ಗುಲ್ಬರ್ಗಾ

ಯೋಗ್ಯ ದರದಲ್ಲಿ ಮರಳು ನೀಡಲು ಆಗ್ರಹ

Published On :

ಗುಲ್ಬರ್ಗ: ಮರಳು ಸಾಗಾಣಿಕೆ ವಾಹನ ಹಾಗೂ ಅಧಿಕಾರಿಗಳ ಮಧ್ಯೆ ಪರಸ್ಪರ ಸೌಹಾರ್ದತೆ ಮೂಡಿಸಿ ಗ್ರಾಹಕರಿಗೆ ಯೋಗ್ಯ ದರದಲ್ಲಿ ಮರಳು ಸಿಗುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಮಾಜವಾದಿ ಜನತಾ ಪಾರ್ಟಿ ಜಿಲ್ಲಾ ಘಟಕ ಆಗ್ರಹಿಸಿದೆ.
ಸರ್ಕಾರ ನೂತನ ಮರಳು ನೀತಿ ಜಾರಿ ಅನಷ್ಠಾನಕ್ಕೆ ಜಿಲ್ಲಾಡಳಿತ ಮರಳು ನೀತಿ ಅನ್ವಯ ನಾಗರಿಕರ ಪರ ಮರಳು ಕಲ್ಪಿಸುವಲ್ಲಿ ಅವೈಜ್ಞಾನಿಕ ನೀತಿ ಅನುಸರಿಸುತ್ತಿರುವುದು ಖಂಡನೀಯ. ಗುಲ್ಬರ್ಗ ಜಿಲ್ಲಾ ಮರಳು ನೀತಿ ಕಾನೂನು ಅನುಷ್ಠಾನ ಜಾರಿಯಲ್ಲಿ ಸಂಬಂಧಿಸಿದ ಅಧಿಕಾರಿ ವರ್ಗ ಹಾಗೂ ಮರಳು ಸಾಗಾಣಿಕೆ ವಾಹನದಾರರ ಮಧ್ಯೆ ಅಹಿತಕರ ಘಟನೆಗಳು ನಡೆಯುತ್ತಿರುವುದು ಹಾಗೂ ಮರಳು ಸಾಗಾಣಿಕೆ ವಾಹನದ ತನಿಖಾ ನೆಪದಲ್ಲಿ ಅಧಿಕಾರಿಗಳು ಸೇವೆ ಮನೋಭಾವ ಕೊರತೆ ಕಾರಣ ಎಂದು ಆರೋಪಿಸಿದೆ.
ನಗರಾದ್ಯಂತ ಮನೆ ಕಟ್ಟುತ್ತಿರುವ ಬಡ ಮಧ್ಯಮ ಬಡವರ ಮನೆ ಕನಸು ನನಸಾಗುವುದಕ್ಕೆ ಮರಳನ್ನು ನಿಗದಿತ ದರ ಪಟ್ಟಿ, ಸಾಗಾಣಿಕೆ ವೆಚ್ಚ ಮಾಡದೆ ಅವೈಜ್ಞಾನಿಕ ತನಿಖಾ ನೆಪದಲ್ಲಿ ಅಧಿಕಾರಿಗಳು ಹಾಗೂ ಮರಳು ಸಾಗಾಣಿಕೆ ವಾಹನಗಳ ಚಾಲಕ ಮಾಲಿಕರ ಮೇಲೆ ತಪ್ಪು ಕಲ್ಪನೆಯಿಂದ ಪರಸ್ವರ ವಾದ ವಿವಾದ, ಗೂಬೆ ಕೂರಿಸುವುದು ನಡೆಯುತ್ತಲಿದೆ.
 ಇವರ ಮಧ್ಯದಲ್ಲಿ ಮನೆ ಕಟ್ಟುತ್ತಿರುವ ಬಡ ಮಧ್ಯಮ ವರ್ಗಕ್ಕೆ ಮರಳು ಸೂಕ್ತ ಸಮಯದಲ್ಲಿ ದೊರೆಯದೆ ಪರದಾಡುತ್ತಿರುವುದು ಜಿಲ್ಲಾಡಳಿತದ ಗಮನಕ್ಕೆ ಬರುತ್ತಿಲ್ಲವೇ, ಇಂತಹ ಅಹಿತಕರ ಘಟನೆಯಿಂದ ಕಟ್ಟಡ ಕಾಮಗಾರಿಗಳು ಸ್ಥಗಿತಗೊಳ್ಳುತ್ತವೆ. ಕೂಲಿ ಕಾರ್ಮಿಕರಿಗೆ ಬದುಕು ಕೆಲಸ ಸಿಗದೆ ಸಹಸ್ರಾರು ಕೂಲಿ ಕಾರ್ಮಿಕರು ವಲಸೆ ಹೋಗುತ್ತಿದ್ದಾರೆಂದು ತಿಳಿಸಿದೆ.
ಈಗಲಾದರೂ ಸಂಬಂಧಿಸಿದ ಅಧಿಕಾರಿಗಳು, ತಹಸೀಲ್ದಾರರು, ಮರಳು ಸಾಗಾಣಿಕೆ ವಾಹನ ಮಾಲೀಕರುಗಳಿಗೆ, ಚಾಲಕರಿಗೆ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸೂಕ್ತ ಕ್ರಮ ಕೈಗೊಳ್ಳಬೇಕು. ಗ್ರಾಹಕರಿಗೆ ಯೋಗ್ಯ ದರದಲ್ಲಿ ಮರಳು ಸಿಗುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗೆ ಸಮಾಜವಾದಿ ಜನತಾ ಪಾರ್ಟಿ ಆಗ್ರಹಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.