ಸಾಮೂಹಿಕ ಮಾತ್ರೆ ವಿತರಿಸುವ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಪಲ್ಲವಿ ಆಕುರಾತಿ
24.24 ಲಕ್ಷ ಜನರಿಗೆ ಡಿಇಸಿ ಮಾತ್ರೆ ವಿತರಿಸುವ ಗುರಿ
ಗುಲ್ಬರ್ಗ: ರಾಷ್ಟ್ರೀಯ ಆನೆಕಾಲು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಜಿಲ್ಲೆಯ 1, 232 ಗ್ರಾಮಗಳು, ವಾಡಿ, ಲಂಬಾಣಿ ತಾಂಡಾ ಮತ್ತು ದೊಡ್ಡಿಗಳ ಹಾಗೂ ನಗರ, ಪಟ್ಟಣ ಪ್ರದೇಶದ 184 ವಾರ್ಡುಗಳ 24, 24,117 ಜನರಿಗೆ ಸಾಮೂಹಿಕವಾಗಿ 60, 29, 994 ಡಿ.ಇ.ಸಿ. (ಡೈಈಥೈಲ್ ಕಾರ್ಬಮೇಜಿನ್ ಸಿಟ್ರೇಟ್) ಹಾಗೂ ಅಲ್ಬೆಂಡಾಜ್ ಓಲೆ ಮಾತ್ರೆಗಳನ್ನು ಫೆ.12 ರಿಂದ 14ರವರೆಗೆ ವಿತರಿಸುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಲ್ಲವಿ ಆಕುರಾತಿ ಅವರು ತಿಳಿಸಿದರು.
ಗುಲ್ಬರ್ಗದಲ್ಲಿ ಸಾಮೂಹಿಕ ಮಾತ್ರೆ ವಿತರಿಸುವ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಜಿಲ್ಲಾದ್ಯಂತ ಆನೆಕಾಲು ರೋಗವನ್ನು ನಿರ್ಮೂಲನೆ ಮಾಡಲು 9ನೇ ಸಾಮೂಹಿಕ ಔಷಧಿ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಹಾಯಕರು ಕಡ್ಡಾಯವಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಸಾಧಿಸಿ ಯಶಸ್ವಿಗೊಳಿಸಬೇಕೆಂದು ಸೂಚಿಸಿದರು.
ಜಿಲ್ಲೆಯ 4,82,325 ಮನೆಗಳಲ್ಲಿ ವಾಸಿಸುವ ಕುಟುಂಬದ ಸದಸ್ಯರಿಗೆ ಡಿಇಸಿ ಮಾತ್ರೆಗಳ ವಿತರಣೆಗಾಗಿ 1349 ಆಶಾ ಕಾರ್ಯಕರ್ತೆಯರು, 3034 ಅಂಗನವಾಡಿ ಕಾರ್ಯಕರ್ತೆಯರು ಹಾಗೂ 600 ಆರೋಗ್ಯ ಸಹಾಯಕರು ಹಾಗೂ 975 ಮೇಲ್ವಿಚಾರಕರನ್ನು ನೇಮಿಸಲಾಗುವುದು.
ಜಿಲ್ಲಾದ್ಯಂತ ತರಬೇತಿ ಪಡೆದ ಸಿಬ್ಬಂದಿ ಫೆ.12 ರಂದು ಮನೆ ಮನೆಗೆ ಭೇಟಿ ನೀಡಿ ಡಿಇಸಿ ಮಾತ್ರೆ ವಿತರಿಸುವರು ಹಾಗೂ ಫೆ.13, 14 ರಂದು ಮಾಪ್-ಅಪ್ಮಾರ್ಯ ಹಮ್ಮಿಕೊಳ್ಳಲಾಗಿದೆ. ವರ್ಷಕ್ಕೊಂದು ಸಲ ಡಿಇಸಿ ಮಾತ್ರೆಗಳನ್ನು ಸೇವಿಸುವುದರಿಂದ ಆನೆಕಾಲು ರೋಗವನ್ನು ತಡೆಗಟ್ಟಬಹುದಾಗಿದೆ. ಈ ಮಾತ್ರೆಗಳಿಂದ ಯಾವುದೇ ತೊಂದರೆ ಆಗದು ಎಂದರು.
ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು, ಗರ್ಭಿಣಿಯರು ಹಾಗೂ ತೀವ್ರ ಕಾಯಿಲೆಯಿಂದ ಬಳಲುತ್ತಿರುವವರನ್ನು ಹೊರತುಪಡಿಸಿ ಪ್ರತಿಯೊಬ್ಬರೂ ವಯೋವಾನಕ್ಕನುಗುಣವಾಗಿ ಡಿಇಸಿ ಮಾತ್ರೆಗಳನ್ನು ಲಘು ಉಪಹಾರ ಅಥವಾ ಊಟದ ಬಳಿಕವಷ್ಟೇ ಸೇವಿಸಬೇಕು.
ಖಾಲಿ ಹೊಟ್ಟೆಯಲ್ಲಿ ಈ ಮಾತ್ರೆಗಳನ್ನು ಸೇವಿಸಬಾರದು. 2ರಿಂದ 5 ವರ್ಷ ವಯೋವಾನದವರು ಒಂದು ಮಾತ್ರೆಯನ್ನು (100 ಎಂಜಿ), 6 ರಿಂದ 14 ವರ್ಷ ವಯೋವಾನದವರು ಎರಡು ಮಾತ್ರೆಗಳನ್ನು (200 ಎಂಜಿ) ಹಾಗೂ 15ಕ್ಕಿಂತ ಮೇಲ್ಪಟ್ಟವರು 3 ಮಾತ್ರೆಗಳನ್ನು (300 ಎಂಜಿ) ಸೇವಿಸಬೇಕೆಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶಿವರಾಜ ಸಜ್ಜನಶೆಟ್ಟಿ, ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕರು ಹಾಗೂ ಅಧೀಕ್ಷಕ ಡಾ. ನಳನಿ ನಮೋಶಿ ಮತ್ತಿತರರು ಈ ಸಭೆಯಲ್ಲಿ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

