ಗುಲ್ಬರ್ಗಾ

ಜಿಲ್ಲೆಯಲ್ಲಿ ಶೇ.77ರಷ್ಟು ಬಿತ್ತನೆ

Published On :

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜು.24
ಜಿಲ್ಲೆಯಲ್ಲಿ 2013-14ರ ಮುಂಗಾರು ಹಂಗಾಮಿಗೆ ನೀರಾವರಿ 54750 ಹೆಕ್ಟೇರ್ ಹಾಗೂ ಕುಷ್ಕಿ 516450 ಹೆಕ್ಟರ್ ಸೇರಿದಂತೆ, ಒಟ್ಟು 571200 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹಮ್ಮಿಕೊಳ್ಳಲಾಗಿದೆ. ಈ ಪೈಕಿ ಇಲ್ಲಿವರೆಗೆ 42642 ಹೆಕ್ಟೇರ್ ನೀರಾವರಿ ಹಾಗೂ 400000 ಹೆಕ್ಟೇರ್ ಖುಷ್ಕಿ ಪ್ರದೇಶ ಸೇರಿದಂತೆ ಒಟ್ಟು 442642 ಹೆಕ್ಟರ್ ಪ್ರದೇಶದಲ್ಲಿ ಅಂದರೆ 77 ಪ್ರತಿಶತದಷ್ಟು ಬಿತ್ತನೆಯಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜ ಶಂಕರಶೆಟ್ಟಿ ಮಾಲಿಪಾಟೀಲ್ ತಿಳಿಸಿದರು.
ಅವರು ಬುಧವಾರ ಜಿಪಂ ಹಳೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಸಭೆ  ಅಧ್ಯಕ್ಷತೆ ವಹಿಸಿ, ಚಿಂಚೋಳಿಯಲ್ಲಿ 70745 ಹೆಕ್ಟೇರ್ ಪ್ರದೇಶದಲ್ಲಿ (100ರ್), ಗುಲ್ಬರ್ಗ 80184 ಹೆಕ್ಟೇರ್ ಪ್ರದೇಶದಲ್ಲಿ (86ರ್), ಆಳಂದ 67113 ಹೆಕ್ಟೇರ್ ಪ್ರದೇಶ (78ರ್), ಸೇಡಂ 41423 ಹೆಕ್ಟೇರ್ ಪ್ರದೇಶ (74ರ್), ಚಿತ್ತಾಪುರ 57635 ಹೆಕ್ಟೇರ್ ಪ್ರದೇಶ(74ರ್), ಜೇವರ್ಗಿ 75777 ಹೆಕ್ಟೇರ್ ಪ್ರದೇಶ (68ರ್) ಮತ್ತು ಅಫಜಲ್ಪುರ 49765 ಹೆಕ್ಟೇರ್ ಪ್ರದೇಶ (64ರ್)ದಲ್ಲಿ ಬಿತ್ತನೆಯಾಗಿದೆ ಎಂದರು.
ವಿವರ: ಜಿಲ್ಲೆಯಾದ್ಯಂತ ಜುಲೈನಲ್ಲಿ ಒಳ್ಳೆಯ ಮಳೆಯಾಗಿದ್ದು, ವಾಡಿಕೆ ಮಳೆ 159.01 ಇದ್ದು ಈ ಪೈಕಿ 176.93 ಮಿ.ಮೀ. ಮಳೆಯಾದ ವರದಿಯಾಗಿದೆ. ಚಿತ್ತಾಪುರದಲ್ಲಿ 149 ಪ್ರತಿಶತ ಅತೀ ಹೆಚ್ಚು ಮಳೆಯಾದರೆ ಜೇವರ್ಗಿಯಲ್ಲಿ ಅತೀ ಕಡಿಮೆ ಎಂದರೆ 82 ಪ್ರತಿಶತ ಮಳೆಯಾಗಿದೆ. ಉಳಿದಂತೆ ಸೇಡಂ-114 ಪ್ರತಿಶತ, ಗುಲ್ಬರ್ಗ-114 ಪ್ರತಿಶತ, ಚಿಂಚೋಳಿ-108 ಪ್ರತಿಶತ, ಅಫಜಲ್ಪುರ -108 ಪ್ರತಿಶತ ಹಾಗೂ ಆಳಂದದಲ್ಲಿ 103 ಪ್ರತಿಶತ ಮಳೆಯಾಗಿದೆ ಎಂದು ತಿಳಿಸಿದರು.
