ಗುಲ್ಬರ್ಗಾ

ಹತ್ತಿಕುಣಿ ರೈತರಿಂದ ಹೊರನಾಡು ಅನ್ನಪೂರ್ಣೇಶ್ವರಿಗೆ ಬತ್ತ ಅರ್ಪಣೆ

Published On :

ಯಾದಗಿರಿ: ಹತ್ತಿಕುಣಿ ಜಲಾಶಯದ ವ್ಯಾಪ್ತಿಯ ರೈತರು ತಾವು ಬೆಳೆದ ಬತ್ತವನ್ನು ಹೊರನಾಡಿನ ಅನ್ನಪೂರ್ಣೇಶ್ವರಿಗೆ ಅರ್ಪಿಸಲು ತೆರಳಿದರು.    ಇದಕ್ಕೆ ಚಾಲನೆ ನೀಡಿದ ಗುಲ್ಬರ್ಗ ಕಾಡಾ ಅಧ್ಯಕ್ಷ ಗಿರೀಶ ಮಟ್ಟಣ್ಣವರ್ ಮಾತನಾಡಿ, ಬೆಳಿಗ್ಗೆಯಿಂದ ಉರಿ ಬಿಸಿಲಿನಲ್ಲಿ ಬೇಸಾಯ ಮಾಡುವ ರೈತನ ಬಾಳು ಹಸನಾಗಬೇಕು. ಇದಕ್ಕೆ ದೈವತ್ವ ಆಶೀರ್ವಾದವೂ ಮುಖ್ಯವಾಗಿದೆ. ಕೆಲ ದಿನಗಳಿಂದ ತಮ್ಮ ನೇತೃತ್ವದಲ್ಲಿ ಹತ್ತಿಕುಣಿ ಜಲಾಶಯದ ನೀರನ್ನು ರೈತರ ಜಮೀನುಗಳಿಗೆ ಹರಿಸುವ ಮುನ್ನ ಬತ್ತದ ಫಸಲು ಉತ್ತಮವಾಗಿ ಬರುವಂತೆ ರೈತರು ಮತ್ತು ತಾವು ತಾಯಿ ಅನ್ನಪೂರ್ಣೇಶ್ವರಿಗೆ ಹರಕೆ ಹೊತ್ತುಕೊಂಡಿದ್ದರು. ನಿರೀಕ್ಷೆಯಂತೆ ಉತ್ತಮ ಫಸಲು ಬಂದ ಕಾರಣ ರೈತರೊಂದಿಗೆ ತಾವು ಹೊರನಾಡು ಅನ್ನಪೂಣೇಶ್ವರಿ ಕ್ಷೇತ್ರಕ್ಕೆ ತೆರಳುತ್ತಿದ್ದೇವೆ ಎಂದರು.  ಈಗಾಗಲೇ 1 ಕೋಟಿ ಅನುದಾನ ಮಂಜೂರು ಮಾಡಿರುವುದಾಗಿ ಶೆಟ್ಟರ್ ಅವರು ಘೊಷಣೆ ಮಾಡಿದ್ದಾರೆ ಎಂದು ತಿಳಿಸಿದರು. ಗ್ರಾಮದ ಪ್ರಮುಖರಾದ ಚಂದ್ರಕಾಂತ್, ಸಹದೇವ ಹತ್ತಿಕುಣಿ, ತಾಯಪ್ಪ, ಶರಣಪ್ಪ ಸಾಹು, ಸಿದ್ದಣ್ಣ ಹತ್ತಿಕುಣಿ, ಮರೆಮ್ಮಾ ನಾಗಪ್ಪ ಗಚ್ಚಿನಮನಿ ಇನ್ನಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.