ಬಿಎಸ್ಸಾರ್ ಅಧಿಕಾರಕ್ಕೆ: ಭವಿಷ್ಯ
ಜೇವರ್ಗಿ: ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಡವರ, ಶ್ರಮಿಕರ, ರೈತರ ಕಾಂಗ್ರೆಸ್ ಪಕ್ಷ ಜನರ ಆಶೀರ್ವಾದದಿಂದ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಬಿ.ಶ್ರೀರಾಮಲು ಭವಿಷ್ಯ ನುಡಿದರು.
ತಾಲೂಕಿನ ಚಿಗರಹಳ್ಳಿ ಗ್ರಾಮದ ಸೈಪೀರಸಾಬ ದರ್ಗಾ ಆವರಣದಲ್ಲಿ ತಾಲೂಕಾ ಬಿಎಸ್ಆರ್ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ತಾಲೂಕಾ ಮಟ್ಟದ ಕಾರ್ಯಕರ್ತರ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಕಳೆದ ಒಂದು ವರ್ಷದಿಂದ ಪಕ್ಷದ ಸಂಘಟನೆಗಾಗಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದೇನೆ. ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸುವ ಉದ್ದೇಶದಿಂದ ರಾಜ್ಯದಲ್ಲಿನ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಕಾರ್ಯಕರ್ತರ ಸಭೆಗಳನ್ನು ನಡೆಸಲಾಗುತ್ತಿದೆ ಎಂದರು.
ಪಕ್ಷಕ್ಕೆ ನೂರಾರು ವರ್ಷಗಳ ಇತಿಹಾಸವಿಲ್ಲ. ಆದರೂ ಪ್ರಸಕ್ತ ನಡೆಯುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ 4,900 ಸ್ಥಾನಗಳಲ್ಲಿ 3,500 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ತಾಲೂಕಿನ ರೈತರ ಬಹುದಿನಗಳ ಬೇಡಿಕೆಯಾದ ಮಲ್ಲಾಬಾದ ಏತನೀರಾವರಿ ಯೋಜನೆಯನ್ನು ಸಂಪೂರ್ಣವಾಗಿ ಜಾರಿಗೊಳಿಸುವಂತೆ ಆಗ್ರಹಿಸಿ, ಮುಂಬರುವ ದಿನಗಳಲ್ಲಿ ಪಕ್ಷದ ವತಿಯಿಂದ ಹೋರಾಟ ರೂಪಿಸಲಾಗುವುದು. ರಾಜ್ಯದಲ್ಲಿ 19 ನದಿಗಳು ಹರಿಯುತ್ತಿದ್ದು,ಬಿಎಸ್ಆರ್ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ನದಿಗಳ ನೀರನ್ನು ತಡೆದು ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.
ಚಿಗರಹಳ್ಳಿ ಜಗದ್ಗುರು ಮರುಳಶಂಕರ ಗುರುಪೀಠದ ಸಿದ್ಧಬಸವ ಕಬೀರ ಸ್ವಾಮಿಗಳು, ಯಲಗೋಡದ ಶಿವಯೋಗಿ ಪ್ರಭು ಮಠದ ಗುರುಲಿಂಗ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು.
ಚಿಗರಹಳ್ಳಿ ಗ್ರಾಮದ ಸಿದ್ದಣ್ಣ ಮುತ್ಯಾ ಸಮ್ಮುಖ, ಮಾಜಿ ಲೋಕಸಭಾ ಸದಸ್ಯ ಕೆ. ವಿರುಪಾಕ್ಷಪ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರಾಸ್ತಾವಿಕ ಬಿಎಸ್ಆರ್ ಪಕ್ಷದ ಮುಖಂಡ ಬೈಲಪ್ಪ ನೆಲೋಗಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ನಂದಕುಮಾರ ಮಾಲಿ ಪಾಟೀಲ, ಶಿವನಂದ ಗುಗವಾಡ, ಆರ್. ಚನ್ನಬಸ್ಸು, ಅಶ್ಪಾಕ ಹುಸೇನ್, ಜಿಲ್ಲಾ ಅಧ್ಯಕ್ಷೆ ಶ್ರೀಲಕ್ಷ್ಮಿ ಕುಲಕರ್ಣಿ, ಶಿವಬಾಯಿ ಗಣಜಲಖೇಡ, ಮಹಿಳಾ ಘಟಕದ ಸದಸ್ಯೆ ಸುಧಾನಾಯ್ಡು. ಬಾಬು ಹೊನ್ನಾನಾಯಕ, ಶಂಕರಣ್ಣ ವಣಿಕ್ಯಾಳ, ಕಲ್ಯಾಣರಾವ ಅಂಬಲಗಿ, ಕಾಸಿಂ ಪಟೇಲ ಬಿಳವಾರ ಆಗಮಿಸಿದ್ದರು. ರಾಮನಾಥ ಬಂಡಾರಿ, ಮಲ್ಲಿಕಾರ್ಜುನ ನೆಲೋಗಿ, ಸಾಯಿಬಣ್ಣ ಕವಾಲ್ದಾರ, ಮಲ್ಲಿಕಾರ್ಜುನ ಗಂವಾರ, ಮೋಬಿನ್ ಗುತ್ತೇದಾರ, ಪ್ರಕಾಶ, ವೀರಭದ್ರಯ್ಯ ಹಿರೇಮಠ, ವಿಶ್ವನಾಥ ಅವರಾದ, ಖಾಜಾಪೀರ ಜಹಾಗಿರದಾರ, ಸುರೇಶ, ಗೋಪಾಲ ಚಟ್ನಳ್ಳಿ, ಶಿವುಬಾಯಿ ಗಣಜಲಖೇಡ, ಪಕ್ಷದ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಧನರಾಜ ರಾಠೋಡ ಸ್ವಾಗತಿಸಿದರು. ರಾಜಶೇಖರ ನಿರೂಪಿಸಿದರು. ಪರಮೇಶ್ವರ ಬಿರಾಳ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

