ಗುಲ್ಬರ್ಗಾ

ಫೆ.1, 2ರಂದು ಶಾಸ್ತ್ರೀಯ ಸಂಗೀತ ಸಮ್ಮೇಳನ

Published On :




ಗುಲ್ಬರ್ಗ: ಗಾನಯೋಗಿ ಪಂಡಿತ ಪಂಚಾಕ್ಷರಿ ಗವಾಯಿಗಳ 121ನೇ ಜಯಂತಿ ಉತ್ಸವದ ಅಂಗವಾಗಿ ಗದಗ-ಗುಲ್ಬರ್ಗದ ಪಂಚಾಕ್ಷರಿ ಸೇವಾ ಸಮಿತಿ ವತಿಯಿಂದ ಫೆ.1 ಮತ್ತು 2ರಂದು ಗುಲ್ಬರ್ಗದ ಪಂಡಿತ ರಂಗ ಮಂದಿರದಲ್ಲಿ ಅಖಿಲ ಭಾರತ ಶಾಸ್ತ್ರೀಯ ಸಂಗೀತ ಸಮ್ಮೇಳನ ಆಯೋಜಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಬುಧವಾರ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಡಿ.ವಿ. ಪಾಟೀಲ್ ಮಾತನಾಡಿ, 2 ದಿನಗಳ ಮೇಳಕ್ಕೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಖ್ಯಾತಿ ಹಾಡುಗಾರರು, ವಾದಕರು ಆಗಮಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಮುಂಬೈನ ಕೊಳಲು ವಾದಕ ಸಮೀರ್ ರಾವ್, ಶಾಲ್ಮಲಿ ಜೋಷಿ, ಕೊಲ್ಕತ್ತದ ರತನ್ ಭಾರತಿ, ಕುಮಾರ ಮರಡೂರ್, ಭೂಪಾಲ್‌ದ ಶಾಶ್ವತ ಮಾಂಡಳ್, ಸ್ಥಳೀಯ ಕಲಾವಿದರಾದ ಸಾಂತಲಿಂಗ ದೇಸಾಯಿ ಕಲ್ಲೂರ್, ಜಡೇಶ ದೇಸಾಯಿ ಕಲ್ಲೂರ್, ಮಾಲಾಶ್ರೀ ಕಣವಿ, ವೀರಭದ್ರಯ್ಯ ಯಾವಗಲ್, ಧಾರವಾಡ ಆಕಾಶವಾಣಿಯ ಅಂಧ ಕಲಾವಿದೆ ಶಕ್ತಿ ಪಾಟೀಲ್, ಶಿವಣ್ಣ ದೇಸಾಯಿ ಕಲ್ಲೂರ್, ಪಂಚಾಕ್ಷರಿ ಕಣವಿ, ರೇವಯ್ಯ ವಸ್ತ್ರದಮಠ, ಬದ್ರೀನಾಥ ಮುಡಬಿ, ಸಿದ್ರಾಮಪ್ಪ ಪೊಲೀಸ್ ಪಾಟೀಲ್, ಗುರುಶಾಂತಯ್ಯ ಸ್ಥಾವರಮಠ ಸೇರಿದಂತೆ ಅನೇಕ ಕಲಾವಿದರು ಮೇಳದಲ್ಲಿ ಸಂಗೀತ ಸುಧೆ ಉಣಬಡಿಸಲಿದ್ದಾರೆ.
ವಿ.ಕೆ. ಸಲಗರದ ದ್ವಿತೀಯ ಸಾಂಬ ಶಿವಾಚಾರ್ಯರು, ಡಾ. ಶರಣಬಸಪ್ಪ ಅಪ್ಪ ಸಾನ್ನಿಧ್ಯ ವಹಿಸಲಿದ್ದಾರೆ. ರಾಜಗುರುಸ್ವಾಮಿ ಕಲಕೇರಿ, ಮಾಜಿ ಶಾಸಕರಾದ ಎಂ.ವೈ. ಪಾಟೀಲ್, ಕೇದಾರಲಿಂಗಯ್ಯ ಹಿರೇಮಠ, ಎಚ್ಕೆಡಿಬಿ ಅಧ್ಯಕ್ಷ ಮಾಹಾಂತಗೌಡ ಪಾಟೀಲ್, ವೆಂಕಟರೆಡ್ಡಿ ಮುದ್ನಾಳ್, ನಾಗಪ್ಪ ಹೊನ್ನಳ್ಳಿ, ಸಿ.ಕೆ. ಶಾಸ್ತ್ರಿ ಸೇರಿದಂತೆ ಅನೇಕರು ಫೆ.1ರ ಸಮ್ಮೇಳನ ಉದ್ಘಾಟನೆ ದಿನ ಪಾಲ್ಗೊಳ್ಳುತ್ತಿದ್ದಾರೆ.
ಫೆ.2ರ ಸಮಾರಂಭದಲ್ಲಿ ಹಾಸನದ ಕೋಡಿಮಠ ಶಿವಾನಂದ ಶಿವಯೋಗಿಗಳು, ಸುಲಫಲ ಮಠದ ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಗುಲ್ಬರ್ಗ ಕಲಾವಿದ ಸೋಮಶೇಖರ ಮೂಲಗೆ, ಸಚಿವರಾದ ರೇವುನಾಯಕ ಬೆಳಮಗಿ, ಶಾಸಕರಾದ ಶಶಿಲ್ ನಮೋಶಿ, ಅರುಣಾ ಪಾಟೀಲ್, ಡಾ. ವಿಕ್ರಂ ಪಾಟೀಲ್, ಬಿ.ಆರ್. ಪಾಟೀಲ್, ಬಿ.ಜಿ. ಪಾಟೀಲ್, ನೀಲಾಂಬಿಕಾ ನಾಗನಹಳ್ಳಿ, ಕಲ್ಲೀನಾಥ ಶಾಸ್ತ್ರಿಗಳು ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ. ಸಂಗೀತ ಸಮ್ಮೇಳನಕ್ಕೆ ಪ್ರವೇಶ ಉಚಿತ. 2 ದಿನ ಸಂಜೆ 4ರಿಂದ ರಾತ್ರಿ 10ರವರೆಗೆ ಸಂಗೀತ ಕಾರ್ಯಕ್ರಮಗಳು ನಡೆಯುತ್ತವೆ ಎಂದು ಸಂಘಟಕರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.