ನೌಕರರ ಸಂಘಕ್ಕೆ ಅವಿರೋಧ ಆಯ್ಕೆ
ಯಾದಗಿರಿ: ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಗೆ ಮುಂದಿನ ಅವಧಿಗಾಗಿ ವಿವಿಧ ಇಲಾಖೆಗಳ ನೌಕರರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಯಾಮರೆಡ್ಡಿ ಜಲಾನಯನ, ನಿಸಾರ ಅಹ್ಮದ್ ಪಶುಸಂಗೋಪನಾ ಇಲಾಖೆ, ರಾಜಶೇಖರ ಪಾಟೀಲ್ ಕಂದಾಯ, ಕರಿಬಸ್ಸಯ್ಯ ಕಂದಾಯ, ಅಮಜದ್ ಖಾನ್ ಕಂದಾಯ, ಅಮರಣ್ಣ ಆಹಾರ ಇಲಾಖೆ, ರಾಘವೇಂದ್ರ ಕುಲಕರ್ಣಿ ಸಾಂಖ್ಯಿಕ ಇಲಾಖೆ, ಅಬ್ದುಲ್ ನಾಸೀರ್ ವಾಣಿಜ್ಯ ತೆರಿಗೆ, ನೀಲಮ್ಮ ವಾಣಿಜ್ಯ ತೆರಿಗೆ, ಮಲ್ಲಿಕಾರ್ಜುನ ಸಹಕಾರ ಇಲಾಖೆ, ಆರ್. ವೀರಣ್ಣ ಲೆಕ್ಕ ಪರಿಶೋಧನಾ ಇಲಾಖೆ, ರಂಗಪ್ಪ ನಾಟೇಕರ್ ಪಂರಾ ಎಂಜಿನಿಯರಿಂಗ್ ಇಲಾಖೆ, ಸತೀಶ್ಕುಮಾರ ಜಿಪಂ, ಪಾಂಡುರಂಗ ಅಬಕಾರಿ ಇಲಾಖೆ, ಬಸವರಾಜ ಬಿಸಿಎಂ ಇಲಾಖೆ, ಚಂದ್ರಕಾಂತ ಚಲುವಾದಿ ಸಿಡಿಪಿಒ, ಚನ್ನವೀರಪ್ಪ ಅರಣ್ಯ ಇಲಾಖೆ, ಮಹಿಪಾಲ ರೆಡ್ಡಿ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ಪರಮರೆಡ್ಡಿ ಆರೋಗ್ಯ ಕುಟುಂಬ ಕಲ್ಯಾಣ, ಹಣಮಂತರಾವ್ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ಡಾ. ಪ್ರಕಾಶ ರಾಜಾಪೂರ ಆಯುಷ್ ಇಲಾಖೆ, ಶರಣಪ್ಪ ತೋಟಗಾರಿಕೆ ಇಲಾಖೆ, ಸಲೀಮ್ ಕೈಗಾರಿಕೆ ಇಲಾಖೆ, ಡಿ.ಕೆ. ರಾಜರತ್ನ ವಾರ್ತಾ ಇಲಾಖೆ, ಬಾಲಕೃಷ್ಣ ಕೆಜಿಐಡಿ, ಶಂಕರಲಿಂಗಪ್ಪ ಗೂಳಿ ಕಿರಿಯ ಕಾಲೇಜು, ಶರಣಬಸಪ್ಪ ರಾಯಕೋಟಿ ಪದವಿ ಕಾಲೇಜು, ರಾಚನಗೌಡ ಎಪಿಎಂಸಿ, ನಾಗಪ್ಪ ಸಾರಿಗೆ ಇಲಾಖೆ, ಬಸವರಾಜ ಚಂದಾಪೂರ ಪೊಲೀಸ್ ಇಲಾಖೆ, ಬಿ. ಸಾಬರೆಡ್ಡಿ ರೇಷ್ಮೆ ಇಲಾಖೆ, ಬಸವರಾಜ ಲೆಕ್ಕ ಪತ್ರ ಇಲಾಖೆ, ಈಶ್ವರಚಂದ್ರ ವಿದ್ಯಾಸಾಗರ್ ಭೂಮಾಪನ ಇಲಾಖೆ, ಬಸವರಾಜ ಎಕ್ಕೆಳ್ಳಿ ಕಾರ್ಮಿಕ ಇಲಾಖೆ, ಲಿಯಾಕತ್ ಜಿಲ್ಲಾ ತರಬೇತಿ, ಬಸ್ಸನಗೌಡ ನ್ಯಾಯಾಂಗ ಇಲಾಖೆ, ರಾವುತಪ್ಪ ನ್ಯಾಯಾಂಗ ಇಲಾಖೆ, ಮಹ್ಮದ ಸಲೀಂ ನೀರಾವರಿ ಇಲಾಖೆಗೆ ಅವಿರೋಧ ಆಯ್ಕೆಯಾಗಿದ್ದಾರೆ. ಕೃಷಿ, ಖಜಾನೆ, ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ, ಜಿಲ್ಲಾ ಆಸ್ಪತ್ರೆಗಳ 12 ಸ್ಥಾನಗಳಿಗೆ ಜು. 22ರಂದು ಚುನಾವಣೆ ನಡೆಯಲಿದೆ ಎಂದು ಬಶೀರ ಅಹ್ಮದ್ ತಿಳಿಸಿದ್ದಾರೆ.
