ಮುನ್ನಹಳ್ಳಿಯಲ್ಲಿ ಶರಣ ಸಂಗಮ
ಆಳಂದ: ಬಸವಾದಿ ಶರಣರ ತತ್ವ ಆಚರಣೆಯಿಂದ ಮಾನವರ ಎಲ್ಲ ಸಮಸ್ಯೆಗಳಿಗೆ ಪರಿಹಾರವಿದೆ. ಸಮಾಜ ಪರಿವರ್ತನೆ ಶಕ್ತಿಯಿದೆ ಎಂದು ಉಸ್ತುರಿ- ಧುತ್ತರಗಾಂವ ಮಠದ ವಿಶ್ವನಾಥ ಕೋರಣೇಶ್ವರ ಸ್ವಾಮೀಜಿ ಹೇಳಿದರು.
ತಾಲೂಕಿನ ಮುನ್ನಹಳ್ಳಿ ಗ್ರಾಮದ ಬಸವ ಕೇಂದ್ರ ಆಶ್ರಯದಲ್ಲಿ ಶಿವಮ್ಮ ಸಿದ್ರಾಮಪ್ಪ ವಾಲಿ ಅವರು ತಮ್ಮ ಮೊಮ್ಮಗಳು ಸಹನಾ ಹುಟ್ಟುಹಬ್ಬದ ಪ್ರಯುಕ್ತ ಏರ್ಪಡಿಸಿದ್ದ ಶರಣ ಸಂಗಮ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಭೂಸನೂರು ವಿರಕ್ತ ಮಠದ ಶರಣಬಸವ ದೇವರು ಆಶೀರ್ವಚನ ನೀಡಿದರು. ಬಸವ ಕೇಂದ್ರ ಅಧ್ಯಕ್ಷ ಬಸವ ರಾಜೇಂದ್ರ ಗುಂಡೆ ತಡಕಲ್, ಶಾಸಕ ಬಿ.ಆರ್. ಪಾಟೀಲ್ ಸೇರಿ ಗಣ್ಯರಿಗೆ ಸನ್ಮಾನಿಸಲಾಯಿತು. ಡಿಸಿಸಿ ಬ್ಯಾಂಕ್ ನಿರ್ದೇಶಕ ಬಸವರಾಜ ವಾಲಿ, ಬಾಬುರಾವ ಮಡ್ಡೆ, ಮಲ್ಲಿನಾಥ ಪರೇಣಿ, ಶಿವುಪುತ್ರಪ್ಪ ಪಾಟೀಲ್ ಮುನ್ನಹಳ್ಳಿ, ಪತ್ರಕರ್ತ ಮಹಾದೇವ ವಡಗಾಂವ, ಚಿನ್ನ ವ್ಯಾಪಾರಿ ಸಂಘದ ಅಧ್ಯಕ್ಷ ರಾಜು ಧನ್ನಾ, ಉಪಾಧ್ಯಕ್ಷ ಮನೋಜ ಶಹಾ, ವಿ.ಡಿ. ಪಾಟೀಲ್, ಸಂಪತಕುಮಾರ್ ವೇದಪಾಠಕ, ಪಂಡಿತರಾವ ಬಳಬಟ್ಟಿ, ಚಂದ್ರಕಾಂತ ಘೋಡಕೆ, ಸುನೀಲ್ ಸಾವಳೇಶ್ವರ, ಶಾಂತಿನಾಥ ಪಂಡಿತ, ಸ್ವಾಮಣ್ಣ ಬೆಳ್ಳೆ, ಅಣ್ಣರಾವ ಬುಜುರ್ಕೆ, ವೀರಭದ್ರಪ್ಪ ವಾಲಿ, ಬಸವರಾಜ ಪಾಟೀಲ್, ಡಾ. ವೆಂಕಟ್, ಸಾಹಿತಿ ರಾಜೇಂದ್ರ ಝಳಕಿ ಮುಂತಾದವರು ಉಪಸ್ಥಿತರಿದ್ದರು. ಮುನ್ನಹಳ್ಳಿ ಮಠದ ಕರಬಸಯ್ಯ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಗಜೇಶ ಮಸಣ್ಣಯ್ಯ ಟ್ರಸ್ಟ್ ಕಮಿಟಿ ಅಧ್ಯಕ್ಷ ವೀರಭದ್ರಪ್ಪ ಜವಳಿ ಅಧ್ಯಕ್ಷತೆ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

