ಗುಲ್ಬರ್ಗಾ

ಆಸ್ಪತ್ರೆ ಅವ್ಯವಸ್ಥೆ: ಪ್ರತಿಭಟನೆ

Published On :

ಶಹಾಪುರ: ಆಸ್ಪತ್ರೆಯೊಳಗೆ ಪ್ರವೇಶಿಸಿದರೆ ಆರೋಗ್ಯವಂತರಿಗೂ ರೋಗ ಬರುವಂಥ ವಾತಾವರಣ ಪಟ್ಟಣದ ಸರ್ಕಾರಿ ಸಾರ್ವಜನಿಕರ ಆಸ್ಪತ್ರೆಯಲ್ಲಿ ನಿರ್ಮಾಣವಾದಗಿದ್ದು, ಇಡೀ ವ್ಯವಸ್ಥೆ ಹದಗೆಟ್ಟು ಹೋಗಿದೆ ಎಂದು ಕರವೇ ತಾಲೂಕಾಧ್ಯಕ್ಷ ವೆಂಕಟೇಶ ಬೋನೆರ ಆಕ್ರೋಶ ವ್ಯಕ್ತಪಡಿಸಿದರು.
ಕರವೇ ಕಾರ್ಯಕರ್ತರು ಆಸ್ಪತ್ರೆ ಅವ್ಯವಸ್ಥೆ ಖಂಡಿಸಿ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಹೆಸರಿಗೆ ಮಾತ್ರ ಆಸ್ಪತ್ರೆ ಎಂಬಂತಾಗಿದ್ದು ಯಾವ ಚಿಕಿತ್ಸೆಯೂ ಇಲ್ಲಿ ಸಿಗುತ್ತಿಲ್ಲ. ಇಡೀ ವಾತಾವರಣ ಹದಗೆಟ್ಟು ಹೋಗಿದ್ದು, ವೈದ್ಯರನ್ನು ಕೇಳಿದರೆ ಸಕಾರಾತ್ಮಕ ಉತ್ತರ ಕೊಡುತ್ತಿಲ್ಲ. ಹಳ್ಳಿಯಿಂದ ಬಂದ ರೋಗಿಗಳಿಗೆ ತುರ್ತು ಚಿಕಿತ್ಸೆಯಿಲ್ಲ. ತಪಾಸಣಾ ಯಂತ್ರೋಪಕರಣಗಳಿಲ್ಲ. ವೈದ್ಯರಿಗೆ ತಮ್ಮ ಖಾಸಗಿ ಆಸ್ಪತ್ರೆ ಕಡೆಯೇ ಹೆಚ್ಚು ಗಮನವಾಗಿದ್ದು, ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಯ ಬಗ್ಗೆ ವಿಶ್ವಾಸವೇ ಹೊರಟು ಹೋಗಿದೆ. ಶೌಚಾಲಯ, ಸುತ್ತಲಿನ ಪರಿಸರದ ಸ್ವಚ್ಛತೆ ಮಾಡುವವರೇ ಇಲ್ಲ. ಇಡೀ ಆಸ್ಪತ್ರೆ ಕಸದ ಕೊಂಪೆಯಾಗಿದೆ ಎಂದು ಆರೋಪಿಸಿದರು. ತಾಲೂಕು ಆಸ್ಪತ್ರೆ ವೈದ್ಯರ ನಿರಾಸಕ್ತಿಯಿಂದ ಆಸ್ಪತ್ರೆ ಸಂಪೂರ್ಣ ಹಾಳಾಗಿದೆ. ಯಾರೂ ಯಾರ ಮಾತನ್ನು ಕೇಳುತ್ತಿಲ್ಲ. ವ್ಯವಸ್ಥೆ ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಶಹಾಪುರ ಆಸ್ಪತ್ರೆ ಉಳಿಸಿ ಹೋರಾಟ ಕೈಕೊಳ್ಳಲಾಗುವುದು ಎಂದು ಎಚ್ಚರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.