ಚಿತ್ತಾಪುರ ತಾಲೂಕಿನಲ್ಲಿ ಕಪ್ಪು ಮಣ್ಣು ಹೊಂದಿದ ಸಮತಟ್ಟಾದ ಭೂಮಿ ಇರುವುದರಿಂದ ಬಿದ್ದ ಮಳೆಯು ಹರಿದು ಹೋಗದೆ ಹೊಲದಲ್ಲಿ ನಿಂತು ಸದ್ಯದ ಬೆಳೆಯ ಬೇರುಗಳು ಕೊಳೆಯುವ ಪರಿಸ್ಥಿತಿಯಲ್ಲಿವೆ. ಇದನ್ನು ನಿವಾರಿಸಲು ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಕೃಷಿ ಇಲಾಖೆಯು ರೈತರಿಗೆ ಮಾರ್ಗದರ್ಶನ ಮಾಡುವಂತೆ ಸಲಹೆ ನೀಡಿದರು.
ಗೊಬ್ಬರ ಪೂರೈಕೆ: ಜಿಲ್ಲೆಯಲ್ಲಿ ಕಬ್ಬು ಮತ್ತು ಸೋಯಾಬಿನ್ ಹೆಚ್ಚಿನ ಪ್ರಮಾಣದಲ್ಲಿ ಬೆಳೆದಿರುವುದರಿಂದ ಈ ಕ್ಷೇತ್ರಕ್ಕೆ ಬೇಕಾಗುವ ಯೂರಿಯಾ ರಸಗೊಬ್ಬರದ ದಾಸ್ತಾನನ್ನು ಸಮರ್ಪಕವಾಗಿ ಮಾಡಿಕೊಳ್ಳುವಂತೆ ತಿಳಿಸಿದರು.
ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಸದಸ್ಯರಾದ ರಮೇಶ ಯರಗೋಳ, ಹೇಮಾವತಿ ನಿಂಗಣ್ಣ, ಗುರುಲಿಂಗಪ್ಪ ಗೌಡ, ಸೌಮ್ಯ ರಾಮಚಂದ್ರ ಪಾಟೀಲ್ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯ ಚರ್ಚೆಯಲ್ಲಿ ಭಾಗವಹಿಸಿದ್ದರು.
ಬಿತ್ತನೆ ಆರಂಭ(ಅಫಜಲ್ಪುರ ವರದಿ): ಮಳೆಗಾಲ ಆರಂಭವಾಗಿ ಒಂದೂವರೆ ತಿಂಗಳು ಕಳೆಯುತ್ತಾ ಬಂದರೂ, ತಾಲೂಕಿನಲ್ಲಿ ಸಮರ್ಪಕವಾಗಿ ಮಳೆಯಾಗದೆ ಇರುವುದರಿಂದ ರೈತರು ಅರೆಬರೆ ತೇವಾಂಶದಲ್ಲಿಯೇ ಮುಂಗಾರು ಬಿತ್ತನೆ ಪ್ರಾರಂಭಿಸಿದ್ದಾರೆ. ಅಫಜಲ್ಪುರದ ನಾಲ್ಕು ಹೋಬಳಿಗಳಲ್ಲಿ ಮಳೆಯಾಗಿಲ್ಲ. ಅತನೂರ ವಲಯದಲ್ಲಿ ಸ್ವಲ್ಪ ಮಳೆಯಾಗಿದು,್ದ ರೈತರು ಮುಂಗಾರು ಬಿತ್ತನೆ ಮಾಡಿದ್ದಾರೆ. ಆದರೆ ಮಳೆ ಬಾರದೇ ಇರುವುದರಿಂದ ಬಿತ್ತಿದ ಬೆಳೆಗಳು ಬಾಡುತ್ತಿವೆ ಎಂದು ಸಹಾಯಕ ಕೃಷಿ ನಿರ್ದೇಶಕ ಈಶ್ವರ ಬ್ಯಾಡಗಿ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.