ಅಧಿಕಾರಿಗಳ ಕ್ರಮಕ್ಕೆ ತಾಂಡಾ ನಿವಾಸಿಗಳ ಆಕ್ರೋಶ
ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ ಹುಣಸಗಿ ವ್ಯಾಪ್ತಿಯಲ್ಲಿ ಬರುವ ಬೈಲಾಪುರ ತಾಂಡಾದಲ್ಲಿರುವ ಮನೆಗಳನ್ನು ತೆರವುಗೊಳಿಸಬೇಕೆಂದು ಸೂಚಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳ ಕ್ರಮ ಖಂಡಿಸಿ ಸೋಮವಾರ ತಾಂಡಾದ ಜನತೆ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ದೇವರಾಜ ನಾಯಕ ನೇತೃತ್ವದಲ್ಲಿ ತಾಂಡಾ ಜನತೆ ಮನವಿ ಪತ್ರ ಸಲ್ಲಿಸಿದರು. ಕಳೆದ 40 ವರ್ಷದಿಂದ ನೂರಾರು ಕುಟುಂಬಗಳು ಮನೆಗಳನ್ನು ನಿರ್ಮಾಣ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಸುರಪುರ ವಲಯ ಅರಣ್ಯಾಧಿಕಾರಿ ತಾಂಡಾಕ್ಕೆ ಆಗಮಿಸಿ ಅರಣ್ಯ ಪ್ರದೇಶದ ಸ್ಥಳದಲ್ಲಿ ಮನೆಗಳನ್ನು ನಿರ್ಮಾಣ ಮಾಡಿಕೊಂಡಿದ್ದೀರಿ, ಕೂಡಲೇ ಅವುಗಳನ್ನು ತೆರವುಗೊಳಿಸಬೇಕೆಂದು ಆದೇಶಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಯಾರದೋ ಮಾತು ಕೇಳಿ ಈ ರೀತಿ ಮಾಡುತ್ತಿರುವ ಶಂಕೆಯಿದೆ. ಕರವೇ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ, ಬೀಲಾ ನಾಯಕ, ಬಿಕ್ಯಾ ನಾಯಕ, ಶಂಕರ ನಾಯಕ, ಪರಶುರಾಮ ಸೇರಿದಂತೆ ಮಹಿಳೆಯರು ಇದ್ದರು.
ನೇತ್ರ ತಪಾಸಣೆ, ಶಸ್ತ್ರಚಿಕಿತ್ಸಾ ಶಿಬಿರ
ಬೀದರ್: ಜರ್ಮನಿಯ ಹಮಾರಾ ಬಂಧನ್ ಸ್ವಯಂ ಸೇವಾ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ವೆಲ್ಮೆಗ್ನಾ ಗುಡ್ ನ್ಯೂಸ್ ಸೊಸೈಟಿಯು ಜಿಲ್ಲೆಯ ಮೂರು ಗ್ರಾಮಗಳಲ್ಲಿ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರಗಳನ್ನು ಹಮ್ಮಿಕೊಂಡಿದೆ. ತಾಲೂಕಿನ ಜನವಾಡಾದಲ್ಲಿ ಫೆ.7, ಭಾಲ್ಕಿ ತಾಲೂಕಿನ ಹಲಬರ್ಗಾದಲ್ಲಿ ಫೆ.14 ಮತ್ತು ಬೀದರ್ ತಾಲೂಕಿನ ಆಣದೂರಿನಲ್ಲಿ ಫೆ.21ರಂದು ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಲಿವೆ. ಜನವಾಡ, ಹಲಬರ್ಗಾ ಹಾಗೂ ಆಣದೂರ್ ಗ್ರಾಮಗಳಲ್ಲಿ ನೇತ್ರ ತಪಾಸಣೆಗೆ ಒಳಗಾದವರಿಗೆ ಕ್ರಮವಾಗಿ ಫೆ.8, 15 ಮತ್ತು 22ರಂದು ಉಚಿತ ಶಸ್ತ್ರಚಿಕಿತ್ಸೆ ನಡೆಸಲಾಗುವುದು. ಈ ಮೂರು ಕಡೆಗಳಲ್ಲಿ ನಡೆಯಲಿರುವ ಶಿಬಿರಗಳಲ್ಲಿ ಒಟ್ಟು 500 ಜನರ ನೇತ್ರ ತಪಾಸಣೆ ನಡೆಸಲಾಗುವುದು. ಅಗತ್ಯ ಇರುವ 100 ಜನರಿಗೆ ಬೀದರಿನ ಗೋಲೆಖಾನಾದಲ್ಲಿರುವ ಡಾ. ಸಾಲಿನ್ಸ್ ಆಸ್ಪತ್ರೆಯಲ್ಲಿ ಉಚಿತ ಶಸ್ತ್ರಚಿಕಿತ್ಸೆ ನಡೆಸಲಾಗುವುದು. ವೆಲ್ಮೆಗ್ನಾ ಗುಡ್ ನ್ಯೂಸ್ ಸಂಸ್ಥೆಯು ಹಮಾರಾ ಬಂಧನ್ ಸಹಯೋಗದೊಂದಿಗೆ ನಡೆಸುತ್ತಿರುವ 17ನೇ ಉಚಿತ ನೇತ್ರ ತಪಾಸಣಾ ಶಿಬಿರ ಇದಾಗಿದೆ. ಹೆಚ್ಚಿನ ಮಾಹಿತಿಗಾಗಿ ಹಮಾರಾ ಬಂಧನ್ ಸಂಸ್ಥೆಯ ವೆಬ್ಸೈಟ್ ಢಿಢಿಢಿ.ಛಟಛ್ಠಛ-ಛಿಛಟಿಝಛಟಿ.್ಟ್ಠ್ಜ, ಢಿಢಿಢಿ.ಛಟಛ್ಠಛ-ಛಿಛಟಿಝಛಟಿ.ಜಜ ನೋಡಬಹುದು ಅಥವಾ ್ಝಟಿಜ್ಟಿಝಛಟಛ್ಠಛ-ಛಿಛಟಿಝಛಟಿ.ಜಜ ಇ- ಮೇಲ್ ವಿಳಾಸಕ್ಕೆ ಸಂಪರ್ಕಿಸಬಹುದು. ಶಿಬಿರದ ಕುರಿತ ವಿವರಗಳಿಗಾಗಿ ದೂ. 08482-230467, ಮೊ. 8095248253 ಅಥವಾ 9731830219 ಸಂಪರ್ಕಿಸಬಹುದು ಡಾ. ಸಿಬಿಲ್ ಮೆಶ್ರಾಂಕರ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