ಜೀತದಾಳು ಕಾರ್ಯಾಗಾರ ನಡೆಸಲು ಒತ್ತಾಯ
ಸುರಪುರ: ಜೀತ ಕಾನೂನು ಅರಿವು ಮೂಡಿಸುವ ಉದ್ದೇಶದಿಂದ ಜೀತದಾಳುಗಳ ಕಾರ್ಯಾಗಾರ ಹಮ್ಮಿಕೊಳ್ಳಬೇಕೆಂದು ಕರ್ನಾಟಕ ಜೀತದಾಳು ಮತ್ತು ಕೃಷಿ ಕೂಲಿಕಾರ್ಮಿಕರ ಒಕ್ಕೂಟದ ತಾಲೂಕು ಘಟಕ ಆಗ್ರಹಿಸಿದೆ. ತಾಲೂಕಿನ ಕೂಡಲಗಿ-15, ರಾಜನಕೊಳ್ಳೂರು-10, ಮಾಳನೂರು-4, ಯಾಳಗಿ-10, ಕಾಮನಟಗಿ-10 ಸೇರಿದಂತೆ ಒಟ್ಟು 70 ಜೀತದಾಳುಗಳು ತಾಲೂಕಿನಲ್ಲಿ ಇದ್ದಾರೆ. ಸ್ಥಳೀಯ ಜೀವಿಕಾ ಸಂಚಾಲಕರಲ್ಲಿ ಈ ಕುರಿತು ಮಾಹಿತಿ ಇದೆ ಎಂದು ತಹಸೀಲ್ದಾರ್ಗೆ ಪತ್ರದಲ್ಲಿ ತಿಳಿಸಿದೆ. ಜೀತದಾಳುಗಳ ಮೇಲಿನ ಮಾನವೀಯತೆ ದೃಷ್ಟಿಯಿಂದ ತಕ್ಷಣ ಕಾರ್ಯಾಗಾರ ಮಾಡಬೇಕು ಮತ್ತು ಜೀತದಾಳುಗಳಿಗೆ ಪುನರ್ವಸತಿ ಕಲ್ಪಿಸಬೇಕು ಎಂದು ಒಕ್ಕೂಟದ ಅಧ್ಯಕ್ಷ ಮರಿಲಿಂಗಪ್ಪ ಗುಳಬಾಳ ತಹಸೀಲ್ದಾರ್ರನ್ನು ಒತ್ತಾಯಿಸಿದ್ದಾರೆ.
ದ್ಯಾಮನಾಳ ಗ್ರಾಮದ ಸಮಸ್ಯೆಗೆ ಸ್ಪಂದಿಸಲು ಶಾಸಕರಿಗೆ ಮನವಿ
ಹುಣಸಗಿ: ಇಲ್ಲಿಗೆ ಸಮೀಪದ ದ್ಯಾಮನಹಾಳ ಗ್ರಾಮದ ಯುವಕರು ಬೆಂಗಳೂರಿನಲ್ಲಿ ಶಾಸಕ ರಾಜಾ ವೆಂಕಟಪ್ಪನಾಯಕ ಅವರ ನಿವಾಸಕ್ಕೆ ಈಚೆಗೆ ಭೇಟಿ ನೀಡಿ, ಅವರನ್ನು ಸನ್ಮಾನಿಸಿದರು. ದ್ಯಾಮನಹಾಳ ಗ್ರಾಮಗಳಿಗೆ ಬೇಕಾಗುವ ಮೂಲಭೂತ ಸೌಕರ್ಯಗಳ ಬೇಡಿಕೆಗಳನ್ನು ಅವರು ಈ ಸಂದರ್ಭದಲ್ಲಿ ಶಾಸಕರಿಗೆ ಸಲ್ಲಿಸಿದರು. ಗ್ರಾಮಕ್ಕೆ ಶೌಚಾಲಯ, ಸಿಸಿ ರಸ್ತೆ, ಕಲ್ಯಾಣ ಮಂಟಪ, ಎಸ್ಸಿ ಓಣಿಗಾಗಿ ಮಾರ್ಗ ಸೇರಿದಂತೆ ಹಲವಾರು ಬೇಡಿಕೆಗಳನ್ನು ಶಾಸಕ ನಾಯಕರ ಮುಂದಿಟ್ಟರು. ಸನ್ಮಾನ ಸ್ವೀಕರಿಸಿದ ಶಾಸಕ ರಾಜಾ ವೆಂಕಟಪ್ಪನಾಯಕ, ನಿಮ್ಮ ಎಲ್ಲಾ ಬೇಡಿಕೆಗಳಿಗೆ ಸ್ಪಂದಿಸಿ ಗ್ರಾಮಕ್ಕೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಹಣಮಂತ್ರಾಯ ಗುಜ್ಜಲ್, ಬಸವರಾಜ ಡಂಬಳ, ಶ್ರೀಶೈಲ ಬೈಲಕುಂಟಿ, ಸಂಗಪ್ಪ ಬಾನಿ, ನಿಂಗಪ್ಪ ಚಿಂಚೋಡಿ, ವೆಂಕಟೇಶ ಕಕ್ಕೇರಿ, ದೇವರಾಜ ಪೊಲೀಸ್ ಪಾಟೀಲ್, ಮುತ್ತು ಬಾಗೂರು ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

