ಗುಲ್ಬರ್ಗಾ

ಖಾಸಗಿ ವಾಹನ ಸಂಚಾರ ತಡೆಯಲು ಒತ್ತಾಯ

Published On :

ಗುಲ್ಬರ್ಗ: ಗುತ್ತಿಗೆ ಸಾರಿಗೆ (ಕಾಂಟ್ರ್ಯಾಕ್ಟ್ ಕ್ಯಾರೇಜ್) ಪರವಾನಿಗೆ ಪಡೆದು ಹಂತ ಸಾರಿಗೆ (ಸ್ವೇಜ್ ಕ್ಯಾರೇಜ್) ರೀತಿಯಂತೆ ಅನಧಿಕೃತವಾಗಿ ಕಾರ್ಯಚರಣೆಯಲ್ಲಿರುವ ಖಾಸಗಿ ವಾಹನಗಳ ಕಾರ್ಯಾಚರಣೆಯನ್ನು ತಕ್ಷಣ ತಡೆದಟ್ಟುವಂತೆ ಕರ್ನಾಟಕ ರಸ್ತೆ ಸಾರಿಗೆ ನೌಕರರ ಮಹಾ ಮಂಡಳ ಈಶಾನ್ಯ ವಲಯದ ಪ್ರಧಾನ ಕಾರ್ಯದರ್ಶಿ ರಶೀದ್ ಜಾವೀದ್, ಚಂದ್ರಕಾಂತ ಡೊಳ್ಳೆ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಂಗಳೂರಿನ ಸಾರಿಗೆ ಇಲಾಖೆಯು ಕಳೆದ 21.5.2013 ರಂದು ಕಾಂಟ್ರ್ಯಾಕ್ಸ್ ಕ್ಯಾರೇಜ್ ಪರವಾನಿಗೆದಾರರು ನಿಯಮಗಳನ್ನು ಉಲ್ಲಂಘನೆ ಮಾಡಿ ಸ್ವೇಜ್ ಕ್ಯಾರೇಜ್ ರೀತಿಯಂತೆ ಕಾರ್ಯಾಚರಣೆ ಮಾಡುತ್ತಿರುವ ವಾಹನಗಳ ವಿರುದ್ಧ ಕ್ರಮ ಕಾನೂನು ಕ್ರಮ ಜರುಗಿಸುವಂತೆ ಸಂಬಂಧಿಸಿದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ ಎಂದರು.
ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದಿಂದ 500 ಮೀಟರ್ ಪರದಿಯಲ್ಲಿ ಖಾಸಗಿ ವಾಹನಗಳ ನಿಲುಗಡೆ ನಿಷೇಧಿಸಿದರೂ ಸಹ ಖಾಸಗಿ ವಾಹನಗಳು ಅನಧಿಕೃತವಾಗಿ ಕಾರ್ಯಾಚರಣೆ ನಡೆಯುತ್ತಿದ್ದು, ಕೂಡಲೇ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ನಿಯಮಗಳನ್ನು ಉಲ್ಲಂಘಿಸಿ ಕಾರ್ಯಾಚರಣೆ ಮಾಡುತ್ತಿರುವುದರಿಂದ ಈ.ಕ.ರ.ಸಾ. ಸಂಸ್ಥೆಯ ಗುಲ್ಬರ್ಗ ವಿಭಾಗಗಳಿಗೆ ಪ್ರತಿದಿನ ಸುಮಾರು 15 ರಿಂದ 20 ಲಕ್ಷ ಸಾರಿಗೆ ಆದಾಯ ನಷ್ಟು ಉಂಟಾಗುತ್ತಿದೆ ಎಂದರು.
ಈಗಾಗಲೇ ನ್ಯಾಯಾಲಯ ಇಂತಹ ಅನಧಿಕೃತ ಖಾಸಗಿ ವಾಹನಗಳ ಕಾರ್ಯಾಚರಣೆ ತಡೆಗಟ್ಟಲು ತೀರ್ಪು  ನೀಡಿರುತ್ತದೆ. ಸಾರಿಗೆ ಸಂಸ್ಥೆಯ ಸರ್ಕಾರದ ಅಧೀನದಲ್ಲಿ ಕಾರ್ಯ ನಿರ್ವಹಿಸುವ ಸಂಸ್ಥೆಯಾಗಿದ್ದು, ಇದಕ್ಕೆ ಆಗುವ ನಷ್ಟ ಸರ್ಕಾರದ ನಷ್ಟವಾಗಿರುತ್ತದೆ. ಈ ಒಂದು ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ, ಸಿಬ್ಬಂದಿ ಹೆಚ್ಚಿನ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಸಂಸ್ಥೆಯ ಹಿತದೃಷ್ಟಿಯಿಂದ ಖಾಸಗಿ ವಾಹನಗಳನ್ನು ಸರ್ಕಾರದ ಆದೇಶದಂತೆ ತಕ್ಷಣದಿಂದಲೇ ನಿಲ್ಲಿಸಲು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಗಣಪತಿ ಗೋಳಾ, ಭೀಮರಾವ, ಶಿವಶರಣಪ್ಪ ಮಧುಗುಣಕಿ, ಸೂರ್ಯಕಾಂತ ಸಿಂಗೆ, ರವಿ ಪಾಟೀಲ್ ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.