ಪುರಸಭೆ ಚುನಾವಣೆ: ಕಡೆದಿನ 139 ನಾಮಪತ್ರ ಸಲ್ಲಿಕೆ
ಆಳಂದ: ನಾಮಪತ್ರ ಸಲ್ಲಿಕೆ ಕಡೆಯದಿನವಾಗಿದ್ದರಿಂದ 23ವಾರ್ಡ್ಗಳಿಗೆ ಕಾಂಗ್ರೆಸ್- 35, ಬಿಜೆಪಿ-25, ಜೆಡಿಎಸ್- 26, ಕೆಜೆಪಿ- 29, ಸಿಪಿಐ- 2 ಮತ್ತು ಪಕ್ಷೇತರ 99 ನಾಮಪತ್ರ ಸಲ್ಲಿಕೆಯಾಗಿವೆ ಎಂದು ತಹಸೀಲ್ದಾರ್ ಪರಮೇಶ್ವರ ಕೆ. ಸ್ವಾಮಿ ತಿಳಿಸಿದ್ದಾರೆ.
ರಾಷ್ಟ್ರೀಯ ಪಕ್ಷಕ್ಕೆ ಹಿನ್ನಡೆ: ರಾಷ್ಟ್ರೀಯ ಪಕ್ಷವಾಗಿರುವ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಿಗೆ ಸ್ಥಳೀಯ ಪುರಸಭೆ ಚುನಾವಣೆಯ 23 ವಾರ್ಡ್ಗಳಿಗೆ ಪೂರ್ಣವಾಗಿ ಅಭ್ಯರ್ಥಿಗಳು ಕಣಕ್ಕಿಳಿಸಲು ಸಾಧ್ಯವಾಗಿಲ್ಲ. ಪ್ರಾದೇಶಿಕ ಪಕ್ಷ ಜೆಡಿಎಸ್ ಮತ್ತು ಕೆಜೆಪಿ 23 ವಾರ್ಡ್ಗೆ ನಾಮಪತ್ರ ಸಲ್ಲಿಕೆಯಾಗಿವೆ. ತರಾತುರಿಯಲ್ಲಿ ಪುರಸಭೆ ಚುನಾವಣೆ ದಿನಾಂಕ ಪ್ರಕಟಗೊಂಡ ಹಿನ್ನೆಲೆಯಲ್ಲಿ ಇಲ್ಲಿನ ರಾಜಕೀಯ ಮುಖಂಡರಿಗೆ ತಮ್ಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಕಣಕ್ಕಿಳಿಸುವುದೇ ಒಂದು ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಶನಿವಾರ ಕೊನೆ ದಿನವಾದ್ದರಿಂದ ಅನಿವಾರ್ಯ ತಮ್ಮ ಅಭ್ಯರ್ಥಿಗಳ ಪಟ್ಟಿ ಕೊನೆ ಗಳಿಗೆಯಲ್ಲಿ ಅಂತಿಮಗೊಳಿಸಿ ನಾಮಪತ್ರ ಸಲ್ಲಿಕೆಗೆ ಅವಕಾಶ ಕಲ್ಪಿಸಿ ಗಲ್ಲಿ ರಾಜಕಾರಣದ ಚುನಾವಣೆಗೆ ಪರೋಕ್ಷವಾಗಿ ರಣಕಹಳೆಯೂದಿದರು.
ಕಣಕ್ಕಿಳಿಸಿದ ಪಕ್ಷ: ಇಲ್ಲಿನ 23 ವಾರ್ಡ್ಗೆ ಜೆಡಿಎಸ್, ಕೆಜೆಪಿ, ತಲಾ 23 ಅಭ್ಯರ್ಥಿಗಳು ನಾಮಪತ್ರ ಸಲಿಸಿದ್ದಾರೆ. ಬಿಜೆಪಿಯೂ 4,510 ಮತ್ತು 21 ವಾರ್ಡ್ ಹೊರತು ಪಡಿಸಿ ಉಳಿದ 19 ಸ್ಥಾನಗಳಿಗೆ ಮಾತ್ರ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ ಎಂದು ವಕ್ತಾರ ಸಂಜಯ ಮಿಸ್ಕಿನ್ ತಿಳಿಸಿದ್ದಾರೆ. ಕಾಂಗ್ರೆಸ್ನಿಂದ ಒಂದನೂ ಹೊರತು ಪಡಿಸಿ ಉಳಿದೆಲ್ಲ 22 ಸ್ಥಾನಗಳಲ್ಲಿ ನಾಮತ್ರ ಸಲ್ಲಿಸಿದೆ ಎಂದು ಪಕ್ಷದ ಬ್ಲಾಕ್ ಅಧ್ಯಕ್ಷ ಶಂಕರರಾವ್ ದೇಶಮುಖ ಹೇಳಿದ್ದಾರೆ.
ಪಟ್ಟಣದಲ್ಲಿ ಮೊದಲು ಬಾರಿಗೆ ರಾಷ್ಟ್ರವಾದಿ ಕಾಂಗ್ರೆಸ್ನಿಂದ ಐದು ಕಡೆ ವಾರ್ಡ್ 1,12,13,16, 23ರಲ್ಲಿ ತನ್ನ ಅಭ್ಯರ್ಥಿಯ ನಾಮಪತ್ರ ಸಲ್ಲಿಸಲಾಗಿದೆ ಎಂದು ತಾಲೂಕು ಅಧ್ಯಕ್ಷ ಡಾ.ಎಸ್.ಎಂ. ಹಿರೇಮಠ ಹೇಳಿಕೊಂಡಿದ್ದಾರೆ.
ಬಿಎಸ್ಆರ್ ಕಾಂಗ್ರೆಸ್ನಿಂದ ಐದು ಕಡೆ-ವಾರ್ಡ್ 1,6,14,22, 23 ಸ್ಥಾನಗಳಲ್ಲಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿರುವ ಕುರಿತು ಮತ್ತು ಸಿಪಿಐನಿಂದ ಮೂರು ಕಡೆ ವಾರ್ಡ್ 21,22 ಮತ್ತು 23ರಲ್ಲಿ ಅಭ್ಯರ್ಥಿ ನಾಮಪತ್ರ ಸಲ್ಲಿಸಲಾಗಿದೆ ಎಂದು ಮುಖಂಡ ಮೌಲಾ ಮುಲ್ಲಾ ತಿಳಿಸಿದ್ದಾರೆ. ಬಿಎಸ್ಪಿಯಿಂದ ಯಾಮೊಬ್ಬ ಅಭ್ಯರ್ಥಿ ನಾಮಪತ್ರ ಸಲ್ಲಿಸಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

