'ಯಶಸ್ವಿ ಜೀವನಕ್ಕೆ ಪರಿಶ್ರಮ ಅವಶ್ಯ'
ಗುಲ್ಬರ್ಗ: ಪಟ್ಟಣದ ಜಗಜ್ಯೋತಿ ಬಸವೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ನಡೆಯಿತು. ಶೈಕ್ಷಣಿಕ ಕಾಲಾವಧಿಯಲ್ಲಿ ವಿದ್ಯಾರ್ಥಿಗಳ ಯಶಸ್ವಿ ಜೀವನಕ್ಕೆ ಕಠಿಣ ಪರಿಶ್ರಮ ಅವಶ್ಯ ಎಂದು ಸರ್ಕಾರಿ ಪಪೂ ಕಾಲೇಜಿನ ಪ್ರಾಚಾರ್ಯ ಎಸ್.ಎಸ್. ಹಾಶ್ಮಿ ತಿಳಿಸಿದರು.
ಗ್ರಾಪಂ ಅಧ್ಯಕ್ಷ ರಾಘವೇಂದ್ರ ಗುತ್ತೇದಾರ ಮಾತನಾಡಿ, ಪ್ರಸ್ತುತ ಕಾಳಗಿ ತಾಲೂಕು ಆಗಿದೆ ಅಲ್ಲದೆ ಈ ಭಾಗದ ಅಭಿವಣದ್ದಿಗಾಗಿ 371ನೇ ಕಲಂ ತಿದ್ದುಪಡಿ ಆಗಿದೆ. ಆದ್ದರಿಂದ ವಿಧ್ಯಾರ್ಥಿಗಳು ತಮ್ಮ ಅಭ್ಯಾಸದ ಕಡೆಗೆ ಹೆಚ್ಚಿನ ಗಮನ ಹರಿಸುವ ಮೂಲಕ ಹೆಚ್ಚಿನ ಅಂಕ ಪಡೆದರೆ ಬೇಗನೆ ಸರಕಾರಿ ಹುದ್ದೆಯನ್ನು ಪಡೆಯಬಹುದು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಶಿನಾಥ ಗುತ್ತೇದಾರ, ಮುಖ್ಯ ಅತಿಥಿಗಳಾಗಿ ಗಂಗಾಪರಮೇಶ್ವರಿ ಪಿಯು ಕಾಲೇಜಿನ ಪ್ರಾಚಾರ್ಯ ನಾಗರಾಜ ಕಾಮಾ ಮಾತನಾಡಿದರು. ಉತ್ತಮ ವಿದ್ಯಾರ್ಥಿಗಳಾಗಿ ಆಯ್ಕೆಯಾಗಿದ್ದ ಪಿಯುಸಿ ಪ್ರಥಮ ವರ್ಷದ ಸುಧೀಷ್ಣಾ ಕೊಡ್ಲಿ, ಚಂದ್ರಯ್ಯ ಕೋರವಾರ, ದ್ವೀತಿಯ ವರ್ಷದ ಮಹೇಶ ಕಾಳಗಿ, ಅಂಬಿಕಾ ಹೊಸ್ಸಳ್ಳಿ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಉಪನ್ಯಾಸಕ ಬಾಬು ಯಲಗೂಡ, ಶಿವುಕುಮಾರ ಗುತ್ತೇದಾರ, ಪರಶುರಾಮ, ನರಸಯ್ಯ ಹೊಸ್ಸಳ್ಳಿ ಇತರರು ಇದ್ದರು. ರೂಪಾ ಪ್ರಾರ್ಥಿಸಿದರು, ಉಪನ್ಯಾಸಕ ಸಿದ್ದಣ್ಣ ಶೆಟ್ಟಿ ಸ್ವಾಗತಿಸಿದರು, ಸಂಗೀತಾ ಬೊಮ್ಮಣಿ ನಿರೂಪಿಸಿದರು, ಮೀನಾಕ್ಷಿ ದೇಸಾಯಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

