾಲೂಕು ಚವಾದಿ ಮಹಾಸಭಾ ಘಟಕ ನೂತನವಾಗಿ ಅಸ್ತಿತ್ವಕ್ಕೆ ಬಂದಿದ್ದು, ತಾಲೂಕಿನ ಚಿಂತ್ರಪಳ್ಳಿ ಗ್ರಾಮದ ಕಾಳಿ ಬಸವರಾಜ ಘಟಕದ ನೂತನ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಮಹಾಸಭಾ ಪ್ರಕಟಣೆಯಲ್ಲಿ ತಿಳಿಸಿದೆ. ತಾಲೂಕಿನ ಚಲವಾದಿ ಜನಾಂಗದ ಹಿರಿಯರ ಸಮ್ಮುಖದಲ್ಲಿ ಪಟ್ಟಣದ ಹರ್ಷ ಲಾಡ್ಜ್ ಸಭಾಂಗಣದಲ್ಲಿ ಜರುಗಿದ ಸಭೆಯಲ್ಲಿ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದ್ದು, ತಾಲೂಕಿನ ಲೋಕಪ್ಪನ ಹೌಲ ಗ್ರಾಮದಕಾಳಿ ದೊಡ್ಡ ಹನುಮಂತಪ್ಪ ಗೌರವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಉಳಿದಂತೆ ಚಲವಾದಿ ಹನುಮಂತಪ್ಪ ಕಡಲಬಾಳು, ಸಿ. ಮಂಜುನಾಥ ಅಲಬೂರು, ಹುಸೇನಪ್ಪ ಗದ್ದಿಕೇರಿ,  ಕೊಟ್ರೇಶ್ ತಂಬ್ರಹಳ್ಳಿ (ಉಪಾಧ್ಯಕ್ಷರು), ಮಾಲ್ವಿ ಪ್ರಕಾಶ (ಪ್ರಧಾನ ಕಾರ್ಯದರ್ಶಿ), ರಮೇಶ್ ಗದ್ದಿಕೇರಿ(ಸಂಘಟನಾ ಕಾರ್ಯದರ್ಶಿ), ಅಂಜಿನಪ್ಪಹನಸಿ (ಜಂಟಿ ಕಾರ್ಯದರ್ಶಿ), ಕೆಂಚಪ್ಪ ಚಿಂತ್ರಪಳ್ಳಿ(ಖಜಾಂಚಿ), ಕಾಳಿ ಕೊಟ್ರೇಶ ಮೋರಿಗೇರಿ (ಸಾಂಸ್ಕೃತಿಕ ಕಾರ್ಯದರ್ಶಿ), ಸಮಾಜದ ಹಿರಿಯರಾದ ಜೆಸ್ಕಾಂ ಇಲಾಖೆಯ ಶಿವಮೂರ್ತಿ, ತೋಟಪ್ಪ ತಂಬ್ರಹಳ್ಳಿ, ಪರಸಪ್ಪ ಗದ್ದಿಕೇರಿ, ವೀರಭದ್ರಪ್ಪ ಹೊಸಕೇರಿ ಇತರರು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು ಎಂದು ಪ್ರಕಟಣೆ ತಿಳಿಸಿದೆ.
ಭೂಮಿಕಾ ಪ್ರಥಮ
ಹಗರಿಬೊಮ್ಮನಹಳ್ಳಿ: ಬಳ್ಳಾರಿಯ ವಾರ್ಡ್ಲಾ ಪದವಿಪೂರ್ವ ಕಾಲೇಜಿನಲ್ಲಿ ಜರುಗಿದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ  ಹಗರಿಬೊಮ್ಮನಹಳ್ಳಿ ಪಟ್ಟಣದ ರಾಷ್ಟ್ರೋತ್ಥಾನ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ಡಿ. ಭೂಮಿಕಾ ಕಥೆ ಹೇಳುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಕನ್ನಡ ಕಂಠಪಾಠ ಸ್ಪರ್ಧೆಯಲ್ಲಿ ಎಚ್. ಪ್ರಜ್ವಲ್ ತೃತೀಯ, ಸಂಸ್ಕೃತ ಕಂಠಪಾಠ ಸ್ಪರ್ಧೆಯಲ್ಲಿ ಕೆ.ಪಿ. ವಿನಾಯಕ ದ್ವಿತೀಯ ಸ್ಥಾನ ಗಳಿಸಿದ್ದಾರೆ. ವಿಜೇತ ಮಕ್ಕಳನ್ನು ಶಾಲಾ ಆಡಳಿತ ಮಂಡಳಿ ಅಭಿನಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.