ಗುಲ್ಬರ್ಗಾ

114 ಮನೆಗಳ ಹಂಚಿಕೆಗೆ ಅನುಮೋದನೆ

Published On :

ಕನ್ನಡಪ್ರಭ ವಾರ್ತೆ, ಆಳಂದ, ಜು.9
ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಡಾ. ಅಂಬೇಡ್ಕರ್ ವಸತಿ ಯೋಜನೆಯಡಿಯಲ್ಲಿ ತಾಲೂಕಿನ 10 ಗ್ರಾಮ ಪಂಚಾಯತಿಗಳ ವ್ಯಾಪ್ತಿಯ ಪರಿಶಿಷ್ಟ ಜಾತಿ, ಪಂಗಡ ಫಲಾನುಭವಿಗಳಿಗೆ ಒಟ್ಟು 114 ಮನೆಗಳ ವಿತರಣೆಗೆ ಆಶ್ರಯ ಸಮಿತಿ ಅಧ್ಯಕ್ಷರೂ ಆದ ಶಾಸಕ ಬಿ.ಆರ್. ಪಾಟೀಲ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಜಾಗೃತಿ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಆಯ್ಕೆಯಾದ 10 ಗ್ರಾಮ ಪಂಚಾಯತಿಗಳ ಪೈಕಿ ಏಳು ಪಂಚಾಯತಿಯಲ್ಲಿ ಎಸ್ಸಿ ಮತ್ತು ಮೂರು ಪಂಚಾಯತಿಗಳಲ್ಲಿ ಎಸ್ಟಿ ಪಂಗಡದವರಿಗೆ ಮಂಜುರಾದ 114 ಮನೆಗಳು ವಿತರಣೆ ಕಾರ್ಯ ನಡೆಯಲಿದೆ.
ಎಸ್ಟಿ ಪಂಗಡಕ್ಕಾಗಿ ಮೀಸಲಾದ ತಡಕಲ್ 13, ಮಾಡಿಯಾಳ 13 ಮತ್ತು ಧಂಗಾಪುರ ಗ್ರಾಪಂ ವ್ಯಾಪ್ತಿಯ ಎಸ್ಟಿ ಸಮುದಾಯಕ್ಕೆ 12 ಮನೆಗಳು ನೀಡಲಾಯಿತು.
ಎಸ್ಸಿ ಸಮುದಾಯದವರಿಗಾಗಿ ನಿಂಬರಗಾ, ಜಿಡಗಾ, ರುದ್ರವಾಡಿ, ಕೊಡಲಂಗರಗಾ, ಭೂಸನೂರ, ಹಳ್ಳಿಸಲರಗರ ತಲಾ 11 ಮನೆಗಳು ಹಂಚಲಾಯಿತು. ತಡಕಲ್ ಗ್ರಾಪಂಗೆ 10 ಮನೆಗಳು ಹೀಗೆ 76 ಮನೆಗಳು ಹಂಚಿಕೆ ನಡೆಯಿತು.
ಇಒ ಅಬ್ದುಲ್ ಸಲಾಂ, ಜಿಪಂ ಸದಸ್ಯ ಹರ್ಷಾನಂದ ಗುತ್ತೇದಾರ, ಸಿದ್ದರಾಮ ಪ್ಯಾಟಿ, ಮಂಗಲಾ ಅರವಿಂದ ನರೋಣಿ, ಜಯಶ್ರೀ ಅಶೋಕ ಸಾವಳೇಶ್ವರ, ತಾಪಂ ಅಧ್ಯಕ್ಷೆ ಬಾಯಮ್ಮ ಮೋಹನಗೌಡ ಪಾಟೀಲ್, ಉಪಾಧ್ಯಕ್ಷ ಲಕ್ಷ್ಮಣ ಬೀಳಗಿ, ಸದಸ್ಯ ಮಲ್ಲಣ್ಣ ನಾಗೂರೆ, ಶರಣಗೌಡ ಪಾಟೀಲ್, ಆಕಾಶ ಪಾಟೀಲ್, ಸುಮಿತ್ರಾಬಾಯಿ ಎಸ್.ವಾಡೆ, ವ್ಯವಸ್ಥಾಪಕ ಬಸವರಾಜ ಪಾಟೀಲ್, ಯೋಜನಾಧಿಕಾರಿ ಗುರುನಾಥ ಗೌಡಪ್ಪನವರ್, ಅಧಿಕಾರಿಗಳು, ಸದಸ್ಯರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.