ಗುಲ್ಬರ್ಗಾ

ಹಡಪದ ಅಪ್ಪಣ್ಣ ಜಯಂತಿ

Published On :

ಕಮಲನಗರ: ಔರಾದ್ ತಾಲೂಕಿನ ಕಮಲನಗರದಲ್ಲಿ ಹಡಪದ ಅಪ್ಪಣ್ಣ ಜಯಂತಿ ಆಚರಿಸಲಾಯಿತು. ಜಯಂತ್ಯೋತ್ಸವ ಕಾರ್ಯಕ್ರಮದ ನಿಮಿತ್ತ ಹಡಪದ ಅಪ್ಪಣ್ಣ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಹಾಪುರುಷರು ತೋರಿಸಿದ ಮಾರ್ಗದಲ್ಲಿ ನಡೆದು ರಾಷ್ಟ್ರ ಹಾಗೂ ಸಮಾಜದ ಅಭಿವೃದ್ಧಿಗಾಗಿ ಕೆಲಸ ಮಾಡಬೇಕೆಂದು ಕಮಲನಗರ ವಲಯ ಅಧ್ಯಕ್ಷ ಅಶೋಕ ಹಡಪದ ಸಮಾಜದ ಜನರಲ್ಲಿ ಮನವಿ ಮಾಡಿದರು. ಉಪಾಧ್ಯಕ್ಷ ರಮೇಶ ಹಡಪದ, ನಾಗನಾಥ, ಗಣಪತಿ, ಅನೀಲ್ ಮಾನೆ, ಬಾಲಾಜಿ, ಉಮಾಕಾಂತ, ಸಿದ್ದು ಹಡಪದ, ಶಿವಾಜಿ ಸೂರ್ಯವಂಶಿ ಮತ್ತಿತರರು ಹಾಜರಿದ್ದರು.

ರೇಕುಳಗಿ:  28ರಂದು ಧಮ್ಮ ಪ್ರವಚನ
ಬೀದರ್ ತಾಲೂಕಿನ ರೇಕುಳಗಿ ಮೌಂಟ್‌ನ ಅನಾಥ ಪಿಂಡಕ ಬುದ್ಧ ವಿಹಾರದಲ್ಲಿ  ಜು.28ರಂದು ಪುಣ್ಯಾನುಮೋದನೆ, ಧಮ್ಮ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂದು ಬೆ.10ಕ್ಕೆ ಮೌಂಟ್‌ನ ಪ್ರಧಾನ ಭಿಕ್ಕುಗಳಾದ ಮಾಹಾಕಾಶಪ್ ಮಹಾಥೇರೋ ಅವರ ಮೂರನೇ ಪುಣ್ಯಾನುಮೋದನೆ ಜರುಗಲಿದೆ. ಈ ನಿಮತ್ತ ವಿಹಾರದಲ್ಲಿ ಧಮ್ಮ ಪ್ರವಚನ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಭಿಕ್ಕು ಉಪಗುಪ್ತ ಮಹಾಥೇರೂ ಸಂಘದ ಭಿಕ್ಕುಗಳು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೌದ್ಧ ಉಪಾಸಕರು, ಉಪಾಸಕಿಯರು ಭಾಗವಹಿಸಬೇಕೆಂದು ಭಿಕ್ಕು ರೇವತ್, ಭಿಕ್ಕು ಧರ್ಮಪಾಲ್, ಭಿಕ್ಕುಣಿ ಮಹಾಪ್ರಜಾಪತಿ, ಭಿಕ್ಕುಣಿ ಚಾರುಶೀಲಾ ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.