ಗುಲ್ಬರ್ಗಾ

ನಾಪತ್ತೆಯಾಗಿದ್ದ ವಿದ್ಯಾರ್ಥಿ ಸಾವು, ಇನ್ನೊಬ್ಬನ ಸುಳಿವಿಲ್ಲ

Published On :

ಗುಲ್ಬರ್ಗ: ನಗರದ ಬ್ರಹ್ಮಪುರ ಬಡಾವಣೆಯ ದತ್ತಮಂದಿರ ಬಳಿಯಿರುವ ಸಂಗಮೇಶ್ವರ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿರುವ ಜಗನ್ನಾಥ ತಂದೆ ಗುರುಪಾದಪ್ಪ ಹಾಗೂ ರಾಕೇಶ ತಂದೆ ಕಲ್ಯಾಣ ನಾಗೂರು ಗ್ರಾಮದ ಈ ಇಬ್ಬರು ವಿದ್ಯಾರ್ಥಿಗಳು ನಾಪತ್ತೆಯಾಗಿದ್ದಾರೆ.
ಈ ಇಬ್ಬರು ವಿದ್ಯಾರ್ಥಿಗಳು ಗುಲ್ಬರ್ಗ ತಾಲೂಕಿನ ಸರ್ಕಾರಿ ಬಾಲಕರ ವಸತಿ ನಿಲಯ(ಎಚ್.ಎಸ್.)ದಲ್ಲಿ ವಾಸವಾಗಿದ್ದರು. ಇಬ್ಬರು ಜು.12ರಂದು ವಸತಿ ನಿಲಯದಿಂದ ಬೆಳಗ್ಗೆ 8.30ಕ್ಕೆ ಉಪಾಹಾರ ಮಾಡಿಕೊಂಡು ಹೋರಹೋಗಿದ್ದಾರೆ. ಅಂದು ರಾಕೇಶ ತಂದೆ ಕಲ್ಯಾಣ ಈತನು ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ರೇಲ್ವೆ ಪೊಲೀಸರಿಂದ ತಿಳಿದುಬಂದಿದೆ.
ನಂತರ ಜಗನ್ನಾಥನು ಸಂಜೆ ವಸತಿ ನಿಲಯದಲ್ಲಿ ಊಟಕ್ಕೆ ಹಾಜರಾಗದೇ ಇರುವುದರಿಂದ ಗುಲ್ಬರ್ಗ ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಹಾಗೂ ವಾರ್ಡನ್ ಅವರು ಶಾಲೆಗೆ ಭೇಟಿ ನೀಡಿ ವಿಚಾರಿಸಲಾಗಿ ಸದರಿ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಿರುವುದಿಲ್ಲವೆಂದು ತಿಳಿಸಿದ್ದಾರೆ.
ಕುಮಾರ ಜಗನ್ನಾಥ ತಂದೆ ಗುರುಪಾದಪ್ಪ ಎಂಬ ವಿದ್ಯಾರ್ಥಿ ಇದುವರೆಗೆ ವಸತಿ ನಿಲಯಕ್ಕೆ ಹಾಜರಾಗಿಲ್ಲ. ಈತನ ಸುಳಿವು ಸಿಕ್ಕಲ್ಲಿ ಕೂಡಲೇ ಗುಲ್ಬರ್ಗ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಕಚೇರಿಗೆ ಇಲ್ಲವೇ ಬ್ರಹ್ಮಪುರ ಬಡಾವಣೆಯಲ್ಲಿರುವ ಸಂಗಮೇಶ್ವರ ಪ್ರೌಢಶಾಲೆಗೆ ತಿಳಿಸಬೇಕೆಂದು ಕೋರಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.