ತಾಲೂಕು ಸಮಿತಿ ಕಚೇರಿ ಉದ್ಘಾಟನೆ
ಅಫಜಲ್ಪುರ: ಸಾರ್ವಜನಿಕರ ಕುಂದು ಕೊರತೆಗಳನ್ನು ಸುಲಭ ರೀತಿಯಿಂದ ನಿರ್ವಹಿಸಿ ಒಳ್ಳೆಯ ಗುತ್ತಿಗೆದಾರರೆಂದು ಹೆಸರು ಪಡೆಯಬೇಕು. ತಾಲೂಕಿನ ಎಲ್ಲಾ ರೈತ ಬಾಂದವರಿಗೆ ವಿದ್ಯುತ್ ಸಂಪರ್ಕ ಒದಗಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು. ಅಧಿಕಾರಿಗಳು ಸಂಘಕ್ಕೆ ಸಹಕರಿಸಬೇಕೆಂದು ಜಿಲ್ಲಾಧ್ಯಕ್ಷ ಬಸವರಾಜ ಮಾಲಿ ಪಾಟೀಲ್ ಹೇಳಿದರು. ಅವರು ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ತಾಲೂಕು ಸಮಿತಿ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮಹಾಂತಗೌಡ ಪಾಟೀಲ್ ಮಾತನಾಡಿ, ಸಂಘದ ಸದಸ್ಯರು ಒಳ್ಳೆಯ ರೀತಿಯಿಂದ ಕಾರ್ಯನಿರ್ವಹಿಸಿ ರೈತರ ಸಮಸ್ಯೆಗಳಿಗೆ ಸಕಾಲದಲ್ಲಿ ಸ್ಪಂದಿಸಿರಿ ಎಂದು ಹೇಳಿದರು. ಎಪಿಎಂಸಿ ಮಾಜಿ ಅಧ್ಯಕ್ಷ ಅವ್ವಣ್ಣ ಮ್ಯಾಕೇರಿ, ಎಇಇ ಮರೆಪ್ಪ ಕಡೆಕರ್, ಜೆಸ್ಕಾಂ ನೌಕರರ ಅಧ್ಯಕ್ಷ ಮಹಾರಾಜ ಸೊನ್ನ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಸವರಾಜ, ಜಿಲ್ಲಾ ಸಲಹಾ ಸಮಿತಿ ಸದಸ್ಯ ಸಿದ್ದಯ್ಯ ಹಿರೇಮಠ, ತಾಲೂಕು ಅಧ್ಯಕ್ಷ ಸಂದೀಪ ಅಂಬೂರೆ, ಉಪಾಧ್ಯಕ್ಷ ದೌಲಪ್ಪ ಕುಂಬಾರ, ಬಸವರಾಜ ಅಂಗಡಿ, ಶರಣಗೌಡ ಪಾಟೀಲ್, ಖಜಾಂಚಿ ಮಲ್ಲಿಕಾರ್ಜುನ ಕಿರಸಾವಳಗಿ, ರವಿಶಂಕರ ಗೊಬ್ಬೂರ, ಆನಂದ ಆಲಮೇಲಕರ್ ಮೊದಲಾದವರು ಉಪಸ್ಥಿತರಿದ್ದರು.
ವಾರ್ಷಿಕ ಸ್ನೇಹ ಸಮ್ಮೇಳನ
ಗುಲ್ಬರ್ಗ: ಕೊಸಗಿ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಬ್ಲೂಮಿಂಗ್ ಡೇಲ್ ಪೂರ್ವ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ 2ನೇ ವಾರ್ಷಿಕ ಸ್ನೇಹ ಸಮ್ಮೇಳನ ಹಮ್ಮಿಕೊಳ್ಳಲಾಗಿತ್ತು.
