ಕೊನೆಗೂ ಸ್ಥಾನ ಪಲ್ಲಟಗೊಂಡ ಬಸವಣ್ಣಪ್ಪ ಗೌನಳ್ಳಿ
ಜೇವರ್ಗಿ: ಕಳೆದ ಮೂರು ದಶಕಗಳ ಕಾಲ ಕಾಂಗ್ರೆಸ್ನಲ್ಲಿ ಗುರುತಿಸಿಕೊಂಡಿದ್ದ ಬಸವಣ್ಣಪ್ಪ ಗೌನಳ್ಳಿಯವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಗುಡ್ ಬೈ ಹೇಳಿ ಬಿಜೆಪಿಗೆ ಜೈ ಹೇಳಿದ್ದರು. ಈಗ ಮತ್ತೆ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿಗೆ ಗುಡ್ ಬೈ ಹೇಳಿ ಮತ್ತೊಮ್ಮೆ ತಮ್ಮ ಸ್ಥಾನ ಪಲ್ಲಟಗೊಳಿಸಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಅನೇಕ ವೇದಿಕೆಗಳನ್ನು ಬಳಸಿಕೊಂಡು ಕಾಂಗ್ರೆಸ್ ಪಕ್ಷವನ್ನು ಹಿಗ್ಗಾಮುಗ್ಗಾ ಟೀಕಿಸಿ ಬಿಜೆಪಿಯಲ್ಲಿದ್ದರು. ಈಗ ಬಿಜೆಪಿಯನ್ನು ಟೀಕಿಸಿ ಪಕ್ಷಕ್ಕೆ ಬಿಟ್ಟಿದ್ದಾರೆ.
ಮುಂದೆ ಇವರು ಯಾವ ಪಕ್ಷವನ್ನು ಅಪ್ಪಿಕೊಳ್ಳಲಿದ್ದಾರೆ ಎನ್ನುವುದೆ ಈಗಿರುವ ಕೂತುಹಲ. ಪಕ್ಷದಲ್ಲಿರುವಾಗಲೇ ಅತೃಪ್ತಗೊಂಡಿದ್ದ ಗೌನಳ್ಳಿ ಸೇರಿದಂತೆ ಕೆಲವು ಮುಖಂಡರು ಮಲ್ಲಿನಾಥಗೌಡ ಪಾಟೀಲ ಯಲಗೋಡ ಅವರನ್ನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಎಂದು ಈ ನಾಯಕರು ಬಿಂಬಿಸಿದ್ದರು. ಬಣ್ಣ ಬದಲಿಸುವ ಕೆಲವು ನಾಯಕರ ಬದ್ದತೆ ಇಲ್ಲದ ನಡೆಯಿಂದ ಯಲಗೋಡ ಪಾಟೀಲ ಗೊಂದಲದಲ್ಲಿ ಸಿಲುಕಿದ್ದಾರೆ. ಬಿಜೆಪಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಅವರು ಬಸವಣ್ಣಪ್ಪ ಗೌನಳ್ಳಿ ಅವರಿಗೆ ಈ ಭಾಗದ ಹಿಂದುಳಿದ ನಾಯಕ ಎಂದು ಬಿಂಬಿಸಿ ರಾಜ್ಯ ಸರ್ಕಾರದಿಂದ ದೇವರಾಜ ಅರಸು ಪ್ರಶಸ್ತಿ ಲಭಿಸುವಂತೆ ಮಾಡಿದ್ದರು. ಈ ವಿಷಯ ಸ್ವತಃ ಗೌನಳ್ಳಿಯವರೂ ನಾಲ್ಕು ಜನರ ಮುಂದೆಯೇ ಹೇಳಿದ್ದರು. ಆದರೆ ಗೌನಳ್ಳಿ ಕೊನೆ ಹಂತದಲ್ಲಿ ಬಿಜೆಪಿಗೆ ಬಿಟ್ಟು, ಶಾಸಕರು ಸ್ವಜನ ಪಕ್ಷಪಾತ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದು ಚರ್ಚೆಗೆ ಗ್ರಾಸ ಒಗಿಸಿದೆ.
ಆದರೆ ಕಳೆದ ಬುಧವಾರ ತಾವು ಬಿಜೆಪಿ ಪಕ್ಷ ನಿಷ್ಠರಾಗಿರುವುದಾಗಿ ಹೇಳಿಕೊಂಡಿದ್ದರು. ಅದೇ ದಿನ ಸಂಜೆ ಬಿಜೆಪಿ ಬಿಡುವುದಾಗಿ ಹೇಳಿದ್ದು ದ್ವಂದ್ವ ಮನದ ಹೇಳಿಕೆಗೆ ಸಾಕ್ಷಿ ಎನ್ನಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

