ಗುಲ್ಬರ್ಗಾ

ಬೈಕ್‌ಗಳ ಡಿಕ್ಕಿ: ವ್ಯಕ್ತಿ ಸಾವು

Published On :

ಗುಲ್ಬರ್ಗ: ಎರಡು ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಒಬ್ಬ ಸವಾರ ಸಾವಿಗೀಡಾದ ಘಟನೆ ಮಂಗಳವಾರ ರಾತ್ರಿ 8ರ ಸುಮಾರಿಗೆ ಕಮಲಾಪುರದ ಇಸ್ಮಾಯಿಲ್ ದಾಬಾದ ಬಳಿ ನಡೆದಿದೆ.
ಆಂಧ್ರ ಪ್ರದೇಶದ ಜಿಹಿರಾಬಾದ್ ತಾಲೂಕಿನ ಚರಕಪಲ್ಲಿ ಗ್ರಾಮದ ಜಗನ್ನಾಥರೆಡ್ಡಿ ತಂದೆ ವೀರಾರೆಡ್ಡಿ(45) ಮೃತನು. ಜಯವಂತರೆಡ್ಡಿ ಮತ್ತು ಜಗನ್ನಾಥರೆಡ್ಡಿ ಇಬ್ಬರು ಹುಮನಾಬಾದ್ ಗುಲ್ಬರ್ಗ ರಾಷ್ಟ್ರೀಯ ಹೆದ್ದಾರಿ 218ರ ರಸ್ತೆಯ ಮೂಲಕ ಕಮಲಪುರ ಮಾರ್ಗವಾಗಿ ದ್ವಿಚಕ್ರ ವಾಹನದ ಮೇಲೆ ಜಹಿರಾಬಾದ್‌ಗೆ ಹೋಗುತ್ತಿದ್ದಾಗ ಕಮಲಪುರದ ಇಸ್ಮಾಯಿಲ್ ದಾಬಾದ ಹತ್ತಿರ ಇನ್ನೊಂದು ದ್ವಿಚಕ್ರ ವಾಹನದ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ತೀವ್ರ ಗಾಯಗೊಂಡಿದ್ದ ಜಗನ್ನಾಥರೆಡ್ಡಿ ಅವರನ್ನು ಗುಲ್ಬರ್ಗ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹೈದ್ರಾಬಾದಿಗೆ ಕರೆದುಕೊಂಡು ಹೋಗುತ್ತಿದಾಗ ಜಹಿರಾಬಾದ್ ಸಮೀಪ ಕೊನೆಯುಸಿರೆಳೆದಿದ್ದಾನೆ. ಜಯವಂತರೆಡ್ಡಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಡಿಕ್ಕಿ ಹೊಡೆದ ದ್ವಿಚಕ್ರ ವಾಹನದ ಸವಾರ ಪರಾರಿಯಾಗಿದ್ದಾನೆ. ಈ ಕುರಿತು ಕಮಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.