ಗುಲ್ಬರ್ಗ ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಶರಣಪ್ಪ ಕೋಬಾಳಕರ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಶಾಲೆಯ ಏಳ್ಗೆ ಬಗ್ಗೆ ಮಾತನಾಡುತ್ತಾ, ಇದರ ಪ್ರತಿಫಲ ವಿದ್ಯಾರ್ಥಿಗಳು ಪಡೆದು ಶಾಲೆಗೆ ಒಳ್ಳೆಯ ಹೆಸರು ತರಬೇಕೆಂದು ಹೇಳಿದರು. ಗುಲ್ಬರ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಶೋಭಾ ರಂಜೋಳಕರ್ ಮತ್ತು ಶರಣಬಸವೇಶ್ವರ ಸಂಯುಕ್ತ ಪದವಿ ಪೂರ್ವ ಮಹಾ ವಿದ್ಯಾಲಯದ ಮಂಗಲಾ ಬಿ. ಕಪರೆ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಡಾ. ಹೆಚ್.ಬಿ. ಕೊಸಗಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಉಪಾಧ್ಯಕ್ಷ ವಿಜಯಲಕ್ಷ್ಮಿ ಕೊಸಗಿ, ಕಾರ್ಯದರ್ಶಿ ಡಾ. ನಿಕಿತಾ ಕೊಸಗಿ, ಆಡಳಿತಾಧಿಕಾರಿ ನಿತಿನ ಕೊಸಗಿ ಉಪಸ್ಥಿತರಿದ್ದರು.
ಕುಮಾರಿ ಸರಭೀ ಮತ್ತು ತಂಡ ಪ್ರಾರ್ಥನೆ ಗೀತೆ, ಕುಮಾರಿ ಪ್ರಿಯಾಂಕ ಮತ್ತು ತಂಡ ಸ್ವಾಗತ ನೆರವೇರಿಸಲಾಯಿತು. ಆಡಳಿತ ಮಂಡಳಿ ಆಡಳಿತಾಧಿಕಾರಿ ನಿತಿನ ಕೊಸಗಿ ಸ್ವಾಗತ ಕೋರಿದರು.
ಉಪನ್ಯಾಸ ಕಾರ್ಯಕ್ರಮ
ಗುಲ್ಬರ್ಗ: ರಾಷ್ಟ್ರೀಯ ಸೇವಾ ಯೋಜನೆಯ ಘಟಕ ಹಾಗೂ ಸಿದ್ಧಾರ್ಥ ಕಾನೂನು ಅರಿವು- ನೆರವು ಕೇಂದ್ರದ ಸಂಯುಕ್ತಾಶ್ರಯದಲ್ಲಿ ಗೊಬ್ಬೂರು (ಬಿ) ಸರ್ಕಾರಿ ಪದವಿ ಪೂರ್ವ ವಿದ್ಯಾಲಯದಲ್ಲಿ ಇಂದಿನ ದಿನದಲ್ಲಿ ಸಂವಿಧಾನದ ಮಹತ್ವ ಎಂಬ ವಿಷಯದ ಮೇಲೆ ಉಪನ್ಯಾಸ ಹಮ್ಮಿಕೊಳ್ಳಲಾಗಿತ್ತು.
ಉಪನ್ಯಾಸಕ ಡಾ. ಎಸ್. ಚಂದ್ರಶೇಖರ ಮಾತನಾಡಿ, ಸಂವಿದಾನದ ಪ್ರಮುಖ ಅಂಶಗಳಾದ ಪ್ರಸ್ತಾವನೆ, ಮೂಲ ಹಕ್ಕುಗಳು ಹಾಗೂ ಕರ್ತವ್ಯಗಳ ಬಗ್ಗೆ ವಿವರಿಸಿದರು. ಪ್ರಾಂಶುಪಾಲ ಇಂದ್ರಕಲಾ ಕುನ್ನೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕುಮಾರಿ ಕಾಳಮ್ಮ ಪ್ರಾರ್ಥನೆ ಗೀತೆ ಹಾಡಿದರು. ರಾಜಾಸಾಬ್ ಸ್ವಾಗತ ಮಾಡಿದರೆ, ಉಪನ್ಯಾಸಕ ಯಂಕಪ್ಪ ಇಟಗಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

