ನ್ಯಾಯಯುತ ನಿಯಮಾವಳಿ ರೂಪಿಸಿ: ಮಂಜುಳಾ
ಯಾದಗಿರಿ: ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ಎಲ್ಲ ರಂಗಗಳಲ್ಲಿ ವಿಶೇಷ ಸ್ಥಾನಮಾನ ಲಭಿಸುವಂತೆ ನಿಯಮಾವಳಿ ರೂಪಿಸಬೇಕೆಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಂಜುಳಾ ಘೂಳಿ ಸಂವಿಧಾನದ 371(ಜೆ) ಕಲಂ ಅಡಿ ರೂಪುರೇಷೆ ಸಿದ್ಧಪಡಿಸುವ ಸಂಪುಟ ಉಪಸಮಿತಿ ಅಧ್ಯಕ್ಷ ಗ್ರಾಮೀಣಾಭಿವೃದ್ಧಿ ಖಾತೆ ಸಚಿವ ಎಚ್.ಕೆ. ಪಾಟೀಲರಿಗೆ ಮನವಿ ಮಾಡಿದರು.ಗುಲ್ಬರ್ಗಕ್ಕೆ ಆಗಮಿಸಿದ್ದ ಸಚಿವ ಪಾಟೀಲರನ್ನು ಭೇಟಿ ಮಾಡಿದ ಜಿಲ್ಲಾ ಕಾಂಗ್ರೆಸ್ ಮುಖಂಡರ ನಿಯೋಗ ಪ್ರತ್ಯೇಕ ಮನವಿ ಸಲ್ಲಿಸಿ, 6 ಜಿಲ್ಲೆಗಳ ಅಭಿವೃದ್ಧಿಗೆ ಪೂರಕವಾದ ನಿಯಮಾವಳಿಗಳನ್ನು ರೂಪಿಸಿ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸಬೇಕು.ಕೃಷಿ, ಕೈಗಾರಿಕೆ, ರಸ್ತೆ, ಆರೋಗ್ಯ, ಸಾರಿಗೆ, ಮೂಲ ಸೌಕರ್ಯ, ವಿಮಾನಯಾನ ಸೌಲಭ್ಯ, ತೋಟಗಾರಿಕೆ ಸೇರಿದಂತೆ ಎಲ್ಲ ರಂಗಗಳಲ್ಲಿ ಸರ್ವಾಂಗೀಣ ಅಭಿವೃದ್ಧಿಯಾಗುವಂತೆ ಜನರ ನಿರೀಕ್ಷೆಗೆ ತಕ್ಕಂತೆ ಕಾನೂನು ರೂಪಿಸಿ ಜಾರಿಗೆ ತರಲು ತಾವು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.ಯುವ ಮುಖಂಡ ಮಾಣಿಕರೆಡ್ಡಿ ಕುರಕುಂದ, ಬಂದೇನವಾಜ್, ಲಕ್ಷ್ಮಣ ಪವಾರ್ ಇತರರು ಇದ್ದರು.
ಗ್ರಾಹಕನಾಗಿ ಬಂದು ಕಳ್ಳತನ
ಹುಣಸಗಿ: ಪಟ್ಟಣದ ಈರಣ್ಣ ಪತ್ತಾರ ಎಂಬುವವರಿಗೆ ಸೇರಿದ ಬಂಗಾರದ ಆಭರಣದ ಅಂಗಡಿಗೆ ಗ್ರಾಹಕನ ವೇಷದಲ್ಲಿ ಬಂದ ವ್ಯಕ್ತಿಯೊಬ್ಬ 135 ಗ್ರಾಂ ಬಂಗಾರವನ್ನು ಕದ್ದು ಪರಾರಿಯಾದ ಘಟನೆ ನಡೆದಿದೆ. ಬಂಗಾರದ ಒಡವೆಗಳನ್ನು ಖರೀದಿ ಮಾಡುವವನಂತೆ ನಟಿಸುತ್ತ, ಮಣಿಗಳನ್ನು ಕೆಳಗೆ ಚೆಲ್ಲಿ ಮಾಲೀಕನ ಗಮನ ಬೇರೆಡೆ ಹರಿಯುವಂತೆ ಆ ಅಪರಿಚಿತ ವ್ಯಕ್ತಿ ಮಾಡಿದ್ದಾನೆ. ತಕ್ಷಣ ಬಂಗಾರದ ಆಭರಣಗಳನ್ನು ಕದ್ದು ಬೈಕಿನಲ್ಲಿ ವೇಗದಿಂದ ಪರಾರಿಯಾಗಿ ಹೋದನೆಂದು ಹೇಳಲಾಗಿದೆ. ಈ ಬಗ್ಗೆ ಹುಣಸಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪ್ರಭಾರಿ ಎಸ್ಪಿ ಬಿ.ಮಹಾಂತೇಶ, ಡಿವೈಎಸ್ಪಿ ಎಸ್.ಡಿ. ಕಟ್ಟಿಮನಿ, ಹುಣಸಗಿ ಸಿಪಿಐ ಸತ್ಯನಾರಾಯಣರಾವ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆರೋಪಿಗಳ ಪತ್ತೆಗಾಗಿ ವ್ಯಾಪಕ ಜಾಲ ಬೀಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
6,ಕಮಲಾಪುರದಲ್ಲಿ ಜನಸ್ಪಂದನ ಸಭೆ
ಗುಲ್ಬರ್ಗ: ಗುಲ್ಬರ್ಗ ತಾಲೂಕಿನ ಕಮಲಾಪುರ ಪಟ್ಟಣದ ಗ್ರಾಮ ಪಂಚಾಯತಿ ಆವರಣದಲ್ಲಿ ಜುಲೈ 6 ರಂದು ಬೆಳಗ್ಗೆ 11 ಗಂಟೆಗೆ ಜನಸ್ಪಂದನ ಸಭೆ ಜರುಗಲಿದೆ. ಸಾರ್ವಜನಿಕರು ಗುಲ್ಬರ್ಗ ತಾಲೂಕು ಮಟ್ಟದ ಅಧಿಕಾರಿಗಳು ಈ ಸಭೆಗೆ ತಪ್ಪದೆ ಹಾಜರಾಗುವಂತೆ ಗುಲ್ಬರ್ಗ ತಹಶೀಲ್ದಾರರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

