ಗುಲ್ಬರ್ಗಾ

ಹೊಗಳಿ ಅಟ್ಟಕ್ಕೇರಿಸಬೇಡಿ: ಶಾಸಕ

Published On :

ಶಹಾಪುರ: ನನ್ನನ್ನು ಹೊಗಳಿ, ಸನ್ಮಾನಿಸುವ ಮೂಲಕ ದೊಡ್ಡವನನ್ನಾಗಿ ಮಾಡಬೇಡಿ. ಸಣ್ಣ ವಯಸ್ಸಿನವನಾದ ನನ್ನನ್ನು ಶಾಸಕನ ಸ್ಥಾನಕ್ಕೆ ತಂದು ಕೂಡಿಸಿದ ತಾಲೂಕಿನ ಪ್ರತಿಯೊಬ್ಬ ಮತದಾರರ ಋಣ ತೀರಿಸುವ ಭಾರ ನನ್ನ ಮೇಲಿದೆ. ನನ್ನಿಂದ ಸೇವೆ ಪಡೆದು ಆಶೀರ್ವದಿಸಿದರೆ ಅದೇ ಎಲ್ಲಕ್ಕಿಂತ ಮಿಗಿಲಾದ ಸನ್ಮಾನ ಎಂದು ಗುರು ಪಾಟೀಲ ಶಿರವಾಳ ಅಭಿಪ್ರಾಯಪಟ್ಟರು.
ತಾಲೂಕಿನ ಗೋಗಿ ಗ್ರಾಮದಲ್ಲಿ ಸಾರ್ವಜನಿಕರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸದಾ ಕಾಲ ಸರ್ವರ ಹಿತವನ್ನು ಬಯಸುವಂಥ ಸಾಮಾಜಿಕ ನ್ಯಾಯದಡಿ ಕರ್ತವ್ಯ ನಿರ್ವಹಿಸಿ ದುರ್ಬಲರು, ಹಿಂದುಳಿದವರು, ಶೋಷಿತರು ಮತ್ತು ಇತರ ಎಲ್ಲ ವರ್ಗದವರ ಹಿತಕ್ಕಾಗಿ ಸಾರ್ಥಕ ಕಾರ್ಯ ನನ್ನಿಂದ ಆಗಬೇಕಿದೆ. ಚುನಾವಣೆ ನಂತರ ಪಕ್ಷ ರಾಜಕೀಯವಿಲ್ಲ. ನನ್ನವರು, ನಿನ್ನವರು ಎಂಬುದನ್ನು ತೆಗೆದು ಹಾಕಿ. ಇಲ್ಲಿಯ ಎಲ್ಲರೂ ನಮ್ಮವರೇ. ಯಾರದ್ದೇ ಕೆಲಸವಿದ್ದರೂ ನಿರ್ಭಿಡೆಯಿಂದ ಬಂದು ಭೇಟಿಯಾಗಿ ಸಾಧ್ಯವಾದ ಕೆಲಸ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಮೂಲ ಸೌಕರ್ಯಕ್ಕೆ ಆದ್ಯತೆ: ಗೋಗಿ ಗ್ರಾಮಕ್ಕೆ ಸಂಬಂಧಿಸಿದಂತೆ ಮೂಲ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲು ಬದ್ಧನಾಗಿದ್ದು, ವಿಶೇಷವಾಗಿ ಭೀಮಾ ನದಿ ಬ್ಯಾರೇಜಿನಿಂದ ಮೂಡಬೂಳ ಮಾರ್ಗವಾಗಿ ಕುಡಿವ ನೀರು ತಲುಪಿಸಿ ಗ್ರಾಮಸ್ಥರಿಗೆ ಶುದ್ಧ ನೀರು ಕೊಡುವ ಯೋಜನೆಯಿದ್ದು, ಅದಕ್ಕಾಗಿ ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು. ಯೋಜನೆ ಇರಲಿ ದೀನ ದುರ್ಬಲರಿಗೆ ತಲುಪುವಲ್ಲಿ ಎಲ್ಲರ ಸಹಕಾರ ಅಗತ್ಯ. ಕೇವಲ ಭರವಸೆ ನೀಡುವುದು ಬೇಡ, ಹೇಳಿದ್ದನ್ನು ಮಾಡಿ ತೋರಿಸುವ ಸಂಕಲ್ಪಕ್ಕೆ ಜನತೆಯ ಆಶೀರ್ವಾದ ಬೇಕು ಎಂದರು.
 ಹಿರಿಯ ಧುರೀಣ ಮಲ್ಲಣ್ಣ ಮಡ್ಡಿ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.