ಗುಲ್ಬರ್ಗಾ

ನೇಕಾರರ ಬೇಡಿಕೆಗೆ ಸ್ಪಂದಿಸಲು ಒತ್ತಾಯ

Published On :

ಆಳಂದ: ಸಂಕಷ್ಟದಲ್ಲಿರುವ ರಾಜ್ಯ ನೇಕಾರ ಬಾಂಧವರ ಬೇಡಿಕೆಗಳನ್ನು ಸರ್ಕಾರ ಸ್ಪಂದಿಸಬೇಕೆಂದು ಕೈಮಗ್ಗ ನಿಗಮದ ರಾಜ್ಯ ಹಿರಿಯ ಸದಸ್ಯ ಸಿದ್ಧಾರೂಢ ಚ. ಸನಗುಂದಿ ಅವರು ಒತ್ತಾಯಿಸಿದ್ದಾರೆ.
ಈ ಕುರಿತು ನೇಕಾರ ನಿಗಮದ ನೂತನ ಅಧ್ಯಕ್ಷ ರಾಜಶೇಖರ ಶೀಲವಂತ ಅವರಿಗೆ ಬೇಡಿಕೆಗೆ ಪತ್ರ ಸಲ್ಲಿಸಿರುವ ಅವರು, ಸರ್ಕಾರದ ನೆರವಿನಿಂದ ಆಳಂದ, ಗುರುಮಠಕಲ್ ಪಟ್ಟಣದಲ್ಲಿ ನಿರ್ಮಿಸಲಾದ ವಸತಿ ಗೃಹಗಳ ಸಾಲದ ಬಡ್ಡಿ ಮನ್ನಾ ಮಾಡಿದ ಬಳಿಕ ಮನೆಗಳ ಸಾಲವನ್ನು ನೇಕಾರರು ಭರಿಸಿದ್ದಾರೆ. ಆದರೂ ಫಲಾನುಭವಿಗಳ ಹೆಸರಿಗೆ ಇನ್ನೂ ಮನೆಗಳ ನೋಂದಣಿ ಕೈಗೊಂಡಿಲ್ಲ ಎಂದರು.
ಸಾಲ ಮನ್ನಾದ ಕುರಿತು ಸರ್ಕಾರದ ಹೇಳಿಕೆಯಂತೆ ಇನ್ನೂ ಸಾಲ ಮನ್ನಾ ಮಾಡಿರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಶೇ.3ರ ಬಡ್ಡಿ ದರದಲ್ಲಿ ಕೈಮಗ್ಗ ನಿಗಮದ ನೇಕಾರರಿಗೆ 50 ಸಾವಿರ ವರೆಗಿನ ಸಾಲವನ್ನು ಇದುವರೆಗೂ ಯಾರಿಗೂ ವಿತರಿಸಿಲ್ಲ ಎಂದರು.
ಮಾರುಕಟ್ಟೆಯಲ್ಲಿ ದಿನ ಬಳಕೆಯ ಎಲ್ಲ ವಸ್ತುಗಳ ಬೆಲೆ ಏರಿಕೆಯಿಂದ ಜೀವನ ಸಾಗಿಸಲು ತೊಂದರೆಯಾಗುತ್ತಿದೆ. ಈ ಕುರಿತು ಸರ್ಕಾರವು ನೇಕಾರರಿಗೆ ನೀಡಿದ ಭರವಸೆಯಂತೆ ನಡೆದುಕೊಳ್ಳಬೇಕು. ನಿಗಮದ ಅಧ್ಯಕ್ಷರು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಶ್ರಮಿಸಬೇಕೆಂದು ಆಗ್ರಹಿಸಿದರು. ನಾಗೇಂದ್ರಪ್ಪ ಹೊಸಮನಿ, ಚಂದ್ರಕಾಂತಯ್ಯ ಸ್ವಾಮಿ, ಅಯೂಬಲಿ ಜಾಮದಾರ, ಅಬ್ದಲ್‌ಸಾಬ್ ಅಂಬುಲಕಿಚಡೆ, ಮಹಾನಂದ ದೊಡ್ಮನಿ, ಕಸ್ತೂರಬಾಯಿ ಜಾಲದ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.