ಗುಲ್ಬರ್ಗಾ

ಸೇವೆಯಲ್ಲಿ ನಿಷ್ಠೆ ತೋರಿದರೆ ಗೌರವದ ನಿವೃತ್ತಿ: ಎಇಇ ಚಂದ್ರಶೇಖರ

Published On :

ಭಾಲ್ಕಿ: ಸೇವೆಯಲ್ಲಿ ನಿಷ್ಠೆ, ಪ್ರಾಮಾಣಿಕತೆ ತೋರಿದಾಗ ಮಾತ್ರ ಸರ್ಕಾರದ ಸೇವೆಯಲ್ಲಿ ಗೌರವದಿಂದ ನಿವೃತ್ತಿಯಾಗಲು ಸಾಧ್ಯ ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಕೆ.ಚಂದ್ರಶೇಖರ ಅಭಿಪ್ರಾಯಪಟ್ಟರು. ತಾಲೂಕಿನ ಹಲಬರ್ಗಾ ಗ್ರಾಮದ ಕೆಇಬಿ ಕಚೇರಿಯಲ್ಲಿ ನಡೆದ ಮೆಕ್ಯಾನಿಕ್ ವಿಭಾಗದಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿಯಾದ ವೈಜಿನಾಥ ಪ್ರಭಾ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ಕಾರ್ಯತತ್ಪರತೆ ಹಾಗೂ ಸಮಯ ನಿಷ್ಠೆ ಇತರರಿಗೆ ಮಾದರಿಯಾಗಿದ್ದರು ಎಂದು ತಿಳಿಸಿದರು.
  ಹುದ್ದೆ ಸಣ್ಣದಾಗಿದ್ದರೂ ಅವರ ನಿಷ್ಕಳಂಕ ಕಾರ್ಯನಿರ್ವಹಣೆ ಉಳಿದ ಎಲ್ಲ ಸಿಬ್ಬಂದಿಗೆ ಮಾದರಿ. ಆದ್ದರಿಂದ ಉಳಿದ ಎಲ್ಲ ಸಿಬ್ಬಂದಿ ಸ್ವಾಮಿನಿಷ್ಠೆ ಅನುಸರಿಸುವುದು ಅವಶ್ಯ ಎಂದು ಸಲಹೆ ನೀಡಿದರು.
  ಇಂದಿನ ದಿನಮಾನಗಳಲ್ಲಿ ಸೇವೆಗೆ ಅಗೌರವ ತೋರಿ, ಕಾಟಾಚಾರಕ್ಕೆ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಆದರೆ ವೈಜಿನಾಥ ಅವರ ಸೇವೆ ಮಾತ್ರ ಅದಕ್ಕೆ ಅಪವಾದ ಎಂದು ಹೇಳಿದರು.
  ಈ ವೇಳೆ ಗ್ರಾಪಂ ಅಧ್ಯಕ್ಷೆ ಇಂದುಮತಿ ರಘುನಾಥ ರಾಜಕುಮಾರ ಅಧ್ಯಕ್ಷತೆ ವಹಿಸಿದ್ದರು. ಶಾಂತಕುಮಾರ, ಉಮಾಕಾಂತ ಪಾಟೀಲ್, ವೀರಶೆಟ್ಟಿ, ಮಾರುತಿ ಪ್ರಭಾ, ಸಂಜು ಪ್ರಭಾ, ರಾಜಕುಮಾರ ಕುಂಬಾರ, ಶಿವಕುಮಾರ, ಬಸವರಾಜ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.