31ರಂದು ಮೂಲವ್ಯಾಧಿ ಉಚಿತ ತಪಾಸಣೆ
ಗುಲ್ಬರ್ಗ: ಸ್ಥಳೀಯ ಸೇಡಂ ರಸ್ತೆಯ ಭಾವಸಾರ ನಗರಲ್ಲಿರುವ ಹಿಂಗುಲಾಂಬಿಕ ಶಿಕ್ಷಣ ಸಂಸ್ಥೆಯ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಯ ವತಿಯಿಂದ ಜು.31 ರಂದು ಬೆಳಿಗ್ಗೆ 10 ರಿಂದ 1ರವರೆಗೆ ಮೂಲವ್ಯಾದಿ ಮತ್ತು ಗುದ ಸಂಬಂಧಿ ರೋಗಗಳ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಈ ಶಿಬಿರದಲ್ಲಿ ಆಯುರ್ವೇದ ಶಸ್ತ್ರ ಚಿಕಿತ್ಸಾ ತಜ್ಞರಾದ ಡಾ. ರಾಮರಾವ ದೇಶಮುಖ, ಡಾ. ಶಂಭುಲಿಂಗ ಎಸ್. ಮನಗೂಳಿ, ಡಾ. ಮಹೇಶ ಭಾಲ್ಕಿ ಸೇರಿದಂತೆ ಇತರ ವೈದ್ಯ ವೃಂದವು ಪಾಲ್ಗೊಂಡು ತಪಾಸಣೆ ಮತ್ತು ಸಲಹೆ ಸೂಚನೆಗಳನ್ನು ನೀಡಲಿದ್ದಾರೆ. ಹೆಚ್ಚಿನ ಮಾಹಿತಿಗೆ ಡಾ. ಮಹೇಶ ಭಾಲ್ಕಿ- 9902345619 ಮತ್ತು ಡಾ. ಶಂಭುಲಿಂಗ ಎಸ್. ಮನಗೂಳಿ- 08095239229ಗೆ ಸಂಪರ್ಕಿಸಲು ಕೋರಲಾಗಿದೆ.
ಡೊನೇಷನ್: 31ರಂದು ಸಮಾವೇಶ
ಗುಲ್ಬರ್ಗ: ಶಾಲಾ ಕಾಲೇಜುಗಳಲ್ಲಿ ಹೆಚ್ಚುತ್ತಿರುವ ಶುಲ್ಕ ಹೆಚ್ಚಳ, ಡೋನೇಷನ್ ಹಾವಳಿಯನ್ನು ತಡೆಗಟ್ಟಲು ಒತ್ತಾಯಿಸಿ ಎಐಡಿಎಸ್ಒ ರಾಜ್ಯ ಸಮಿತಿ ಜು.31 ರಂದು ಬೆಂಗಳೂರಿನ ಟೌನ್ಹಾಲ್ನಲ್ಲಿ ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶ ಹಮ್ಮಿಕೊಂಡಿದೆ. ಬೆಂಗಳೂರಿಗೆ ಬರುವ ವಿದ್ಯಾರ್ಥಿಗಳು 227361, 9740561495, 9945375267, 9742609328ಗೆ ಸಂಪರ್ಕಿಸಿ. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಬೇಕೆಂದು ಜಿಲ್ಲಾ ಅಧ್ಯಕ್ಷ ಜಗನ್ನಾಥ ಎಸ್.ಎಚ್, ಎಸ್.ಎಂ. ಶರ್ಮಾ ಕೋರಿದ್ದಾರೆ.
ಆಜಾದ್, ತಿಲಕರ ಜನ್ಮದಿನಾಚರಣೆ
ಸೇಡಂ: ಇಲ್ಲಿನ ಮಾತೃಛಾಯಾ ಪ್ರೌಢ ಶಾಲೆಯಲ್ಲಿ ಕ್ರಾಂತಿಕಾರಿ ಚಂದ್ರಶೇಖರ ಆಜಾದ್ ಹಾಗೂ ಬಾಲಗಂಗಾಧರ ತಿಲಕರ ಜನ್ಮದಿನಾಚರಣೆ ಕಾರ್ಯಕ್ರಮ ನಡೆಯಿತು. ಹಿಂದಿ ಶಿಕ್ಷಕಿ ಸುವರ್ಣ ದೊಡ್ಮನಿ ಮಾತನಾಡಿ, ತಿಲಕರು ಭಾರತ ಸ್ವಾತಂತ್ರ್ಯ ಹೋರಾಟ ಚಳವಳಿಯ ಪ್ರಥಮ ಜನಪ್ರಿಯ ನಾಯಕರಾಗಿದ್ದರು ಎಂದರು. ಕ್ರಾಂತಿಕಾರಿ ಚಂದ್ರಶೇಖರ ಆಜಾದ್ ಕುರಿತು ಮಾತೃಛಾಯಾ ಪ್ರೌಢ ಶಾಲೆಯ ಶಿಕ್ಷಕಿ ಅಣವೀರಮ್ಮ ಸಂಗಾ ಮಾತನಾಡಿದರು. ಮುಖ್ಯಗುರು ಬಸವರಾಜ ಮಳಗಿ ಮಾತನಾಡಿ, ಉತ್ತಮ ರೀತಿಯಲ್ಲಿ ಬದುಕು ನಡೆಸಿ ದೇಶ ರಕ್ಷಣೆಗೆ ಶ್ರಮಿಸೋಣ ಎಂದರು. ಭುವನೇಶ್ವರಿ ಕಾರ್ಯಕ್ರಮ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

